ಡೆಂಗ್ಯೂವಿನಿಂದ ಆರೋಗ್ಯ ಸರಿಯಾದರೂ ಅಡ್ಡಪರಿಣಾಮ ಇದ್ದೆ ಇರುತ್ತೆ.. ಹೀಗಾಗಿ ಮೊದಲೆ ಎಚ್ಚೆತ್ತುಕೊಳ್ಳಿ..!
ಮಳೆಗಾಲ ಬಂತು ಅಂದ್ರೆ ಸೊಳ್ಳೆಯ ಕಾಟ ಹೆಚ್ಚಾಗುತ್ತದೆ. ಸೊಳ್ಳೆಗಳಿಂದ ಶುರುವಾಗುವ ಸಮಸ್ಯೆ ಒಂದಿಷ್ಟಲ್ಲ. ಅದರಲ್ಲೂ ಈ ಮಳೆಗಾಲದಲ್ಲಿ ಕಚ್ಚುವ ಸೊಳ್ಳೆಗಳಿಂದ ಡೆಂಗ್ಯೂ, ಮಲೇರಿಯಾದಂತ ಮಾರಕ ಕಾಯಿಲೆಗಳು ನಮ್ಮನ್ನು ಕಾಡುತ್ತವೆ. ಮಳೆಗಾಲ ಅಷ್ಟೇ ಅಲ್ಲ ಮನೆಯ ಬಳಿ ನಿಂತ ನೀರಿನಿಂದಾನೂ ಸೊಳ್ಳೆಗಳು ಉತ್ಪತ್ತಿಯಾಗುತ್ತವೆ. ಅದರಿಂದಾನೂ ಡೆಂಗ್ಯೂ ಬರುತ್ತದೆ.
ಡೆಂಗ್ಯೂ ಬಂದರೆ ವಾಸಿಯಾಗದಂತ ಕಾಯಿಲೆ ಏನು ಅಲ್ಲ. ಆದರೆ ಅದು ವಾಸಿಯಾದ ಮೇಲೂ ದೇಹದ ಮೇಲೆ ನೂರೆಂಟು ಪರಿಣಾಮ ಬೀರುತ್ತದೆ. ದೇಹಕ್ಕೆ ಸಮಸ್ಯೆಯಾಗಿ ಕಾಡುತ್ತದೆ. ಹೀಗಾಗಿ ಡೆಂಗ್ಯೂ ಬರುವುದಕ್ಕೂ ಮೊದಲೇ ಎಚ್ಚೆತ್ತುಕೊಳ್ಳುವುದು ಉತ್ತಮ.
ಡೆಂಗ್ಯೂ ಜ್ವರ ಬಂದಾಗ ಚಳಿಜ್ವರ, ಅತ್ಯಧಿಕ ತಲೆನೋವು, ವಾಂತಿ, ಬೇಧಿ, ಸುಸ್ತು ಹೀಗೆ ಹಲವು ಲಕ್ಷ್ಮಣಗಳು ಕಂಡು ಬರುತ್ತವೆ. ತಕ್ಷಣ ಅದನ್ನು ಅರಿತು ಚಿಕಿತ್ಸೆ ಪಡೆದರು, ಗುಣವಾದ ಮೇಲೆ ಅಡ್ಡ ಪರಿಣಾಮಗಳು ದೇಹಕ್ಕೆಕಾಡುವುದಕ್ಕೆ ಆರಂಭಿಸುತ್ತವೆ. ಅದರಲ್ಲಿ ದೇಹಕ್ಕೆ ತುಂಬಾ ದಿನಗಳವರೆಗೂ ಸುಸ್ತು ಕಾಡುತ್ತದೆ. ಸ್ವಲ್ಪ ನಡೆದಾಡಿದರೂ ಸುಸ್ತಾಗುತ್ತದೆ. ಇನ್ನು ಡೆಂಗ್ಯೂವಿನಿಂದ ಬಳಲಿದವರಿಗೆ ಕೂದಲು ಉದುರುವುದಕ್ಕೆ ಶುರುವಾಗುತ್ತದೆ. ಡೆಂಗ್ಯೂ ಬಂದಾಗ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗುವುದು. ಕೆಲವರಲ್ಲಿ alopecia ಅಂದರೆ ಕೂದಲು ಕೆಲವು ಕಡೆ ಸಂಪೂರ್ಣವಾಗಿ ಪ್ಯಾಚ್-ಪ್ಯಾಚ್ ಉಂಟಾಗುವುದು.
ಡೆಂಗ್ಯೂ ಬಂದರೆ ರೋಗ ನಿರೋಧಕ ಶಕ್ತಿ ತುಂಬಾನೇ ಕಡಿಮೆಯಾಗುವುದು. 5-6 ತಿಂಗಳಾದರೂ ಈ ರೀತಿ ನೋವು ಕೆಲವರಿಗೆ ಕಾಡುವುದು. ದೇಹದಲ್ಲಿ ಪೋಷಕಾಂಶದ ಕೊರತೆ ಇರುತ್ತದೆ, ಇದರಿಂದಾಗಿ ಸಂಧಿವಾತ ಸಮಸ್ಯೆ ಉಂಟಾಗುವುದು. ಹೀಗಾಗಿ ಆದಷ್ಟು ಡೆಂಗ್ಯೂ ಬಾರದಂತೆ ನಿಮ್ಮಆರೋಗ್ಯವನ್ನು ಕಾಪಾಡಿಕೊಳ್ಳಬೇಕಿದೆ.