ಶಿಶುಗಳಿಗೆ ಮಸಾಜ್ ಮಾಡುವುದು ಎಷ್ಟು ಒಳ್ಳೆಯದು ಗೊತ್ತಾ..?
ಸುದ್ದಿಒನ್ : ಶಿಶುಗಳನ್ನು ಪೋಷಣೆ ಮಾಡುವುದೇ ಒಂದು ದೊಡ್ಡ ಚಾಲೆಂಜ್. ಅವುಗಳನ್ನು ಹುಷಾರಾಗಿ ಎತ್ತಿಕೊಳ್ಳಬೇಕು, ಆಡಿಸಬೇಕು, ಹಾಲುಣಿಸುವಾಗ ಕಾಳಜಿ ತೋರಬೇಕು. ತುಂಬಾ ಸೂಕ್ಷ್ಮವಾಗಿ ಶಿಶುಗಳನ್ನು ಸಾಕಬೇಕು. ಹಾಗೇ ಮಕ್ಕಳಿಗೆ ಮಸಾಜ್ ಮಾಡುವುದು ತುಂಬಾ ಒಳ್ಳೆಯದು. ಹಾಗಂತ ದೊಡ್ಡವರಿಗೆ ಮಾಡಿದಂತೆಲ್ಲಾ ಮಸಾಜ್ ಮಾಡುವಂತಿಲ್ಲ. ಅದನ್ನು ಗಮನದಲ್ಲಿಟ್ಟುಕೊಳ್ಳಬೇಕು.
ಹಾಗಾದ್ರೆ ಮಕ್ಕಳಿಗೆ ಮಸಾಜ್ ಮಾಡುವುದರಿಂದ ಏನೆಲ್ಲಾ ಪ್ರಯೋಜನಗಳಿವೆ ಎಂಬುದನ್ನು ಇಲ್ಲಿ ನೋಡೋಣಾ.
* ಪ್ರತಿನಿತ್ಯ 45 ನಿಮಿಷಗಳ ಕಾಲ ಮಸಾಜ್ ಮಾಡಬೇಕು. ಅದು ಮಗು ಆಹಾರ ಸೇವಿಸಿ ನೆಮ್ಮದಿಯಾಗಿ, ಹಾಯಾಗಿದ್ದಾಗ. ದೇಹವೂ ಗಟ್ಟಿಯಿದ್ದರೆ ಮಸಾಜ್ ಮಾಡಬೇಡಿ. ಪಾದಗಳನ್ನು ನಿಧಾನವಾಗಿ ಮಸಾಜ್ ಮಾಡಿ.
* ಮಸಾಜ್ ಮಾಡುವಾಗ ಮಗುವಿನ ದೇಹವನ್ನು ನಿಧಾನವಾಗಿ ಮುಟ್ಟಿ, ಗಟ್ಟಿಯಾಗಿ ಹಿಡಿಯಬೇಡಿ.
* ಹೀಗೆ ಮಸಾಜ್ ಮಾಡುವುದರಿಂದ ಮಗುವಿನ ಅರಿವಿನ ಬೆಳವಣಿಗೆಯೂ ತುಂಬಾ ಚೆನ್ನಾಗಿ ಆಗುತ್ತದೆ ಮತ್ತು ದಿನದ ಆಯಾಸವೂ ಕಡಿಮೆಯಾಗುತ್ತದೆ.
* ಖುಷಿ ವಿಚಾರ ಆಂದ್ರೆ ಹೆಚ್ಚು ಅಳುವುದನ್ನು ನಿಲ್ಲಿಸುತ್ತವೆ.
* ಇದರಿಂದ ಒಳ್ಳೆಯ ನಿದ್ದೆ ಮಾಡುತ್ತಾರೆ, ಉಸಿರಾಟ ಚೆನ್ನಾಗಿ ಆಗುತ್ತದೆ.ನರ, ಸ್ನಾಯು, ಜೀರ್ಣಕಾರಿ ವ್ಯವಸ್ಥೆಗಳನ್ನು ಬಲಪಡಿಸುತ್ತದೆ.
* ಮಸಾಜ್ ಸಮಯದಲ್ಲಿ ಮಗುವನ್ನು ಆನಂದದಿಂದ ಇಟ್ಟುಕೊಳ್ಳಲು ಪ್ರಯತ್ನಿಸಿ.
ಈ ರೀತಿ ಪ್ರತಿ ದಿನ ಮಗುವಿಗೆ ಮಸಾಜ್ ಮಾಡುತ್ತಾ ಬನ್ನಿ ಆಮೇಲೆ ನೋಡಿ ಮಗು ಕೂಡ ಆರಾಮವಾಗಿ ನಿದ್ದೆ ಮಾಡುವುದಲ್ಲದೆ, ತಾಯಿಗೂ ನಿದ್ದೆ ಮಾಡುವುದಕ್ಕೆ ಬಿಡುತ್ತದೆ. ಅಷ್ಟೇ ಅಲ್ಲದೆ ಆರೋಗ್ಯವಾಗಿಯೂ, ಆರಾಮದಾಯಕವಾಗಿಯೂ ಮಗು ಬೆಳೆಯುತ್ತದೆ.