For the best experience, open
https://m.suddione.com
on your mobile browser.
Advertisement

ಕಣ್ಣಿನ ಹಾರೈಕೆ ಹೀಗಿರಲಿ : ಒಂದಷ್ಟು ಟಿಪ್ಸ್ ಫಾಲೋ ಮಾಡಿ

08:54 AM Sep 09, 2021 IST | suddionenews
ಕಣ್ಣಿನ ಹಾರೈಕೆ ಹೀಗಿರಲಿ   ಒಂದಷ್ಟು ಟಿಪ್ಸ್ ಫಾಲೋ ಮಾಡಿ
Advertisement

Advertisement

ಇತ್ತೀಚಿನ ದಿನಗಳಲ್ಲಿ ಕಣ್ಣಿನ ದೃಷ್ಠಿಯನ್ನ ಬೇಗ ಕಳೆದುಕೊಳ್ಳುತ್ತಿದ್ದಾರೆ. ತೀರಾ ಚಿಕ್ಕ ವಯಸ್ಸಿಗೇನೆ ಕಣ್ಣು ಮಬ್ಬಾಗಿರುತ್ತೆ ಕನ್ನಡಕ ಬಂದಿರುತ್ತೆ.

ಅದಕ್ಕೆ ಕಾರಣ ನೂರೆಂಟು. ಈಗಿನ ಆಹಾರ ಶೈಲಿನೂ ಹಾಗೆ. ಕಣ್ಣಿನ ದೃಷ್ಟಿ ಸರಿ ಮಾಡುವಂತ ಯಾವ ಪೌಷ್ಠಿಕಾಂಶವಿರುವ ಆಹಾರವನ್ನ ನಾವೂ ತಿಂತಾ ಇಲ್ಲ. ಜೊತೆಗೆ ತಿನ್ನೋ ಆಹಾರದಲ್ಲಿ ನಮಗೆ ಬೇಕಾಗುವಷ್ಡು ಪೋಷಾಕಾಂಶ ಸಿಗುತ್ತೆ ಅನ್ನೋ ಹಾಗೂ ಇಲ್ಲ. ಹೀಗಾಗಿ ಬಹಳ ಚಿಕ್ಕ ವಯಸ್ಸಿನಲ್ಲೇ ಮಕ್ಕಳು ಕನ್ನಡಕ ಬಳಸೋದನ್ನ ನೋಡಿದ್ದೇವೆ.

Advertisement

ಅದಕ್ಕೆ ಪರಿಹಾರವಾದ್ರೂ ಏನು..? ಈಗ ಸರಿ‌ಮಾಡಿಕೊಳ್ಳೋದಕ್ಕೆ ಸಾಧ್ಯನಾ ಅಂತ ನೀವ್ ಕೇಳ್ ಬಹುದು. ಯಾಕಗಲ್ಲ. ಎಲ್ಲವೂ ಸಾಧ್ಯವಿದೆ. ಹಾಗಾಗಿ ನಾವಿಲ್ಲೊಂದಿಷ್ಟು ಟಿಪ್ಸ್ ಕೊಟ್ಟಿದ್ದೇವೆ ನೋಡಿ ಫಾಲೋ ಮಾಡಿ.

ಕೆಂಡ ಸಂಪಿಗೆ ಎರಡು ಎಲೆಯನ್ನು ನೀರಿನಲ್ಲಿ ಕುದಿಸಿ ಕಷಾಯ ಮಾಡಿ ದಿನವೂ ಕಣ್ಣು ತೊಳೆಯುವುದರಿಂದ ಕಣ್ಣಿನ ಅನೇಕ ಕಾಯಿಲೆ ವಾಸಿ ಆಗುತ್ತದೆ. ದೃಷ್ಟಿ ಸಾಮರ್ಥ್ಯ ಹೆಚ್ಚಿಸುತ್ತದೆ ಮತ್ತು ಪ್ರಾಥಮಿಕ ಹಂತದಲ್ಲಿ ಕಣ್ಣಿನ ಪೊರೆಯನ್ನು ತೆಗೆದು ಸರಿ ಮಾಡುವ ಸಾಮರ್ಥ್ಯ ಇದೆ.

ಇದೇರೀತಿ ತ್ರಿಫಲಾ ಕಷಾಯ ಮಾಡಿ (ಅಳಲೆ ತಾರೆ ನೆಲ್ಲಿ)ಕುಡಿಯುವುದು ಮತ್ತು ಕಣ್ಣು ತೊಳೆಯುವುದರಿಂದ ಕಣ್ಣಿನ ಅನೇಕ ಕಾಯಿಲೆ ವಾಸಿ ಆಗುತ್ತೆ.

Advertisement
Tags :
Advertisement