Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಪ್ರತಿ ದಿನ ಕಿವಿ ಸ್ವಚ್ಚಗೊಳಿಸುತ್ತೀರಾ..? ಹಾಗಾದ್ರೆ ಎಚ್ಚರ ಈ ಸಮಸ್ಯೆ ಎದುರಾಗಬಹುದು..!

07:47 AM Feb 25, 2024 IST | suddionenews
Advertisement

ಕೆಲವೊಮ್ಮೆ ಬಡ್ಸ್ ನೋಡಿದರೆ, ಪಿನ್ ನೋಡಿದರೆ ಕೆಲವರಿಗೆ ಕಿವಿ ಕಡಿದಂತೆ ಆಗುತ್ತದೆ. ಆಗ ಕಿವಿಯನ್ನು ಸ್ವಚ್ಛಗೊಳಿಸಲು ಮುಂದಾಗುತ್ತಾರೆ. ಕೆಲವೊಂದಿಷ್ಟು ಮಂದಿಗಂತು ಪ್ರತಿದಿನ ಕಿವಿಗೆ ಬಡ್ಸ್ ಅಥವಾ ಪಿನ್ ಹಾಕುವ ಅಭ್ಯಾಸ ಇದ್ದೇ ಇರುತ್ತದೆ. ಆದ್ರೆ ಪ್ರತಿದಿನ ಈ ರೀತಿ ಕಿವಿಯನ್ನು ಸ್ವಚ್ಛಗೊಳಿಸುವ ಅಗತ್ಯವಿದೆಯಾ..? ಒಂದು ವೇಳೆ ಅಂತಹ ಅಭ್ಯಾಸವಿದ್ದವರಿಗೆ ಏನೆಲ್ಲಾ ತೊಂದರೆ ಎದುರಾಗುತ್ತದೆ ಎಂಬುದರ ಮಾಹಿತಿ ಇಲ್ಲಿದೆ.

Advertisement

 

ಹೀಗೆ ಪ್ರತಿದಿನವೂ ಕಿವಿಯನ್ನು ಸ್ವಚ್ಛಗೊಳಿಸುವುದು ಒಳ್ಳೆಯದಾ ಎಂದು ಕೇಳಿದರೆ ವೈದ್ಯರು ಖಂಡಿತಾ ಇಲ್ಲ ಎನ್ನುತ್ತಾರೆ. ಒಂದು ವೇಳೆ ಪ್ರತಿದಿನ ಕಿವಿಯನ್ನು ಸ್ವಚ್ಛಗೊಳಿಸುವುದಕ್ಕೆ ಬಡ್ಸ್, ಪಿನ್ ಹಾಕಿದವರಿಗೆ ಒಂದಲ್ಲ ಒಂದು ರೀತಿಯಲ್ಲಿ ಕಿವಿಯ ಸಮಸ್ಯೆ ಕಾಡುತ್ತದೆ ಎಂದಿದ್ದಾರೆ. ಕಿವಿ ತುಂಬಾನೇ ಸೂಕ್ಷ್ಮವಾಗಿರುತ್ತದೆ. ಹೀಗಾಗಿ ಪ್ರತಿದಿನ ಸ್ವಚ್ಛ ಮಾಡುವುದು, ನೀರನ್ನು ಹಾಕುವುದನ್ನು ಮಾಡಬಾರದು.

Advertisement

 

ತಲೆ ಸ್ನಾನ ಮಾಡುವಾಗ ಕಿವಿ ಹೊರಭಾಗದಲ್ಲಿ ವ್ಯಾಸಲಿನ್‌ ಲೇಪಿತ ಹತ್ತಿಯನ್ನು ಕಿವಿಯ ಮುಂಭಾಗದಲ್ಲಿ ಇರಿಸಿ.

* ಕಿವಿಯಲ್ಲಿ ಕಡಿತ ಉಂಟಾದರೆ ಕೇವಲ ವ್ಯಾಕ್ಸ್‌ನಿಂದಲೇ ಬರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಕೆಲವೊಮ್ಮೆ ಒಣಗುವಿಕೆ ಮತ್ತು ಅಲರ್ಜಿಯಿಂದಲೂ ಕೂಡ ಕಿವಿಯಲ್ಲಿ ಸಮಸ್ಯೆಗಳು ಕಂಡುಬರುತ್ತವೆ. ಹೀಗಾಗಿ ಕಿವಿಯಲ್ಲಿ ಸ್ವತಃ ಯಾವುದೇ ಔಷಧಿಗಳನ್ನು ಲೇಪಿಸಬೇಡಿ.

* ಶೀತದ ಸಂದರ್ಭದಲ್ಲಿ ನಿಮ್ಮ ಕಿವಿ ಬ್ಲಾಕ್‌ ಆಗಿದ್ದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಿ.

* ಕಿವಿಯ ಹೊರಭಾಗದಲ್ಲಿ ಏನಾದರು ಕಸ ಕಂಡುಬಂದಲ್ಲಿ ನೀವೇ ಸ್ವತಃ ಮೃದು ಬಟ್ಟೆಯಿಂದ ಒರೆಸಿ ಸ್ವಚ್ಛಗೊಳಿಸಿ.

Advertisement
Tags :
featuredhealth tipshealth tips kannadakannada health tipsಆರೋಗ್ಯ ಮಾಹಿತಿಆರೋಗ್ಯ ಸಲಹೆಎಚ್ಚರಕಿವಿ ಸ್ವಚ್ಚ
Advertisement
Next Article