Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಸೊಳ್ಳೆ ಕಾಟ ಅಂತ ಬತ್ತಿ ಹಚ್ಚುತ್ತೀರಾ..? : ಒಂದು ಬತ್ತಿ 75 ಸಿಗರೇಟಿಗೆ ಸಮ ಅಂತೆ..!

05:55 AM Apr 04, 2023 IST | suddionenews
Advertisement

ಈಗಂತು ಬೇಸಿಗೆ ಕಾಲ. ಸ್ವಲ್ಪ ಬೆಳಕಿದ್ದರೆ ಸಾಕು ಮನೆಯ ಒಳಗೆ ಸೊಳ್ಳೆಗಳು ಬಂದು ಬಿಡುತ್ತವೆ. ಸೆಕೆಗಾಲ ಆಗಿರುವ ಕಾರಣ ಬೆಚ್ಚಗೆ ಹೊದ್ದು, ಸೊಳ್ಳೆಗಳಿಂದ ತಪ್ಪಿಸಿಕೊಳ್ಳುವ ಹಾಗೂ ಇಲ್ಲ. ಈ ಸೊಳ್ಳೆಗಳಿಂದ ತಪ್ಪಿಸಿಕೊಳ್ಳಲು 99% ಜನ ಮಾಡುವುದು ಸೊಳ್ಳೆ ಬತ್ತಿ ಹಚ್ಚುವುದು. ಹಾಗಾದ್ರೆ ಈ ರೀತಿ ಸೊಳ್ಳೆ ಬತ್ತಿ ಹಚ್ಚುವುದರಿಂದ ಏನೆಲ್ಲಾ ಅಪಾಯವಿದೆ ಗೊತ್ತಾ..?

Advertisement

ಸೊಳ್ಳೆಗಳನ್ನು ಕೊಲ್ಲಲು ಹಚ್ಚುವ ಬತ್ತಿಗಳು ನಮ್ಮ ಆರೋಗ್ಯವನ್ನೇ ಹಾಳು ಮಾಡುವ ಶಕ್ತಿ ಹೊಂದಿದೆ. ಸೊಳ್ಳೆ‌ ಬತ್ತಿ ಹಾನಿಕಾರಕ ರಾಸಾಯನಿಕವನ್ನು ಬಿಡುಗಡೆ ಮಾಡುತ್ತದೆ.ಇದು ದೇಹಕ್ಕೆ ಸಾಕಷ್ಟು ಹಾನಿಯನ್ನುಂಟು ಮಾಡುತ್ತದೆ. ಒಂದು ಸೊಳ್ಳೆ ಬತ್ತಿ 75 ಸಿಗರೇಟಿಗೆ ಸಮ ಅಂತೆ.

ವರದಿಗಳ ಪ್ರಕಾರ ಸೊಳ್ಳೆ ಸಾಯಲು ಹಚ್ಚುವ ಕಾಯಿಲ್ ಗಳು ವಾಯುಮಾರ್ಗದಲ್ಲಿ ಒತ್ತಡವನ್ನು ಹೆಚ್ಚು ಮಾಡುತ್ತವೆಯಂತೆ. ಉಸಿರಾಟದ ಸಮಸ್ಯೆಯೂ ಹೆಚ್ಚಾಗುತ್ತದೆಯಂತೆ. ಸ್ವಾಸಕೋಶವೂ ಹಾನಿಯಾಗುತ್ತದೆ ಎಂದು ವರದಿಗಳು ತಿಳಿಸಿವೆ.

Advertisement

ಈ ಕಾಯಿಲ್ ಹೊಗೆಯನ್ನು ಕುಡೊಯುವುದರಿಂದ ಅಸ್ತಮಾದಂತ‌ ಕಾಯಿಲೆಗಳು ಕಾಡುತ್ತವೆಯಂತೆ. ಮಕ್ಕಳ ಉಸಿರಾಟದ ಮೇಲೂ ಇದು ಕೆಟ್ಟ ಪರಿಣಾಮ ಉಂಟು ಮಾಡುತ್ತದೆ ಎಂದು ಹೇಳಲಾಗುತ್ತದೆ. ಹೀಗಾಗಿ ಸೊಳ್ಳೆ ಓಡಿಸಲು ಬತ್ತಿ ಹಚ್ಚುವ ಮುನ್ನ ಎಚ್ಚರವಿರಲಿ.

Advertisement
Tags :
75 ಸಿಗರೇಟಿbangalorefeaturedhealth tipshealth tips kannadakannada health tipsಆರೋಗ್ಯ ಮಾಹಿತಿಆರೋಗ್ಯ ಸಲಹೆಒಂದು ಬತ್ತಿಬತ್ತಿಬೆಂಗಳೂರುಸೊಳ್ಳೆ ಕಾಟ
Advertisement
Next Article