Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಬೇಸಿಗೆಯಲ್ಲಿ ಸೌತೆಕಾಯಿ ತಿಂದರೆ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ ?

05:53 AM Apr 20, 2024 IST | suddionenews
Advertisement

ಸುದ್ದಿಒನ್ : ದಿನದಿಂದ ದಿನಕ್ಕೆ ಬಿಸಿಲ ತಾಪ ಹೆಚ್ಚಾಗುತ್ತಿದೆ. ಇದರಿಂದಾಗಿ ಅನೇಕರು ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಬೇಸಿಗೆಯ ಧಗೆಗೆ ತಕ್ಕಂತೆ ದೇಹಕ್ಕೆ ಸಾಕಷ್ಟು ಪೋಷಕಾಂಶಗಳನ್ನು ಒದಗಿಸಬೇಕು. ಈ ಬೇಸಿಗೆಯಲ್ಲಿ ಪ್ರತಿದಿನ ಸೌತೆಕಾಯಿಯನ್ನು ತಿನ್ನುವುದು ಒಳ್ಳೆಯದು. ಇದರಲ್ಲಿರುವ ಪೋಷಕಾಂಶಗಳು ಅನೇಕ ಪ್ರಯೋಜನಗಳನ್ನು ನೀಡುತ್ತವೆ. ಬೇಸಿಗೆಯಲ್ಲಿ ಸೌತೆಕಾಯಿಯನ್ನು ತಿನ್ನುವುದರಿಂದ ಹಲವಾರು ಪ್ರಯೋಜನಗಳಿವೆ.

Advertisement

ಬಿಸಿಲ ವಾತಾವರಣದಲ್ಲಿ ದೇಹವನ್ನು ತಂಪಾಗಿಸುವುದು ಬಹಳ ಮುಖ್ಯ. ಸೌತೆಕಾಯಿಯನ್ನು ಬೇಸಿಗೆ ಕಾಲದಲ್ಲಿ ತೆಗೆದುಕೊಳ್ಳಬೇಕು. ಸೌತೆಕಾಯಿಯನ್ನು ತೆಗೆದುಕೊಂಡರೆ ದೇಹದ ಉಷ್ಣತೆ ಕಡಿಮೆ ಮಾಡುತ್ತದೆ ಮತ್ತು ಹೃದಯ ಸಂಬಂಧಿ ಕಾಯಿಲೆಗಳಿಂದ ದೂರವಿರಲು ತುಂಬಾ ಒಳ್ಳೆಯದು.

ಸೌತೆಕಾಯಿ ಜೀರ್ಣಕ್ರಿಯೆಗೆ ಒಳ್ಳೆಯದು. ಇದರಲ್ಲಿರುವ ನೀರಿನಂಶ ಮತ್ತು ಫೈಬರ್ ಜೀರ್ಣಕ್ರಿಯೆಯನ್ನು ಸುಲಭಗೊಳಿಸುತ್ತದೆ. ಮಲಬದ್ಧತೆಯಂತಹ ಸಮಸ್ಯೆಗಳಿಗೂ ಸೌತೆಕಾಯಿ ಒಳ್ಳೆಯದು. ಪ್ರತಿದಿನ ಸರಿಯಾದ ಪ್ರಮಾಣದ ಸೌತೆಕಾಯಿಯನ್ನು ತಿನ್ನುವುದು ಒಳ್ಳೆಯದು.

Advertisement

ಬೇಸಿಗೆಯಲ್ಲಿ ನಿರ್ಜಲೀಕರಣದಿಂದ ಬಳಲುತ್ತಿರುತ್ತಾರೆ. ಇದನ್ನು ತಪ್ಪಿಸಲು ಹೆಚ್ಚು ನೀರು ಕುಡಿಯಿರಿ. ಅದೇ ರೀತಿ ಸೌತೆಕಾಯಿಯನ್ನು ಆಹಾರದಲ್ಲಿ ಸೇರಿಸುವುದರಿಂದ ದೇಹಕ್ಕೆ ಬೇಕಾದಷ್ಟು ನೀರು ಸಿಗುತ್ತದೆ. ಸೌತೆಕಾಯಿಯಲ್ಲಿ ಶೇ 95 ರಷ್ಟು ನೀರಿದೆ. ಸೌತೆಕಾಯಿಯನ್ನು ತಿನ್ನುವುದರಿಂದ ದೇಹದ ಉಷ್ಣತೆಯನ್ನು ಕಡಿಮೆ ಮಾಡುತ್ತದೆ ಮತ್ತು ಚಯಾಪಚಯ‌ ಕ್ರಿಯೆಯನ್ನು ಸುಧಾರಿಸುತ್ತದೆ.

ಸೌತೆಕಾಯಿ ದೇಹಕ್ಕೆ ಅಗತ್ಯವಾದ ಎಲೆಕ್ಟ್ರೋಲೈಟ್‌ಗಳನ್ನು ಒದಗಿಸುತ್ತದೆ. ಪೊಟ್ಯಾಸಿಯಮ್, ಮೆಗ್ನೀಸಿಯಮ್ ಮತ್ತು ಸೋಡಿಯಂ ಕೊರತೆಯಿರುವ ಜನರು ಖಂಡಿತವಾಗಿಯೂ ತಮ್ಮ ಆಹಾರದಲ್ಲಿ ಸೌತೆಕಾಯಿಯನ್ನು ಸೇವಿಸಬೇಕು. ದೇಹದಲ್ಲಿ ಸರಿಯಾದ ಜಲಸಂಚಯನವನ್ನು ಕಾಪಾಡಿಕೊಳ್ಳಲು ಸೌತೆಕಾಯಿ ತುಂಬಾ ಒಳ್ಳೆಯದು.

(ಪ್ರಮುಖ ಸೂಚನೆ: ಆರೋಗ್ಯ ತಜ್ಞರು ಮತ್ತು ಇತರ ಅಧ್ಯಯನಗಳಿಂದ ಪಡೆದ ಮಾಹಿತಿಯ ಆಧಾರದ ಮೇಲೆ ನಾವು ಈ ವಿವರಗಳನ್ನು ಒದಗಿಸುತ್ತಿದ್ದೇವೆ. ವಿಷಯಗಳು ಕೇವಲ ತಿಳುವಳಿಕೆಗಾಗಿ ಮಾತ್ರ. ನಿಮಗೆ ಯಾವುದೇ ಅನುಮಾನಗಳು ಅಥವಾ ಸಮಸ್ಯೆಗಳಿದ್ದರೆ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ.)

Advertisement
Tags :
benefitsbengaluruchitradurgaDo you knoweating cucumberfeaturedhealth tipshealth tips kannadakannada health tipssuddionesuddione newsSummerಆರೋಗ್ಯ ಮಾಹಿತಿಆರೋಗ್ಯ ಸಲಹೆಚಿತ್ರದುರ್ಗಪ್ರಯೋಜನಗಳುಬೆಂಗಳೂರುಬೇಸಿಗೆಸುದ್ದಿಒನ್ಸುದ್ದಿಒನ್ ನ್ಯೂಸ್ಸೌತೆಕಾಯಿ
Advertisement
Next Article