Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಹಸು ಅಥವಾ ಎಮ್ಮೆ ಹಾಲು : ಎರಡರಲ್ಲಿ ಯಾವುದು ಬೆಸ್ಟ್..?

05:55 AM Dec 02, 2023 IST | suddionenews
Advertisement

ಹಾಲಿನಲ್ಲಿ ಸಿಗುವ ಕ್ಯಾಲ್ಶಿಯಂ ಅಂಶ ನಮ್ಮ ದೇಹದ ಮೂಳೆಗಳ ಬೆಳವಣಿಗೆಗೆ ಹಾಗೂ ನಮ್ಮ ದೇಹದ ಸಮಗ್ರ ಅಭಿವೃದ್ಧಿಗೆ ತುಂಬಾ ಒಳ್ಳೆಯದು. ಹಾಲಿನ ಯಾವುದೇ ಉತ್ಪನ್ನಗಳು ಆರೋಗ್ಯಕರ ಎಂದು ನಂಬಲಾಗಿದೆ. ಅದಕ್ಕೆ ಕಾರಣ ಇವುಗಳ ನೈಸರ್ಗಿಕ ರೂಪ. ನಾವೂ ಕುಡಿಯುವ ಹಾಲಿನಲ್ಲಿ ಹಸು ಅಥವಾ ಎಮ್ಮೆ, ಎರಡರಲ್ಲಿ ಯಾವುದರ ಹಾಲು ಸೂಕ್ತ ? ನಮ್ಮ ಆರೋಗ್ಯಕ್ಕೆ ಯಾವುದರಿಂದ ಹೆಚ್ಚು ಲಾಭ ಉಂಟಾಗುತ್ತದೆ ಎಂಬ ಪ್ರಶ್ನೆಗಳು ಎಲ್ಕರಲ್ಲೂ ಇರುತ್ತದೆ.

Advertisement

* ಎಮ್ಮೆ ಹಾಲಿಗೆ ಹೋಲಿಸಿದರೆ ಹಸುವಿನ ಹಾಲು ಅತ್ಯಂತ ಕಡಿಮೆ ಕೊಬ್ಬಿನ ಅಂಶವನ್ನು ಹೊಂದಿದೆ. ಹಾಗಾಗಿ ಎಮ್ಮೆ ಹಾಲು ಹಸುವಿನ ಹಾಲಿಗಿಂತ ನೋಡಲು ಸ್ವಲ್ಪ ಗಟ್ಟಿ ಕಾಣುತ್ತದೆ. ಸರಾಸರಿಯಲ್ಲಿ ಹೇಳಬೇಕಾದರೆ ಹಸುವಿನ ಹಾಲು 3 - 4 % ಕೊಬ್ಬಿನ ಅಂಶವನ್ನು ಹೊಂದಿದ್ದರೆ, ಎಮ್ಮೆ ಹಾಲು 7 - 8 % ದಷ್ಟು ಕೊಬ್ಬಿನ ಅಂಶವನ್ನು ಹೊಂದಿದೆ. ಇದರಿಂದ ಎಮ್ಮೆಯ ಹಾಲು ಜೀರ್ಣ ಆಗಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ ಮತ್ತು ದೀರ್ಘ ಕಾಲದವರೆಗೆ ಹೊಟ್ಟೆ ಹಸಿವು ಉಂಟಾಗದಂತೆ ನೋಡಿಕೊಳ್ಳುತ್ತದೆ.

* ನಿರ್ಜಲೀಕರಣದ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಹಸುವಿನ ಹಾಲು ತುಂಬಾ ಸೂಕ್ತ. ಹಸುವಿನ ಹಾಲಿನಲ್ಲಿ ಶೇಕಡ 90 % ನೀರಿನ ಅಂಶ ತುಂಬಿದೆ. ಇದು ನಿಮ್ಮ ದೇಹವನ್ನು ನಿರ್ಜಲೀಕರಣ ಆಗದಂತೆ ನೋಡಿಕೊಳ್ಳುತ್ತದೆ.

Advertisement

* ಹಸುವಿನ ಹಾಲು ಮತ್ತು ಎಮ್ಮೆಯ ಹಾಲು ಎರಡು ಹಾಳು ಆಗುವುದರಲ್ಲಿಯೂ ಸಮಯ ವಿಭಿನ್ನವಾಗಿದೆ. ಎರಡು ದಿನದಲ್ಲಿ ಹಸುವಿನ ಹಾಲು ಕೆಟ್ಟು ಹೋಗುತ್ತದೆ. ಆದರೆ ಎಮ್ಮೆಯ ಹಾಲು ಹೆಚ್ಚು ದಿನಗಳವರೆಗೆ ಹಾಳು ಆಗುವುದಿಲ್ಲ. ಇನ್ನು, ಹಾಲು ಸೇವಿಸುವಾಗ ಹಾಳಾಗಿರುವ ಹಾಲನ್ನು ಸೇವನೆ ಮಾಡಬಾರದು.

* ಹಸುವಿನ ಹಾಲಿಗೆ ಹೋಲಿಸಿದರೆ ಎಮ್ಮೆಯ ಹಾಲಿನಲ್ಲಿ ಶೇ. 10-11ರಷ್ಟು ಪ್ರೋಟೀನ್ ಇರುತ್ತದೆ. ಹೆಚ್ಚಿನ ಪ್ರಮಾಣದ ಪ್ರೋಟೀನ್‌ನಿಂದಾಗಿ ಎಮ್ಮೆಯ ಹಾಲನ್ನು ಚಿಕ್ಕ ಮಕ್ಕಳು ಮತ್ತು ವೃದ್ಧರಿಗೆ ಕುಡಿಯಲು ಸೂಚಿಸುವುದಿಲ್ಲ.

Advertisement
Tags :
buffalo milkCow milkfeaturedhealth tipshealth tips kannadakannada health tipsWhich one is the bestಆರೋಗ್ಯ ಮಾಹಿತಿಆರೋಗ್ಯ ಸಲಹೆಎಮ್ಮೆ ಹಾಲುಹಸು ಹಾಲು
Advertisement
Next Article