Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

Coconut Water : ಬೇಸಿಗೆಯಲ್ಲಿ ಎಳನೀರನ್ನು ಎಲ್ಲರೂ ಕುಡಿಬಹುದಾ ? ಈ ಸಮಸ್ಯೆ ಇರುವವರು ಕುಡಿಯಬಾರದು....!

05:49 AM Apr 06, 2024 IST | suddionenews
Advertisement

ಸುದ್ದಿಒನ್ : ಬೇಸಿಗೆಯಲ್ಲಿ ಎಳನೀರನ್ನು ತುಂಬಾ ಜನರು ಕುಡಿಯುತ್ತಾರೆ. ಏಕೆಂದರೆ ಇದು ದೇಹವನ್ನು ಹೈಡ್ರೇಟ್ ಆಗಿ ಇಡುತ್ತದೆ. ಎಳನೀರು ನಿರ್ಜಲೀಕರಣವನ್ನು ತಡೆಯುವ ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಇದು ಹೆಚ್ಚಿನ ಎಲೆಕ್ಟ್ರೋಲೈಟ್ ಮಟ್ಟವನ್ನು ಹೊಂದಿದೆ. ಹಾಗಾಗಿ ಎಳನೀರನ್ನು ಕುಡಿಯುವುದರಿಂದ ನಿರ್ಜಲೀಕರಣವನ್ನು ತಡೆಯಬಹುದು. ತೆಂಗಿನ ನೀರು ಕೂಡ ಅನೇಕ ವಿಟಮಿನ್‌ಗಳನ್ನು ಒಳಗೊಂಡಿದೆ. ಅವುಗಳಲ್ಲಿ ಪ್ರಮುಖವಾದದ್ದು ವಿಟಮಿನ್ ಸಿ. ಈ ವಿಟಮಿನ್ ನಮ್ಮ ಚರ್ಮವನ್ನು ಸೂರ್ಯನ ಬೆಳಕು ಮತ್ತು ಶಾಖದಿಂದ ರಕ್ಷಿಸುತ್ತದೆ. ಇದು ರೋಗನಿರೋಧಕ ಶಕ್ತಿಯನ್ನು ಸಹ ಹೆಚ್ಚಿಸುತ್ತದೆ. ಬೇಸಿಗೆಯಲ್ಲಿ ಎಲ್ಲರೂ ಇದನ್ನು ಕುಡಿಯಬಹುದು ಎಂಬುದು ಜನರ ನಂಬಿಕೆ. ತೆಂಗಿನ ನೀರು ಅರೋಗ್ಯಕ್ಕೆ ತುಂಬಾ ಉಪಕಾರಿಯಾದರೂ ಕೆಲವರು ಮಾತ್ರ  ಈ ನೀರನ್ನು ಕುಡಿಯಬಾರದು.

Advertisement

ಎಳ ನೀರನ್ನು ಸೇವಿಸುವುದರಿಂದ ಕೆಲವರಿಗೆ ಸಮಸ್ಯೆಯಾಗಬಹುದು ಹಾಗಾಗಿ  ಈ ನೀರನ್ನು ಕುಡಿಯುವುದರಿಂದ ದೂರವಿರಬೇಕು. ಯಾರು ಎಳನೀರು ಕುಡಿಯುವುದು ಒಳ್ಳೆಯದಲ್ಲ ಎಂದು ತಿಳಿದುಕೊಳ್ಳೋಣ..

ಎಳ ನೀರು ಪೋಷಕಾಂಶಗಳಿಂದ ಸಮೃದ್ಧವಾಗಿದೆ : ಎಳ ನೀರನ್ನು ಪೊಟ್ಯಾಸಿಯಮ್‌ ನ ಅತ್ಯುತ್ತಮ ಮೂಲವೆಂದು ಪರಿಗಣಿಸಲಾಗಿದೆ. ಇದು ಮೆಗ್ನೀಸಿಯಮ್, ಕ್ಯಾಲ್ಸಿಯಂ, ಉತ್ಕರ್ಷಣ ನಿರೋಧಕಗಳು ಮತ್ತು ಅಮೈನೋ ಆಮ್ಲಗಳಂತಹ ಪೋಷಕಾಂಶಗಳನ್ನು ಸಹ ಒಳಗೊಂಡಿದೆ. ಕುತೂಹಲಕಾರಿಯಾಗಿ, ಇದು ಕಡಿಮೆ ಕ್ಯಾಲೊರಿಗಳನ್ನು ಹೊಂದಿರುತ್ತದೆ. ಎಳ ನೀರಿನಲ್ಲಿ ಕಾರ್ಬೋಹೈಡ್ರೇಟ್‌ಗಳು ಮತ್ತು ನೈಸರ್ಗಿಕ ಸಕ್ಕರೆ ಕೂಡ ಇದೆ. ಎಳ ನೀರು ಮೂತ್ರಪಿಂಡದ ಕಲ್ಲುಗಳ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ. ಅಷ್ಟೇ ಅಲ್ಲದೇ ಯಾರಿಗಾದರೂ ಬಿಪಿ ಹೆಚ್ಚಿದ್ದರೆ,ಅವರು ಈ ಆರೋಗ್ಯಕರ ಪಾನೀಯವನ್ನು ಕುಡಿಯಬಹುದು. ಏಕೆಂದರೆ ಇದು ಪೊಟ್ಯಾಸಿಯಮ್ ನಿಂದ ಸಮೃದ್ಧವಾಗಿದೆ. ಇದಲ್ಲದೆ, ಎಳ ನೀರು ಶಕ್ತಿಯುತವಾಗಿರಲು ಸಹಾಯ ಮಾಡುತ್ತದೆ.

Advertisement

ಕೆಲವರು ತೆಂಗಿನಕಾಯಿ ನೀರಿನಿಂದ ದೂರವಿರಬೇಕು.. ಯಾಕೆ ಗೊತ್ತಾ?

ಈಗಾಗಲೇ ಕಿಡ್ನಿ ಸಮಸ್ಯೆ ಇರುವವರು ಎಳನೀರು ಕುಡಿಯಬಾರದು ಎನ್ನುತ್ತಾರೆ ತಜ್ಞರು. ಇದರಲ್ಲಿ ಇರುವ ಹೆಚ್ಚಿನ ಪೊಟ್ಯಾಸಿಯಮ್ ಅಂಶದಿಂದಾಗಿ ಮೂತ್ರಪಿಂಡದಲ್ಲಿ ಪೊಟ್ಯಾಸಿಯಮ್ ಮಟ್ಟವನ್ನು ಹೆಚ್ಚಿಸುತ್ತದೆ. ಇದು ಮೂತ್ರಪಿಂಡ ಕಾಯಿಲೆಯ ಸಮಸ್ಯೆಯನ್ನು ಹೆಚ್ಚಿಸುತ್ತದೆ. ದೇಹದಲ್ಲಿ ಪೊಟ್ಯಾಸಿಯಮ್ ಪ್ರಮಾಣ ಹೆಚ್ಚಿರುವ ಯಾರಾದರೂ ಎಳ ನೀರನ್ನು ತಜ್ಞರ ಸಲಹೆಯಂತೆ ಮಾತ್ರ ಕುಡಿಯಬೇಕು. ಕೆಲವರಿಗೆ ಹೆಚ್ಚಿನ ಪೊಟ್ಯಾಸಿಯಮ್‌ನಿಂದ ದೇಹದಲ್ಲಿ ಎಲೆಕ್ಟ್ರೋಲೈಟ್ ಅಸಮತೋಲನೆಯ ಸಮಸ್ಯೆಗಳನ್ನು ಅನುಭವಿಸಬಹುದು.

ಅಲರ್ಜಿಯಿಂದ ಬಳಲುತ್ತಿರುವ ಜನರು : 

ಎಳನೀರು ಕುಡಿದಾಗ ಯಾರಿಗಾದರೂ ಶೀತ,  ಅಲರ್ಜಿ ಇರುವವರು ಎಳ ನೀರನ್ನು ಕುಡಿಯಬಾರದು. ಇದಲ್ಲದೆ, ಬೇರೆ  ಯಾವುದಾದರೂ ಅಲರ್ಜಿ ಸಮಸ್ಯೆಯಿಂದ ಬಳಲುತ್ತಿದ್ದರೆ, ಅವರು ಕೂಡ ತಜ್ಞರ ಸಲಹೆಯ ಮೇರೆಗೆ ಎಳ ನೀರನ್ನು ಕುಡಿಯಬೇಕು.

ಈ ವಿಷಯಗಳನ್ನು ನೆನಪಿಡಿ

ಎಳ ನೀರು ಕುಡಿಯುವವರು ಕೆಲವು ತಪ್ಪುಗಳನ್ನು ಮಾಡುತ್ತಾರೆ. ಪ್ಯಾಕ್ ಮಾಡಿದ ಅಥವಾ ರೆಫ್ರಿಜರೇಟೆಡ್ ಎಳ ನೀರನ್ನು ಕುಡಿಯುವುದನ್ನು ಬಿಡಬೇಕು. ಎಳ ನೀರು ಕುಡಿಯಲು ಮಧ್ಯಾಹ್ನದ ಸಮಯ ಸೂಕ್ತ. ನೀವು ತೂಕ ಇಳಿಸಿಕೊಳ್ಳಲು ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕೆಂದರೆ ತಜ್ಞರನ್ನು ಸಂಪರ್ಕಿಸದೆ ಈ ವಿಧಾನವನ್ನು ಪ್ರಯತ್ನಿಸಬೇಡಿ.

(ಪ್ರಮುಖ ಸೂಚನೆ: ಆರೋಗ್ಯ ತಜ್ಞರು ಮತ್ತು ಇತರ ಅಧ್ಯಯನಗಳಿಂದ ಪಡೆದ ಮಾಹಿತಿಯ ಆಧಾರದ ಮೇಲೆ ನಾವು ಈ ವಿವರಗಳನ್ನು ಒದಗಿಸುತ್ತಿದ್ದೇವೆ. ವಿಷಯಗಳು ಕೇವಲ ತಿಳುವಳಿಕೆಗಾಗಿ ಮಾತ್ರ. ನಿಮಗೆ ಯಾವುದೇ ಅನುಮಾನಗಳು ಅಥವಾ ಸಮಸ್ಯೆಗಳಿದ್ದರೆ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ.)

Advertisement
Tags :
bengaluruchitradurgaCoconut Waterfresh waterhealth tipsproblemsuddionesuddione newsSummerಆರೋಗ್ಯ ಮಾಹಿತಿಎಳನೀರುಚಿತ್ರದುರ್ಗಬೆಂಗಳೂರುಬೇಸಿಗೆಸಮಸ್ಯೆಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article