For the best experience, open
https://m.suddione.com
on your mobile browser.
Advertisement

ಪದೇ ಪದೇ ಬಾಯಾರಿಕೆಯಾದರೂ ಶುಗರ್ ಇರಬಹುದು..!

05:55 AM Dec 16, 2023 IST | suddionenews
ಪದೇ ಪದೇ ಬಾಯಾರಿಕೆಯಾದರೂ ಶುಗರ್ ಇರಬಹುದು
Advertisement

Advertisement

ಮನುಷ್ಯನ ಜೀವನ ಶೈಲಿ ಬದಲಾದಂತೆ ಆರೋಗ್ಯದ ವಿಚಾರದಲ್ಲೂ ಸಾಕಷ್ಟು ಬದಲಾವಣೆಯಾಗಿದೆ. ಅದರಲ್ಲೂ ಅಂದಿನ ಕಾಲದ ಅಪರೂಪದ ಕಾಯಿಲೆಗಳೆಲ್ಲಾ ಇಂದಿಗೆ ನಾರ್ಮಲ್ ಕಾಯಿಲೆಗಳಾಗಿ ಬಿಟ್ಟಿವೆ. ಅದರಲ್ಲಿ ಶುಗರ್ ಕೂಡ ಒಂದು. ಇತ್ತಿಚೆಗಂತು ಕೊಂಚ ವಯಸ್ಸಾದ ಯಾರನ್ನೇ ಕೇಳಿದರೂ ಶುಗರ್ ಇದೆ‌ ಎಂದೇ ಉತ್ತರ ಕೊಡುತ್ತಾರೆ. ಶುಗರ್ ಬರಯವುದಕ್ಕೂ ಮುನ್ನ ಅದರ ಲಕ್ಷಣಗಳು ನಮ್ಮನ್ನು ಕಾಡುತ್ತವೆ. ಆಗಲೇ ಎಚ್ಚರವಹಿಸಬೇಕಾಗುತ್ತದೆ.

ಆರೋಗ್ಯವಂತ ವ್ಯಕ್ತಿ ಸಾಮಾನ್ಯವಾಗಿ ದಿನಕ್ಕೆ 3ರಿಂದ 4 ಲೀ ನಷ್ಟು ನೀರು ಕುಡಿಯುತ್ತಾನೆ. ಇದಕ್ಕಿಂತ ಕಡಿಮೆ ನೀರು ಕುಡಿಯುವುದು ಕೂಡಾ ಸರಿಯಲ್ಲ. ಇದರಿಂದ ದೇಹದಲ್ಲಿ ನೀರಿ ಅಂಶ ಕಡಿಮೆಯಾಗುತ್ತದೆ. ಆದರೆ ಅಗತ್ಯಕ್ಕಿಂತ ಹೆಚ್ಚು ನೀರು ಕುಡಿಯುವುದು ಕೂಡಾ ಸಮಸ್ಯೆಯನ್ನುಂಟು ಮಾಡಬಹುದು. ಸಾಮಾನ್ಯ ಸ್ಥಿತಿಯಲ್ಲಿ ಒಬ್ಬ ವ್ಯಕ್ತಿಗೆ ಪದೇ ಪದೇ ಬಾಯಾರುತ್ತಿದ್ದರೆ ಗಂಭೀರ ರೋಗದ ಲಕ್ಷಣವಾಗಿರಬಹುದು. ಅಧಿಕ ಬಾಯಾರಿಕೆ ಒಂದು ಕಾಯಿಲೆಯಾಗಿದ್ದು ಅದನ್ನು ಪಾಲಿಡಿಪ್ಸಿಯಾ ಕರೆಯುತ್ತಾರೆ. ಆ ಲಕ್ಷಣಗಳು ಈ ರೀತಿ ಇದೆ.

Advertisement

* ರಕ್ತದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಾಗಿದ್ದು, ಸಕ್ಕರೆ ಕಾಯಿಲೆಗೆ ಇರುವ ಮಾನದಂಡ ಗಳನ್ನು ಯಾವ ವ್ಯಕ್ತಿ ಪೂರೈಸುವುದಿಲ್ಲ ಅಂತಹ ವ್ಯಕ್ತಿ ಸದ್ಯದಲ್ಲಿಯೇ ಸಕ್ಕರೆ ಕಾಯಿಲೆ ಕಂಡುಕೊಳ್ಳುವ ಸಾಧ್ಯತೆ ಇರುತ್ತದೆ.

* ಏಕೆಂದರೆ ಅದಕ್ಕೆ ಸಂಬಂಧಪಟ್ಟಂತೆ ಎಲ್ಲಾ ಬಗೆಯ ರೋಗ ಲಕ್ಷಣಗಳು ಕಾಣಿಸುತ್ತಿರುತ್ತವೆ. ನಮ್ಮ ದೇಹ ಹೆಚ್ಚುವರಿ ಸಕ್ಕರೆ ಪ್ರಮಾಣವನ್ನು ಮೂತ್ರದ ಮೂಲಕ ಹೊರಹಾಕಲು ಪ್ರಯತ್ನಿಸುತ್ತದೆ. ಈ ಸಂದರ್ಭದಲ್ಲಿ ದೇಹದಿಂದ ನೀರಿನ ಅಂಶ ಕೂಡ ನಷ್ಟವಾಗುತ್ತದೆ.​

* ಸಕ್ಕರೆ ಕಾಯಿಲೆ ಇರುವ ಜನರಲ್ಲಿ ಹೆಚ್ಚಿನ ಬಾಯಾರಿಕೆ, ಪದೇ ಪದೇ ಮೂತ್ರ ವಿಸರ್ಜನೆ ಮಾಡುವುದು, ಕಣ್ಣು ಮಂಜಾಗುವುದು ಇತ್ಯಾದಿ ಕಾಣಿಸುತ್ತಿರುತ್ತದೆ. ಇದು ಮಧುಮೇಹದ ಲಕ್ಷಣವಾಗಿದ್ದು, ಕಿಡ್ನಿಗಳು, ರಕ್ತನಾಳಗಳು, ಕಣ್ಣುಗಳು ಹಾಗೂ ನರಮಂಡಲಕ್ಕೆ ಸಮಸ್ಯೆ ಇರುತ್ತದೆ.

* ದೇಹದಲ್ಲಿ ದ್ರವಗಳ ಕೊರತೆಯಿದ್ದಾಗ, ಅದು ಅಂಗಾಗಳ ಕಾರ್ಯದ ಮೇಲೆ ಪರಿಣಾಮ ಬೀರಲು ಆರಂಭಿಸುತ್ತದೆ. ಡಿಹೈಡ್ರೇಶನ್ ತೀವ್ರಗೊಂಡಾಗ, ನವಜಾತ ಶಿಶುಗಳಿಗೆ ಮತ್ತು ವೃದ್ಧರಿಗೆ ಮಾರಕವಾಗಿ ಪರಿಣಮಿಸಬಹುದು. ಅತಿಯಾದ ಬೆವರು, ವಾಂತಿ ಮತ್ತು ಅತಿಸಾರದಿಂದ ಈ ಸಮಸ್ಯೆ ಉಂಟಾಗುತ್ತದೆ.

* ಆರೋಗ್ಯಕರ ಕೆಂಪು ರಕ್ತ ಕಣಗಳು ವ್ಯಕ್ತಿಯ ದೇಹದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಉತ್ಪತ್ತಿಯಾಗದಿದ್ದಾಗ, ಅದನ್ನು ರಕ್ತಹೀನತೆ  ಎಂದು ಕರೆಯಲಾಗುತ್ತದೆ. ರಕ್ತಹೀನತೆಯ ಸಮಸ್ಯೆ ತೀವ್ರವಾಗಿದ್ದರೂ ಸಹ, ವ್ಯಕ್ತಿಗೆ ತುಂಬಾ ಬಾಯಾರಿಕೆಯಾಗಲು ಶುರುವಾಗುತ್ತದೆ. ಅಲ್ಲದೆ ಹೆಚ್ಚು ಬೆವರುವುದು ಸಹ ಪ್ರಾರಂಭವಾಗುತ್ತದೆ ಮತ್ತು  ಶಕ್ತಿಹೀನತೆ ಕೂಡಾ ಕಂಡುಬರುತ್ತದೆ.

ಪ್ರಮುಖ ಸೂಚನೆ : ಈ ವಿವರಗಳನ್ನು ತಜ್ಞರು ಮತ್ತು ಅಧ್ಯಯನಗಳ ಪ್ರಕಾರ ಒದಗಿಸಲಾಗಿದೆ. ಈ ಲೇಖನವು ನಿಮ್ಮ ಮಾಹಿತಿಗಾಗಿ ಮಾತ್ರ. ಯಾವುದೇ ಸಣ್ಣ ಆರೋಗ್ಯ ಸಮಸ್ಯೆಗಳಿಗೆ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

Tags :
Advertisement