For the best experience, open
https://m.suddione.com
on your mobile browser.
Advertisement

7 ಗಂಟೆಗೂ ಕಡಿಮೆ ನಿದ್ದೆ ಮಾಡ್ತೀರಾ.. ಹಾಗಾದ್ರೆ ಈ ಕಾಯಿಲೆಗಳಿಗೆ ತುತ್ತಾಗೋದು ಗ್ಯಾರಂಟಿ

05:54 AM Jan 13, 2024 IST | suddionenews
7 ಗಂಟೆಗೂ ಕಡಿಮೆ ನಿದ್ದೆ ಮಾಡ್ತೀರಾ   ಹಾಗಾದ್ರೆ ಈ ಕಾಯಿಲೆಗಳಿಗೆ ತುತ್ತಾಗೋದು ಗ್ಯಾರಂಟಿ
Advertisement

ಸುದ್ದಿಒನ್ : ದೇಹಕ್ಕೆ ನಿದ್ರೆ ತುಂಬಾ ಅವಶ್ಯಕ. ಸರಿಯಾಗಿ ನಿದ್ದೆ ಮಾಡಿದರೆ ಮಾತ್ರ ದೇಹ ಮತ್ತೆ ಕ್ರಿಯಾಶೀಲವಾಗಿರುತ್ತದೆ. ಆದರೆ ಇಂದಿನ ವೇಗದ ಬದುಕಿನಲ್ಲಿ ಸರಿಯಾಗಿ ನಿದ್ದೆ ಮಾಡಲು ಸಮಯವಿಲ್ಲ. ಕೆಲವರು ಕೇವಲ 5 ಅಥವಾ 6 ಗಂಟೆಗಳ ಕಾಲ‌ ನಿದ್ದೆ ಮಾಡುತ್ತಾರೆ. ಮನುಷ್ಯ ದಿನಕ್ಕೆ 7 ಗಂಟೆಗಳಿಗಿಂತ ಕಡಿಮೆ ನಿದ್ರೆ ಮಾಡಿದರೆ, ಅನೇಕ ದೀರ್ಘಕಾಲದ ಆರೋಗ್ಯ ಸಮಸ್ಯೆಗಳು ಕಾಡುತ್ತವೆ.

Advertisement

ನೆನಪಿನ ಶಕ್ತಿ ಕಡಿಮೆಯಾಗುತ್ತದೆ

ದೇಹಕ್ಕೆ ಸಾಕಷ್ಟು ನಿದ್ರೆ ಇಲ್ಲದಿದ್ದರೆ ಮೆದುಳು ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ. ಕೆಲವೊಮ್ಮೆ ನೀವು ಏನು ಮಾಡುತ್ತಿದ್ದೀರಿ ಎಂದು ನಿಮಗೆ ಅರ್ಥವಾಗುವುದಿಲ್ಲ.  ನೆನಪಿನ ಶಕ್ತಿ ಕಡಿಮೆಯಾಗುತ್ತದೆ ಎನ್ನುತ್ತಾರೆ ತಜ್ಞರು. ಅದಲ್ಲದೆ ಕೆಲಸದ ಕಡೆ ಗಮನ, ಏಕಾಗ್ರತೆಯ ಕೊರತೆ, ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವೂ ಕಡಿಮೆಯಾಗುತ್ತದೆ. ಹಾಗಾಗಿ ಕನಿಷ್ಠ 7 ಗಂಟೆ ನಿದ್ದೆ ಮಾಡಬೇಕು ಎನ್ನುತ್ತಾರೆ ತಜ್ಞರು.

Advertisement

ರೋಗನಿರೋಧಕ ಶಕ್ತಿ ಕಡಿಮೆಯಾಗುತ್ತದೆ

ರಾತ್ರಿ ಸರಿಯಾಗಿ ನಿದ್ದೆ ಮಾಡದೇ ಇದ್ದರೆ ರೋಗನಿರೋಧಕ ಶಕ್ತಿಗೂ ತೊಂದರೆಯಾಗುತ್ತದೆ. ಕಡಿಮೆ ಗಂಟೆಗಳ ನಿದ್ರೆ ರೋಗನಿರೋಧಕ ಶಕ್ತಿಯನ್ನು ದುರ್ಬಲಗೊಳಿಸುತ್ತದೆ.
ಪರಿಣಾಮವಾಗಿ ರೋಗಗಳು ಮತ್ತು ಸಾಂಕ್ರಾಮಿಕ ರೋಗಗಳ ಅಪಾಯವನ್ನು ಎದುರಿಸಬೇಕಾಗುತ್ತದೆ. ಈ ಕಾರಣದಿಂದಾಗಿ ಆಗಾಗ್ಗೆ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ಮಾನಸಿಕ ಸಮಸ್ಯೆಗಳು

ಸರಿಯಾಗಿ ನಿದ್ದೆ ಮಾಡದಿದ್ದರೆ ತಲೆನೋವು ಬರುತ್ತದೆ. ಇದು ಕಿರಿಕಿರಿಯನ್ನು ಸಹ ಉಂಟುಮಾಡುತ್ತದೆ. ಜೊತೆಗೆ ಒತ್ತಡವೂ ಹೆಚ್ಚುತ್ತದೆ. ಈ ಕಾರಣದಿಂದಾಗಿ, ಆತಂಕ ಮತ್ತು ಖಿನ್ನತೆಯಂತಹ ಆರೋಗ್ಯ ಸಮಸ್ಯೆಗಳ ಸಾಧ್ಯತೆಗಳಿವೆ.

ತೂಕ ಹೆಚ್ಚಿಸಿಕೊಳ್ಳುವುದು:

ಸರಿಯಾದ ನಿದ್ರೆಯ ಕೊರತೆಯು ಹಸಿವು ಹಾರ್ಮೋನುಗಳ ಅಸಮತೋಲನೆ ಉಂಟಾಗುತ್ತದೆ.  ಇದು ಆಹಾರದ ಕಡೆಗೆ ಗಮನವನ್ನು ಹೆಚ್ಚಿಸುತ್ತದೆ. ಅದರ ಹೊರತಾಗಿ, ಇದು ವಿವಿಧ ಆಹಾರಗಳನ್ನು ತಿನ್ನುವ ಬಯಕೆಯನ್ನು ಹೆಚ್ಚಿಸುತ್ತದೆ. ನೀವು ಅತಿಯಾಗಿ ತಿನ್ನುವ ಮತ್ತು ತೂಕ ಹೆಚ್ಚಾಗುವ ಸಾಧ್ಯತೆಗಳಿವೆ.

ಹೃದಯ ಸಂಬಂಧಿ ರೋಗಗಳು

ನಿದ್ರೆಯ ಕೊರತೆಯು ಹೃದಯದ ಮೇಲೂ ಪರಿಣಾಮ ಬೀರುತ್ತದೆ. ಇದರಿಂದ ಮಧುಮೇಹ, ಬಿಪಿ, ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚುತ್ತದೆ ಎನ್ನುತ್ತಾರೆ ತಜ್ಞರು.

(ಪ್ರಮುಖ ಸೂಚನೆ: ಆರೋಗ್ಯ ತಜ್ಞರು ಮತ್ತು ಇತರ ಅಧ್ಯಯನಗಳಿಂದ ಪಡೆದ ಮಾಹಿತಿಯ ಆಧಾರದ ಮೇಲೆ ನಾವು ಈ ವಿವರಗಳನ್ನು ಒದಗಿಸುತ್ತಿದ್ದೇವೆ. ವಿಷಯಗಳು ಕೇವಲ ತಿಳುವಳಿಕೆಗಾಗಿ ಮಾತ್ರ. ನಿಮಗೆ ಯಾವುದೇ ಅನುಮಾನಗಳು ಅಥವಾ ಸಮಸ್ಯೆಗಳಿದ್ದರೆ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ.)

Tags :
Advertisement