Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ನಿಮ್ಮ ಕಣ್ಣಿನಲ್ಲಿ ಚಿಕ್ಕ ವ್ಯತ್ಯಾಸ ಕಂಡುಬಂದರೂ ನಿರ್ಲಕ್ಷಿಸಬೇಡಿ : ಕ್ಯಾನ್ಸರ್ ರೋಗಲಕ್ಷಣಗಳಿರಬಹುದು...!

05:55 AM Jun 16, 2024 IST | suddionenews
Advertisement

ಸುದ್ದಿಒನ್ : ಭಾರತ ಈಗ ಎದುರಿಸುತ್ತಿರುವ ದೊಡ್ಡ ಆರೋಗ್ಯ ಸಮಸ್ಯೆಯೆಂದರೆ ಅದು ಕ್ಯಾನ್ಸರ್. ಈ ಸಾಂಕ್ರಾಮಿಕ ರೋಗವು ವಯಸ್ಸಿನ ಭೇದವಿಲ್ಲದೆ ಜನರ ಮೇಲೆ ದಾಳಿ ಮಾಡುತ್ತಿದೆ. ಈಗ ಆಧುನಿಕ ಕಾಲದಲ್ಲಿಯೂ ಔಷಧ ಲಭ್ಯವಿದ್ದರೂ ಸಕಾಲದಲ್ಲಿ ಗುರುತಿಸದಿದ್ದರೆ ಈ ರೋಗ ಮಾರಕವಾಗಬಹುದು. ಕ್ಯಾನ್ಸರ್ ಕೋಶಗಳು ದೇಹದಲ್ಲಿ ಎಲ್ಲಿ ಬೇಕಾದರೂ ಬೆಳೆಯಬಹುದು. ಕಣ್ಣಿನ ಕ್ಯಾನ್ಸರ್ ಅಪರೂಪದ ಕ್ಯಾನ್ಸರ್ಗಳಲ್ಲಿ ಒಂದಾಗಿದೆ. ಅದರ ಆರಂಭಿಕ ರೋಗಲಕ್ಷಣಗಳನ್ನು ಗುರುತಿಸಿ ಜಾಗೃತರಾದರೆ ರೋಗವನ್ನು ವಾಸಿ ಮಾಡಬಹುದು.

Advertisement

ಕಣ್ಣಿನ ಕ್ಯಾನ್ಸರ್‌ನ ಲಕ್ಷಣಗಳು:

• ಕಣ್ಣಿನಲ್ಲಿ ಬಿಳಿಯ ಪ್ರತಿಬಿಂಬ ಕಾಣಿಸಿಕೊಳ್ಳುತ್ತದೆ

Advertisement

• ವೀಕ್ಷಿಸುವಾಗ, ಸಂಪೂರ್ಣ ದೃಶ್ಯವು ಸ್ಪಷ್ಟವಾಗಿ ಕಾಣದೆ ಸ್ವಲ್ಪ ಕತ್ತಲೆಯಾದಂತೆನಿಸುತ್ತದೆ.

• ದೃಷ್ಟಿ ಮಸುಕಾಗುತ್ತದೆ.

•  ಎಲ್ಲವೂ ಎರಡೆರಡಾಗಿ ಕಾಣುತ್ತವೆ.

• ಕಣ್ಣುರೆಪ್ಪೆಯ ಕೆಳಗೆ ಒಂದು ಸಣ್ಣ ವ್ಯತ್ಯಾಸ ಕಂಡುಬಂದರೆ ತಕ್ಷಣವೇ ವೈದ್ಯರೊಂದಿಗೆ ಸಮಾಲೋಚಿಸಬೇಕು.

• ಕಣ್ಣುರೆಪ್ಪೆಗಳ ಮೇಲೆ ಸಣ್ಣ ಕೆಂಪು ಉಬ್ಬುಗಳನ್ನು ನಿರ್ಲಕ್ಷಿಸಬೇಡಿ.

• ನಿಮ್ಮ ರೆಪ್ಪೆಗೂದಲುಗಳು ಉದುರುತ್ತಿದ್ದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಿ.

• ಕಣ್ಣುರೆಪ್ಪೆಯ ಸೋಂಕು

•  ಕಣ್ಣಿನ ಮೂಲೆಯಲ್ಲಿ ಆಗಾಗ್ಗೆ ಸಣ್ಣ ಹೊಳಪಿನ ಬೆಳಕು ಕಂಡು ಬಂದರೆ ವೈದ್ಯರ ಬಳಿ ಪರೀಕ್ಷಿಸಿ.

• ಕಣ್ಣಿನಲ್ಲಿ ನೋವು ದೀರ್ಘಕಾಲದವರೆಗೆ ಇದ್ದರೆ, ಊತವನ್ನು ಅನುಭವಿಸಿದರೆ, ಕಣ್ಣೀರಿನಲ್ಲಿ ರಕ್ತದ ಹನಿಗಳು ಅಥವಾ ಕಪ್ಪು ಚುಕ್ಕೆ ಮತ್ತಿತರೆ ಬದಲಾವಣೆಗಳು ಕಂಡುಬಂದರೆ ತಕ್ಷಣ ವೈದ್ಯರ ಬಳಿಗೆ ಹೋಗಿ.

ವಯಸ್ಸಾದವರಲ್ಲಿ ಕಣ್ಣಿನ ಕ್ಯಾನ್ಸರ್ ಹೆಚ್ಚು ಸಾಮಾನ್ಯವಾಗಿದೆ. ಹಾಗೆಂದ ಮಾತ್ರಕ್ಕೆ ಯುವಜನರಿಗೆ ಬರುವುದಿಲ್ಲ ಎಂದಲ್ಲ. ಅಲ್ಲದೆ ಅನುವಂಶಿಕವಾಗಿ ಬರುವ ಸಾಧ್ಯತೆಯೂ ಇದೆ.

(ಪ್ರಮುಖ ಸೂಚನೆ: ಆರೋಗ್ಯ ತಜ್ಞರು ಮತ್ತು ಇತರ ಅಧ್ಯಯನಗಳಿಂದ ಪಡೆದ ಮಾಹಿತಿಯ ಆಧಾರದ ಮೇಲೆ ನಾವು ಈ ವಿವರಗಳನ್ನು ಒದಗಿಸುತ್ತಿದ್ದೇವೆ. ವಿಷಯಗಳು ಕೇವಲ ತಿಳುವಳಿಕೆಗಾಗಿ ಮಾತ್ರ. ನಿಮಗೆ ಯಾವುದೇ ಅನುಮಾನಗಳು ಅಥವಾ ಸಮಸ್ಯೆಗಳಿದ್ದರೆ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ.)

Advertisement
Tags :
bengaluruCancerchitradurgaeyeHealth Careignoresuddionesuddione newssymptomಆರೋಗ್ಯಕಣ್ಣುಕ್ಯಾನ್ಸರ್ಚಿತ್ರದುರ್ಗನಿರ್ಲಕ್ಷ್ಯಬೆಂಗಳೂರುರೋಗಲಕ್ಷಣಗಳುವ್ಯತ್ಯಾಸಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article