For the best experience, open
https://m.suddione.com
on your mobile browser.
Advertisement

ಹೃದಯ ಸೇರಿದಂತೆ ದೀರ್ಘಕಾಲದ ಕಾಯಿಲೆಗಳಿಂದ ಮುಕ್ತಿ ಪಡೆಯಲು ಸ್ಟ್ರಾಬೆರಿ ತಿನ್ನಿ

05:55 AM Dec 24, 2023 IST | suddionenews
ಹೃದಯ ಸೇರಿದಂತೆ ದೀರ್ಘಕಾಲದ ಕಾಯಿಲೆಗಳಿಂದ ಮುಕ್ತಿ ಪಡೆಯಲು ಸ್ಟ್ರಾಬೆರಿ ತಿನ್ನಿ
Advertisement

ಸುದ್ದಿಒನ್ : ಸ್ಟ್ರಾಬೆರಿ ಆರೋಗ್ಯ ಪ್ರಯೋಜನಗಳು: ಚಿಕ್ಕ, ಕೆಂಪು ಸ್ಟ್ರಾಬೆರಿ ನೋಡಲು ತುಂಬಾ ಸುಂದರವಾಗಿರುತ್ತದೆ. ಈ ಹುಳಿ ಮತ್ತು ಸ್ವಲ್ಪ ಒಗರಿನಿಂದ ಕೂಡಿರುವ ಸ್ಟ್ರಾಬೆರಿ ಹಣ್ಣನ್ನು ಇಷ್ಟಪಡದವರೇ ಇಲ್ಲ. ಇವುಗಳಲ್ಲಿ ಪೋಷಕಾಂಶಗಳು ಹೇರಳವಾಗಿವೆ. ಸ್ಟ್ರಾಬೆರಿಗಳಲ್ಲಿ ಫೈಬರ್, ಪ್ರೊಟೀನ್, ವಿಟಮಿನ್ ಸಿ, ಕ್ಯಾಲ್ಸಿಯಂ, ಐರನ್, ಪೊಟ್ಯಾಸಿಯಮ್, ಫೋಲೇಟ್, ಮೆಗ್ನೀಸಿಯಮ್ ಮತ್ತು ಆಂಥೋಸಯಾನಿನ್‌ಗಳು ಎಂಬ ರೋಗ ನಿರೋಧಕಗಳು ಸಮೃದ್ಧವಾಗಿವೆ. ಸ್ಟ್ರಾಬೆರಿಯನ್ನು ಸೇರಿಸುವುದರಿಂದ ಆಗುವ ಆರೋಗ್ಯಕಾರಿ ಲಾಭಗಳೇನು ಎಂಬುದನ್ನು ತಿಳಿಯೋಣ.

Advertisement
Advertisement

ಸ್ಟ್ರಾಬೆರಿಗಳಲ್ಲಿ ರೋಗ ನಿರೋಧಕಗಳು ಸಮೃದ್ಧವಾಗಿವೆ.
ಇವು ದೇಹದ ಜೀವಕೋಶಗಳನ್ನು ಫ್ರೀ ರಾಡಿಕಲ್ಗಳಿಂದ ರಕ್ಷಿಸುತ್ತವೆ ಮತ್ತು ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡುತ್ತದೆ. ಸ್ಟ್ರಾಬೆರಿಯಲ್ಲಿರುವ ಆಂಟಿಆಕ್ಸಿಡೆಂಟ್‌ಗಳು ಫ್ರೀ ರಾಡಿಕಲ್‌ಗಳ ವಿರುದ್ಧ ಹೋರಾಡುತ್ತವೆ ಮತ್ತು ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡುತ್ತವೆ. ಮಧುಮೇಹ, ಹೃದಯ ಸಮಸ್ಯೆಗಳು ಮತ್ತು ಕ್ಯಾನ್ಸರ್‌ನಂತಹ ದೀರ್ಘಕಾಲದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಸ್ಟ್ರಾಬೆರಿಯಲ್ಲಿರುವ ಆಂಥೋಸಯಾನಿನ್‌ಗಳು ಮತ್ತು ವಿಟಮಿನ್ ಸಿ ಶಕ್ತಿಯುತವಾದ ಉತ್ಕರ್ಷಣ ನಿರೋಧಕಗಳಾಗಿ ಕಾರ್ಯನಿರ್ವಹಿಸುತ್ತವೆ.

Advertisement

ಕೇವಲ ಒಂದು ಕಪ್ ಸ್ಟ್ರಾಬೆರಿಗಳು ಒಂದು ದಿನಕ್ಕೆ ಬೇಕಾಗುವಷ್ಟು ವಿಟಮಿನ್ ಸಿ ಅನ್ನು ಒದಗಿಸುತ್ತದೆ.
ವಿಟಮಿನ್ ಸಿ ಶಕ್ತಿಯುತವಾದ ಉತ್ಕರ್ಷಣ ನಿರೋಧಕವಾಗಿ ಕಾರ್ಯನಿರ್ವಹಿಸುತ್ತದೆ. ಇದು T- & B- ಕೋಶಗಳ ಪ್ರಸರಣವನ್ನು ಉತ್ತೇಜಿಸುತ್ತದೆ ಎಂದು ಅಧ್ಯಯನಗಳು ತಿಳಿಸಿವೆ.  ಟಿ-ಕೋಶಗಳು, ಬಿ-ಕೋಶಗಳು, ಬಿಳಿ ರಕ್ತ ಕಣಗಳು, ವೈರಸ್, ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ವಿಟಮಿನ್ ಸಿ ಸಮೃದ್ಧವಾಗಿರುವ ಆಹಾರವನ್ನು ಸೇವಿಸುವುದರಿಂದ ಕಣ್ಣಿನ ಪೊರೆ ಮತ್ತು ಹೃದಯ ಸಮಸ್ಯೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ.

Advertisement

ಸ್ಟ್ರಾಬೆರಿಯಲ್ಲಿರುವ ಉತ್ಕರ್ಷಣ ನಿರೋಧಕಗಳು ಹೃದಯದ ಆರೋಗ್ಯವನ್ನು ಕಾಪಾಡುತ್ತದೆ.
ಸ್ಟ್ರಾಬೆರಿಗಳನ್ನು ನಿಯಮಿತವಾಗಿ ಸೇವಿಸಿದರೆ ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡಬಹುದು. ಸ್ಟ್ರಾಬೆರಿಗಳಲ್ಲಿ ಪೊಟ್ಯಾಸಿಯಮ್ ಕೂಡ ಸಮೃದ್ಧವಾಗಿದೆ.
ಪೊಟ್ಯಾಸಿಯಮ್ ಅಧಿಕ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ. ಇದು ರಕ್ತದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕರಗಿಸುತ್ತದೆ ಮತ್ತು ಒಳ್ಳೆಯ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುತ್ತದೆ. ತನ್ಮೂಲಕ ಹೃದಯದ ಆರೋಗ್ಯವನ್ನು ವೃದ್ಧಿಸುತ್ತದೆ.

ಸ್ಟ್ರಾಬೆರಿಯಲ್ಲಿರುವ ಹೆಚ್ಚಿನ ಉತ್ಕರ್ಷಣ ನಿರೋಧಕ ಅಂಶವು ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಸ್ಟ್ರಾಬೆರಿಯಲ್ಲಿರುವ ಆ್ಯಂಟಿಆಕ್ಸಿಡೆಂಟ್‌ಗಳು ದೇಹದಲ್ಲಿ ಕ್ಯಾನ್ಸರ್ ಕೋಶಗಳು ಹರಡುವುದನ್ನು ತಡೆಯುತ್ತದೆ.

ಸ್ಟ್ರಾಬೆರಿಗಳಲ್ಲಿ ಫೋಲೇಟ್ ಸಮೃದ್ಧವಾಗಿದೆ. ಡಿಎನ್‌ಎ ಸಂಶ್ಲೇಷಣೆ, ಅಮೈನೋ ಆಮ್ಲಗಳ ವಿಭಜನೆ, ಪ್ರೋಟೀನ್‌ಗಳ ಬಿಲ್ಡಿಂಗ್ ಬ್ಲಾಕ್ಸ್ ಸೇರಿದಂತೆ ಪ್ರಮುಖ ಪ್ರತಿಕ್ರಿಯೆಗಳಿಗೆ ಫೋಲೇಟ್ ಅಗತ್ಯವಿದೆ. ವಿಶೇಷವಾಗಿ ಗರ್ಭಿಣಿಯರು ಫೋಲಿಕ್ ಆಮ್ಲವನ್ನು ತೆಗೆದುಕೊಳ್ಳಬೇಕು.
ಇದು ಗರ್ಭದಲ್ಲಿರುವ ಮಗುವಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಫೋಲಿಕ್ ಆಮ್ಲವು ನ್ಯೂರಲ್ ಟ್ಯೂಬ್ ರಚನೆಗೆ ಸಹಾಯ ಮಾಡುತ್ತದೆ. ಕೇವಲ ಒಂದು ಕಪ್ ಸ್ಟ್ರಾಬೆರಿಗಳು  ದೈನಂದಿನ ಅವಶ್ಯಕತೆಯ ಸುಮಾರು 10%  ಫೋಲೇಟ್‌ನ
ಅನ್ನು ಒದಗಿಸುತ್ತದೆ.

Advertisement
Tags :
Advertisement