ಚಹಾ ಕುಡಿಯುವಾಗ ಈ ಪದಾರ್ಥ ತಿನ್ನುವ ಅಭ್ಯಾಸವಿದೆಯಾ..? ಇದರಿಂದ ಏನೆಲ್ಲಾ ಸಮಸ್ಯೆ ?
ಸಾಕಷ್ಟು ಜನರಿಗೆ ಟೀ - ಕಾಫಿ ಕುಡಿಯದೆ ಇರುವುದಕ್ಕೆ ಸಾಧ್ಯವೆ ಇರುವುದಿಲ್ಲ. ಅದರಲ್ಲೂ ಕಾಫಿ, ಟೀ ಕುಡಿದ ನಂತರವೇ ಒಂದಷ್ಟು ಯೋಚನೆಗಳು ಬರುವುದು. ಬೆಳಗ್ಗೆ ಎದ್ದ ಕೂಡಲೇ ಚಹಾ ಕುಡಿದರೇನೆ ಮುಂದಿನ ಕೆಲಸಗಳಿಗೆ ತಲೆ ಓಡುವುದು. ಅಷ್ಟು ಅಡಿಕ್ಷನ್ ಆಗಿರ್ತಾರೆ ಚಹಾಗೆ. ಅದಷ್ಟೆ ಅಲ್ಲ ಟೀ, ಕಾಫಿಯ ಜೊತೆಗೆ ಏನಾದರೊಂದು ಸ್ನಾಕ್ಸ್ ಇಲ್ಲದೆ ಕುಡಿಯುವುದೇ ಇಲ್ಲ. ಆದರೆ ಅದೆಷ್ಟು ಡೇಂಜರ್ ಅನ್ನೋದು ಮಾತ್ರ ಯಾರಿಗೂ ತಿಳಿದಿಲ್ಲ. ಎಷ್ಟೋ ಬಾರಿ ಅದರ ಅನುಭವ ನಿಮಗೆ ಆಗಿನೇ ಇರುತ್ತೆ. ಟೀ ಜೊತೆಗೆ ಏನಾದರೊಂದು ತಿಂದ ಕೂಡಲೇ ಎದೆ ಉರಿಯುವುದೋ, ಗ್ಯಾಸ್ಟ್ರಿಕ್ ರೀತಿ ಆಗುವುದೋ ಆಗಿರುತ್ತದೆ. ಆದರೆ ಅದನ್ನ ನಿರ್ಲಕ್ಷ್ಯ ಮಾಡಿ, ಮತ್ತೆ ಅದೇ ತಪ್ಪನ್ನ ಮಾಡಿರ್ತೀವಿ ಅಲ್ವಾ. ಹಾಗಾದ್ರೆ ಚಹಾದೊಂದಿಗೆ ಏನೆಲ್ಲಾ ಪದಾರ್ಥ ತಿನ್ನಬಾರದು ಎಂಬ ಮಾಹಿತಿ ಇಲ್ಲಿದೆ.
* ಅನೇಕ ಜನ ಚಹಾದೊಂದಿಗೆ ಕರಿದ ಪದಾರ್ಥಗಳಿಲ್ಲದೆ ಸೇವನೆಯನ್ನೇ ಮಾಡಲ್ಲ. ಆದರೆ ಹೀಗೆ ಚಹಾದ ಜೊತೆಗೆ ಕರಿದ ಪದಾರ್ಥ ತಿನ್ನುವುದರಿಂದ ಆರೋಗ್ಯ ಕೆಡುತ್ತದೆ.
* ಅಷ್ಟೇ ಅಲ್ಲ ಚಹಾದ ಜೊತೆಗೆ ಅರಿಶಿನ ಹಾಕಿ ಕರಿದ ಪದಾರ್ಥವನ್ನು ಸೇವಿಸಬೇಡಿ. ಆ ರೀತಿಯ ಪದಾರ್ಥಗಳನ್ನು ಸೇವಿಸುವುದರಿಂದ ಗ್ಯಾಸ್, ಅಸಿಡಿಟಿ, ಮಲಬದ್ಧತೆ ಸೇರಿದಂತೆ ಜೀರ್ಣಕ್ರಿಯೆ ಸಮಸ್ಯೆಯೂ ಉಂಟಾಗುತ್ತದೆ.
* ಇನ್ನು ಚಹಾ ಕುಡಿದ ಬಳಿಕ ನಿಂಬೆರಸ ಇರುವಂತ ಪದಾರ್ಥವನ್ನು ಸೇವಿಸಬಾರದು. ಇದರಿಂದ ಹೊಟ್ಟೆಯೊಬ್ಬರ ಸಮಸ್ಯೆ ಉಂಟು ಮಾಡುವುದಲ್ಲದೆ ಎದೆಯುರಿಯನ್ನು ಜಾಸ್ತಿ ಮಾಡುತ್ತದೆ.
* ಕಬ್ಬಿಣದ ಸಮೃದ್ಧ ತರಕಾರಿಗಳ ಜೊತೆಗೆ ಚಹಾ ಸೇವಿಸಬಾರದು. ಪಾಲಕ್, ಕೋಸುಗಡ್ಡೆ, ಪನಿಯಾಣ ಪದಾರ್ಥಗಳಲ್ಲಿ ಕಬ್ಬಿಣ ಸಮೃದ್ಧವಾಗಿವೆ. ಇದು ದೇಹದಲ್ಲಿ ಕಬ್ಬಿಣದ ಹೀರಿಕೊಳ್ಳುವಿಕೆ ತಡೆಯುತ್ತದೆ.