For the best experience, open
https://m.suddione.com
on your mobile browser.
Advertisement

ಮೊಳಕೆ ಕಾಳುಗಳನ್ನು ಸೇವಿಸುವುದರಿಂದ ಆರೋಗ್ಯಕ್ಕೆ ಎಷ್ಟೆಲ್ಲಾ ಪ್ರಯೋಜನಗಳು ಗೊತ್ತಾ ?

05:52 AM Nov 15, 2023 IST | suddionenews
ಮೊಳಕೆ ಕಾಳುಗಳನ್ನು ಸೇವಿಸುವುದರಿಂದ ಆರೋಗ್ಯಕ್ಕೆ ಎಷ್ಟೆಲ್ಲಾ ಪ್ರಯೋಜನಗಳು ಗೊತ್ತಾ
Advertisement

ಸುದ್ದಿಒನ್ : ನಾವು ಆರೋಗ್ಯವಾಗಿರಲು ಸಮತೋಲಿತ ಪೋಷಕಾಂಶಗಳ ಆಹಾರ ಅತ್ಯಗತ್ಯ. ದೇಹವು ಸಾಕಷ್ಟು ಪೋಷಕಾಂಶಗಳನ್ನು ಪಡೆಯದಿದ್ದರೆ, ಅನೇಕ ರೋಗಗಳ ಅಪಾಯವಿದೆ. ನಮ್ಮ ದೇಹಕ್ಕೆ ಸಾಕಷ್ಟು ಪೋಷಕಾಂಶಗಳನ್ನು ಪಡೆಯಲು ನಾವು ಪ್ರತಿದಿನ ಕೆಲವು ಮೊಳಕೆ ಕಾಳುಗಳನ್ನು ತಿನ್ನಬೇಕು ಎಂದು ತಜ್ಞರು ಸಲಹೆ ನೀಡುತ್ತಾರೆ. 

Advertisement
Advertisement

ಮೊಳಕೆ ಕಾಳುಗಳು ಪೋಷಕಾಂಶಗಳ ಉಗ್ರಾಣವಾಗಿದೆ. ಮೊಳಕೆಯೊಡೆದ ಕಾಳುಗಳು ನೋಡಲು ಚಿಕ್ಕದಾಗಿರಬಹುದು. ಆದರೆ ಅವುಗಳಿಂದಾಗುವ ಪ್ರಯೋಜನಗಳು ಅದ್ಭುತ ಎಂದು ಹೇಳಬಹುದು. ಹಲವರು ಇದನ್ನು ಸಲಾಡ್‌ಗಳು, ಸ್ಯಾಂಡ್‌ವಿಚ್‌ಗಳು ಮತ್ತು ಸ್ಟಿರ್-ಫ್ರೈಗಳಾಗಿ ಮಾಡಿಕೊಂಡು ತಿನ್ನುತ್ತಾರೆ. ಮೊಳಕೆಯೊಡೆದ ಕಾಳುಗಳು ಜೀವಸತ್ವಗಳು (Vitamins), ಖನಿಜಗಳು(Minerals) ಮತ್ತು ಉತ್ಕರ್ಷಣ ನಿರೋಧಕಗಳಲ್ಲಿ (Antiacident) ಸಮೃದ್ಧವಾಗಿವೆ. ಇವುಗಳಲ್ಲಿ ಫೈಬರ್, ಪ್ರೋಟೀನ್ ಮತ್ತು ಕಿಣ್ವಗಳು ಸಮೃದ್ಧವಾಗಿವೆ. ಹೆಚ್ಚುವರಿಯಾಗಿ ವಿಟಮಿನ್ ಸಿ, ಫೋಲೇಟ್, ಕಬ್ಬಿಣ ಮತ್ತು ಪೊಟ್ಯಾಸಿಯಮ್‌ನಂತಹ ಪೋಷಕಾಂಶಗಳಲ್ಲಿ ಸಮೃದ್ಧವಾಗಿವೆ.
ಮೇಲಾಗಿ ಇವುಗಳಲ್ಲಿ ಕ್ಯಾಲೋರಿ ಮತ್ತು ಕೊಬ್ಬು ಕಡಿಮೆ. ಪ್ರತಿದಿನ ಮೊಳಕೆ ಕಾಳುಗಳನ್ನು ಸೇವಿಸಿದರೆ ಯಾವ ರೀತಿಯ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು ಎಂದು ನೋಡೋಣ.

Advertisement

ನೀವು ತೂಕ ಇಳಿಸಿಕೊಳ್ಳಲು ಬಯಸಿದರೆ  ಮೊಳಕೆ ಕಾಳುಗಳನ್ನು ತಪ್ಪದೇ ಸೇವಿಸಿ. ಇವುಗಳಲ್ಲಿ ನೀರಿನಾಂಶ (ಫೈಬರ್) ಸಮೃದ್ಧವಾಗಿವೆ. ಇದು ಜೀರ್ಣಾಂಗ ವ್ಯವಸ್ಥೆಯ ಕಾರ್ಯನಿರ್ವಹಣೆಯನ್ನು ಸುಧಾರಿಸುತ್ತದೆ.  ಫೈಬರ್ ನಿಮ್ಮ ಹೊಟ್ಟೆ ತುಂಬಿದ ಭಾವನೆಯನ್ನು ನೀಡುತ್ತದೆ.
ಇದರಿಂದ ಅತಿಯಾಗಿ ತಿನ್ನುವುದನ್ನು ನಿಯಂತ್ರಿಸಬಹುದು. ಇಷ್ಟೇ ಅಲ್ಲದೇ ಸತು, ಕಬ್ಬಿಣ ಮತ್ತು ಕ್ಯಾಲ್ಸಿಯಂನಂತಹ ಪೋಷಕಾಂಶಗಳು ಸಮೃದ್ಧವಾಗಿವೆ. ಈ ಪೋಷಕಾಂಶಗಳು ದೇಹದ ಎಲ್ಲಾ ಅಂಗಗಳಿಗೆ ಸರಿಯಾದ ಆಮ್ಲಜನಕವನ್ನು ಪೂರೈಸುತ್ತವೆ. ವಿಶೇಷವಾಗಿ ಸತುವು ಸಂತಾನೋತ್ಪತ್ತಿ ಸಮಸ್ಯೆಗಳನ್ನು ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ

Advertisement

ಮೊಳಕೆಯೊಡೆದ ಕಾಳುಗಳ ಆಹಾರದಲ್ಲಿ ಫೈಬರ್‌ ಹೆಚ್ಚಿನ ಪ್ರಮಾಣದಲ್ಲಿರುತ್ತವೆ.
ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ, ಕರುಳಿನ ಚಲನೆಯನ್ನು ಉತ್ತಮಗೊಳಿಸುತ್ತದೆ.
ಮಲಬದ್ಧತೆ ಸಮಸ್ಯೆ ಇರುವವರು ಮೊಳಕೆ ಕಾಳುಗಳನ್ನು ಆಹಾರದಲ್ಲಿ ಸೇರಿಸಿಕೊಂಡರೆ.. ಸಮಸ್ಯೆ ನಿವಾರಣೆಯಾಗುತ್ತದೆ.

ಬದಲಾದ ಜೀವನಶೈಲಿ, ಕೆಟ್ಟ ಆಹಾರ ಪದ್ಧತಿಗಳಿಂದಾಗಿ ಇತ್ತೀಚಿನ ದಿನಗಳಲ್ಲಿ ಅನೇಕ ಮಹಿಳೆಯರು ಹಾರ್ಮೋನ್ ಅಸಮತೋಲನದಿಂದ ಬಳಲುತ್ತಿದ್ದಾರೆ.
ಅಧಿಕ ತೂಕ, ಮುಟ್ಟಿನ ಮತ್ತು ಬಂಜೆತನ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.
ಹಾರ್ಮೋನ್ ಅಸಮತೋಲನದಿಂದ ಬಳಲುತ್ತಿದ್ದರೆ ಅವುಗಳ ಜೊತೆಯಲ್ಲಿ ಹೆಸರು, ರಾಗಿ, ಮತ್ತು ಖರ್ಜೂರವನ್ನು ಸೇವಿಸುವುದು ಉತ್ತಮ.

ಮೊಳಕೆ ಕಾಳುಗಳಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಸೋಂಕಿನಿಂದ ನಿಮ್ಮನ್ನು ರಕ್ಷಿಸುತ್ತದೆ. ಜ್ವರದಂತಹ ರೋಗಗಳನ್ನು ತಡೆಯುತ್ತದೆ. ಅಷ್ಟೇ ಅಲ್ಲದೇ ಇವುಗಳಲ್ಲಿ ಬಿ ಗುಂಪಿನ ಜೀವಸತ್ವಗಳು ಸಮೃದ್ಧವಾಗಿವೆ. ಅವು ಆಹಾರವನ್ನು ಶಕ್ತಿಯನ್ನಾಗಿ ಪರಿವರ್ತಿಸಲು ಸಹಾಯ ಮಾಡುತ್ತವೆ ಈ ಮೂಲಕ ತ್ರಾಣವನ್ನು ಹೆಚ್ಚಿಸುತ್ತದೆ.

ಮೊಳಕೆ ಕಾಳುಗಳಲ್ಲಿ ಪೊಟ್ಯಾಸಿಯಮ್ ಮತ್ತು ಒಮೆಗಾ -3 ಕೊಬ್ಬಿನಾಮ್ಲಗಳನ್ನು ಹೊಂದಿರುತ್ತವೆ. ಇವೆರಡೂ ಹೃದಯದ ಆರೋಗ್ಯಕ್ಕೆ ಒಳ್ಳೆಯದು. ಈ ಪೋಷಕಾಂಶಗಳು ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ. ಹೃದಯ ಸಮಸ್ಯೆಗಳ ಅಪಾಯವನ್ನು ಕಡಿಮೆ ಮಾಡುತ್ತವೆ.

ಇವುಗಳಲ್ಲಿರುವ ಪೋಷಕಾಂಶಗಳು ಮೆದುಳಿಗೆ ಸರಿಯಾದ ರಕ್ತ ಪೂರೈಕೆಯಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಒತ್ತಡ ಮತ್ತು ಖಿನ್ನತೆಯಿಂದ ಬಳಲುತ್ತಿರುವವರು ಮೊಳಕೆ ಕಾಳುಗಳನ್ನು ತೆಗೆದುಕೊಳ್ಳುವುದು ಒಳ್ಳೆಯದು. ಅವುಗಳಲ್ಲಿ ಕಂಡುಬರುವ ಮೆಗ್ನೀಸಿಯಮ್ ಮತ್ತು ಕ್ಯಾಲ್ಸಿಯಂ ನರಮಂಡಲವನ್ನು ಬಲಪಡಿಸುತ್ತದೆ.
ಮಾನಸಿಕ ಒತ್ತಡವನ್ನು ದೂರ ಮಾಡುತ್ತದೆ.

ಪ್ರಮುಖ ಸೂಚನೆ : ಆರೋಗ್ಯ ತಜ್ಞರು ಮತ್ತು ಅಧ್ಯಯನಗಳ ಪ್ರಕಾರ ಈ ವಿವರಗಳನ್ನು ಒದಗಿಸಲಾಗಿದೆ. ಈ ಲೇಖನವು ನಿಮ್ಮ ಮಾಹಿತಿಗಾಗಿ ಮಾತ್ರ. ಇವುಗಳನ್ನು ಅನುಸರಿಸುವ ಮೊದಲು ಆಹಾರ ತಜ್ಞರನ್ನು ಸಂಪರ್ಕಿಸುವುದು ಉತ್ತಮ.

Advertisement
Tags :
Advertisement