ಚಳಿಗಾಲದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ವಿಸಿಕೊಳ್ಳಲು ಈ ಜ್ಯೂಸ್ ಕುಡಿಯಿರಿ
ಮನುಷ್ಯನ ದೇಹಕ್ಕೆ ನೀರಿನ ಅಂಶ ಹೆಚ್ಚಾಗಿ ಬೇಕಾದ ಅನಿವಾರ್ಯತೆ ಇದೆ. ಆದ್ರೆ ಚಳಿಗಾಲದಲ್ಲಿ ನೀರನ್ನು ಹೆಚ್ಚಾಗಿ ಕುಡಿಯುವುದಕ್ಕೆ ಆಗುವುದಿಲ್ಲ. ಬಾಯಾರಿಕೆಯೂ ಅಗುವುದಿಲ್ಲ. ಜೊತೆಗೆ ರೋಗನಿರೋಧಕ ಶಕ್ತಿ ಕೂಡ ಕಡಿಮೆಯಾಗುತ್ತದೆ. ಚಳಿಗಾಲದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಈ ಆಯ್ದ ಜ್ಯೂಸ್ ಗಳನ್ನು ಕುಡಿಯಿರಿ.
ಚಳಿಗಾಲದ ಸಮಯದಲ್ಲಿ ಆದಷ್ಟು ಬ್ಲ್ಯಾಕ್ ಕುಡಿಯಿರಿ. ಬ್ಲ್ಯಾಕ್ ಟೀನಲ್ಲಿ ಸಾಕಷ್ಟು ಆರೋಗ್ಯಕ್ಕೆ ಉಪಯೋಗವಾಗುವಂತ ಅಂಶಗಳಿವೆ. ಬ್ಲ್ಯಾಕ್ ಟೀ ಸೇವಿಸುವುದರಿಂದ ರೋಗ ನಿರೋಧಕ ಶಕ್ತಿಯೂ ಹೆಚ್ಚಾಗುತ್ತದೆ.
ಇನ್ನು ಶುಂಠಿ ಚಹಾ ಕುಡಿಯುವುದರಿಂದ ಆರೋಗ್ಯಕ್ಕೆ ಸಾಕಷ್ಟು ಲಾಭಗಳಿವೆ. ಅದರಲ್ಲೂ ಶುಂಠಿ ಚಹಾದಲ್ಲಿ ರೋಗ ನಿರೋಧಕ ಶಕ್ತಿ ಇದೆ. ಇದನ್ನು ಕುಡಿಯುವುದರಿಂದ ಚಳಿಗಾಲದಲ್ಲಿ ಕಾಡುವ ಇನ್ನಿತರ ರೋಗಗಳಿಂದ ದೂರವಿರಬಹುದು.
ನಿಂಬೆ ರಸದ ಟೀ ಕುಡಿದು ಅಭ್ಯಾಸವಿದ್ದೆ ಇರುತ್ತದೆ. ಆದ್ರೆ ನಿಂಬೆ ಟೀ ಕುಡಿಯುವುದರಿಂದ ಚಳಿಗಾಲದ ರೋಗಗಳಿಗೆ ಮದ್ದಾಗಲಿದೆ. ಇನ್ನು ಅರಿಶಿನ ಸದಾ ಕಾಲಕ್ಕೂ ರೋಗ ನಿಯಂತ್ರಣವಿರುವ ಶಕ್ತಿ ಹೊಂದಿದೆ. ಹೀಗಾಗಿ ಅರಿಶಿನದ ಟೀ ಕುಡಿಯುವುದರಿಂದ ಹಲವು ರೋಗಗಳು ಹತ್ತಿರಕ್ಕೂ ಸುಳಿಯುವುದಿಲ್ಲ.