ಪಿಜ್ಹಾ-ಬರ್ಗರ್ ಜೊತೆಗೆ ಕೂಲ್ ಡ್ರಿಂಕ್ಸ್ ಕುಡಿದರೆ ಎಷ್ಟು ಡೇಂಜರ್ ಗೊತ್ತಾ..?
ಸುದ್ದಿಒನ್ | ಪಿಜ್ಹಾ-ಬರ್ಗರ್ ನಂಥ ಜಂಕ್ ಫುಡ್ ಗಳಿಗೆ ಜನ ಅಡಿಕ್ಟ್ ಆಗಿ ಎಷ್ಟೋ ವರ್ಷಗಳು ಆಗೋಯ್ತು. ವೀಕೆಂಡ್ ನಲ್ಲಿ ಮಕ್ಕಳು ಕೂಡ ಏನು ಬೇಕು ಅಂದ್ರೆ ಪಿಜ್ಹಾ-ಬರ್ಗರ್ ಬೇಕು ಎಂಬ ಕಾಲ ಇದು. ಬರೀ ಪಿಜ್ಹಾ-ಬರ್ಗರ್ ತಿಂದ್ರೆ ಟೇಸ್ಟ್ ಅಷ್ಟೊಂದು ನಾಲಿಗೆಗೆ ಹತ್ತಲ್ಲ. ಆದ್ರೆ ಪಕ್ಕದಲ್ಲೊಂದು ಕೂಲ್ ಡ್ರಿಂಕ್ಸ್ ಇದ್ದರಂತೂ ಎರಡು ಪೀಸ್ ಜಾಸ್ತಿನೆ ಹೊಟ್ಟೆಯೊಳಗೆ ಹೋಗುತ್ತೆ. ಆದರೆ ಇದು ಆರೋಗ್ಯಕ್ಕೆ ಎಷ್ಟು ಡೇಂಜರ್ ಅನ್ನೋದು ಗೊತ್ತಾ..?
ಪಿಜ್ಹಾದಂತಹ ಪದಾರ್ಥ ಮೈದಾದಿಂದ ಕೂಡಿದ್ದು ಗಟ್ಟಿಯಾಗಿರುತ್ತದೆ. ಕೂಲ್ ಡ್ರಿಂಕ್ಸ್ ತೆಗೆದುಕೊಂಡರೆ ಖಂಡಿತಾ ಬೇಗ ಜೀರ್ಣವಾಗುತ್ತದೆ ಎಂಬ ನಂಬಿಕೆ. ಆದರೆ ಅದೆಷ್ಟು ಸತ್ಯ ಎಂಬುದು ಮಾತ್ರ ಗೊತ್ತಿಲ್ಲ. ಅತಿಯಾಗಿ ಕೂಲ್ ಡ್ರಿಂಕ್ಸ್ ಕುಡಿದರೆ ಅದು ಮೂಳೆಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ವೈದ್ಯರು ಹೇಳುತ್ತಾರೆ. ಹೆಚ್ಚು ಸೋಡಾ ಹಾಗೂ ಸಕ್ಕರೆ ಅಂಶವಿರುವ ಪಾನೀಯಾಗಳು ಮೂಳೆಯ ಸಾಂದ್ರತೆಯನ್ನು ಕಡಿಮೆ ಮಾಡುತ್ತದೆ.
ಇಂತಹ ಪಾನೀಯಗಳು ಬಹಳಷ್ಟು ಸಕ್ಕರೆಯ ಅಂಶವನ್ನು ಹೊಂದಿರುತ್ತವೆ. ಸಕ್ಕರೆ ದೇಹವನ್ನು ಭಾರವಾಗಿಸುತ್ತದೆ. ಇಲ್ಲಿಂದ ಕೊಬ್ಬಿನ ಯಕೃತ್ತಿನ ಅಪಾಯವು ಹೆಚ್ಚಾಗುತ್ತದೆ. ಈ ಪಾನೀಯಗಳನ್ನು ಹೆಚ್ಚುವರಿ ಸಕ್ಕರೆ ಮತ್ತು ವಿವಿಧ ಸಂರಕ್ಷಕಗಳೊಂದಿಗೆ ತಯಾರಿಸಲಾಗುತ್ತದೆ. ಕ್ಯಾಲೋರಿ ಅಂಶವೂ ಹೆಚ್ಚು.
ದಿನ ಬಿಟ್ಟು ದಿನ ತಂಪು ಪಾನೀಯ ಕುಡಿದರೆ ತೂಕ ಹೆಚ್ಚುತ್ತದೆ. ಪೌಷ್ಟಿಕತಜ್ಞರು ಕೂಡ ಇಂತಹ ಪಾನೀಯಗಳು ಜೀರ್ಣಕಾರಿ ಸಮಸ್ಯೆಗಳನ್ನು ಉಂಟುಮಾಡುತ್ತವೆ ಎಂದು ಹೇಳುತ್ತಾರೆ. ಇದು ಹೆಚ್ಚಿನ ರಕ್ತದೊತ್ತಡ, ಟೈಪ್-2 ಮಧುಮೇಹ ಮತ್ತು ಸ್ಥೂಲಕಾಯದ ಹೆಚ್ಚಿನ ಅಪಾಯದಂತಹ ಸಮಸ್ಯೆಗಳನ್ನು ಉಂಟು ಮಾಡುತ್ತದೆ. ಹೀಗಾಗಿಯೇ ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳು ಹಲವು ಸಮಸ್ಯೆಗಳಿಂದ ಅದರಲ್ಲೂ ಮೂಳೆ ಸಮಸ್ಯೆಯನ್ನು ಎದುರಿಸುತ್ತಾರೆ.
(ಪ್ರಮುಖ ಸೂಚನೆ: ಆರೋಗ್ಯ ತಜ್ಞರು ಮತ್ತು ಇತರ ಅಧ್ಯಯನಗಳಿಂದ ಪಡೆದ ಮಾಹಿತಿಯ ಆಧಾರದ ಮೇಲೆ ನಾವು ಈ ವಿವರಗಳನ್ನು ಒದಗಿಸುತ್ತಿದ್ದೇವೆ. ವಿಷಯಗಳು ಕೇವಲ ತಿಳುವಳಿಕೆಗಾಗಿ ಮಾತ್ರ. ನಿಮಗೆ ಯಾವುದೇ ಅನುಮಾನಗಳು ಅಥವಾ ಸಮಸ್ಯೆಗಳಿದ್ದರೆ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ.)