For the best experience, open
https://m.suddione.com
on your mobile browser.
Advertisement

ಭಾರ ಎತ್ತಿದರೆ ಹೊಟ್ಟೆನೋವು ಬರುತ್ತಾ..? ಹರ್ನಿಯಾ ಆಗಿರಬಹುದು ಎಚ್ಚರ..!

05:49 AM Jun 05, 2024 IST | suddionenews
ಭಾರ ಎತ್ತಿದರೆ ಹೊಟ್ಟೆನೋವು ಬರುತ್ತಾ    ಹರ್ನಿಯಾ ಆಗಿರಬಹುದು ಎಚ್ಚರ
Advertisement

ಇತ್ತೀಚಿನ ದಿನಗಳಲ್ಲಿ ಮನುಷ್ಯನ ಆರೋಗ್ಯದಲ್ಲಿ ಸಾಕಷ್ಟು ಸಮಸ್ಯೆಗಳು ಎದುರಾಗುತ್ತವೆ. ಕೆಲವೊಂದು ಕಾಯಿಲೆಗೆ ಮೊದಲೇ ರೋಗ ಲಕ್ಷಣಗಳು ಕಂಡು ಬರುತ್ತವೆ. ಆ ಬಗ್ಗೆ ನಾವೂ ಎಚ್ಚರಗೊಳ್ಳಬೇಕಾಗುತ್ತದೆ. ಕೆಲವೊಂದು ರೋಗ ಲಕ್ಷಣಗಳು ಕಂಡು ಬಂದರೆ ಆಸ್ಪತ್ರೆಗೆ ತೋರಿಸುವುದು ಉತ್ತಮ. ಅದರಲ್ಲೂ ಭಾರ ಎತ್ತುವಾಗ ನಿಮಗೆ ಹೊಟ್ಟೆ ನೋವು ಬಂದರೆ ಅದನ್ನು ನಿರ್ಲಕ್ಷ್ಯ ಮಾಡಬೇಡಿ. ಅದು ಹರ್ನೀಯಾದ ಲಕ್ಷಣವೂ ಆಗಿರಬಹುದು.

Advertisement

ಈ ಹರ್ನಿಯಾ ಎಂದರೇನು..? ಯಾವ ರೀತಿಯ ಸಮಸ್ಯೆ ಕಾಡುತ್ತದೆ..?

Advertisement

ಹರ್ನಿಯಾ ಎಂದರೆ ಒಂದು ಅಂಗ ಅಥವಾ ಫ್ಯಾಟಿಯ ಅಂಗಾಂಶ ತನ್ನ ಸುತ್ತಲಿನ ಮಾಂಸ ಖಂಡದ ಕನೆಕ್ಟಿವ್ ಟಿಶ್ಯೂನ ಯಾವುದಾ ದರೂ ದುರ್ಬಲ ಭಾಗದಿಂದ ಹೊರಬಂದಂತಹ ಸಂದರ್ಭ ವನ್ನು ಹರ್ನಿಯಾ ಎಂದು ಕರೆಯಲಾಗುತ್ತದೆ. ಹರ್ನಿಯಾ ಸಮಸ್ಯೆಯಲ್ಲಿ ಬೇರೆ ಬೇರೆ ವಿಧಗಳಿವೆ. ಅದರಲ್ಲಿ ಹೊಟ್ಟೆಯ ಭಾಗದ ಹರ್ನಿಯಾ ಸಾಮಾನ್ಯವಾಗಿ ಕಂಡು ಬರುತ್ತದೆ. ಹೊಟ್ಟೆಯ ದುರ್ಬಲ ಭಾಗದ ಮೂಲಕ ಕರುಳು ಹೊರ ಬಂದರೆ ಈ ರೀತಿ ಆಗುತ್ತದೆ. ಪ್ರತಿದಿನ ಯಾರು ಜಾಸ್ತಿ ಭಾರ ಎತ್ತುವ ಕೆಲಸವನ್ನು ನಿರಂತರವಾಗಿ ಮಾಡುತ್ತಿರುತ್ತಾರೆ ಅವರಿಗೆ ಈ ರೀತಿ ಆಗುತ್ತದೆ.​

Advertisement

ಹರ್ನಿಯಾ ಸಮಸ್ಯೆ ಇದ್ದರೆ ಚರ್ಮ ಊದಿಕೊಳ್ಳುತ್ತದೆ. ನಿಂತಾಗ, ಕೂತಾಗ, ಭಾರದ ವಸ್ತು ಎತ್ತಿದಾಗ ಈ ಸಮಸ್ಯೆ ಕಾಣಿಸಿಕೊಳ್ಳಲಿದೆ.

Advertisement
Advertisement

* ಇದರ ಲಕ್ಷಣಗಳೆಂದರೆ, ಬಾಗಿದಾಗ, ಭಾರ ಎತ್ತಿದಾಗ ನೋವು ಕಾಣಿಸಿಕೊಳ್ಳುವುದು
* ಹೊಟ್ಟೆ ಊದಿಕೊಂಡಂತೆ ಕಾಣಿಸುವುದು
* ವಾಕರಿಕೆ, ವಾಂತಿ ಮತ್ತು ಜ್ವರ ಕಾಣಿಸುವುದು.

* ಒಂದು ವೇಳೆ ನಿಮಗೆ ಹರ್ನಿಯಾದ ಯಾವುದೇ ರೋಗ ಲಕ್ಷಣ ಗಳು ಇದ್ದರೆ, ಸೂಕ್ತವಾದ ಚಿಕಿತ್ಸೆಗಾಗಿ ತಕ್ಷಣವೇ ಡಾಕ್ಟರ್ ಬಳಿ ತೋರಿಸಿ ಕೊಳ್ಳಿ. ನಿಮಗೆ ಹರ್ನಿಯಾ ಯಾವ ಪ್ರಮಾಣದಲ್ಲಿದೆ ಎನ್ನುವುದರ ಆಧಾರದ ಮೇಲೆ ಶಸ್ತ್ರಚಿಕಿತ್ಸೆಯ ಪ್ರಮಾಣ ಅವಲಂಬಿತ ವಾಗಿರುತ್ತದೆ. ಅಕ್ಕ ಪಕ್ಕದ ಅಂಗಾಂಗಗಳಿಗೆ ತೊಂದರೆಯಾಗ ದಂತೆ ಶಸ್ತ್ರಚಿಕಿತ್ಸೆ ಮಾಡಲಾಗುತ್ತದೆ.​

Advertisement
Tags :
Advertisement