For the best experience, open
https://m.suddione.com
on your mobile browser.
Advertisement

Clove for Diabetes : ಲವಂಗದಿಂದ ಮಧುಮೇಹವನ್ನು ಕಡಿಮೆ ಮಾಡುವುದು ಹೇಗೆ ?

06:30 AM Jul 08, 2024 IST | suddionenews
clove for diabetes   ಲವಂಗದಿಂದ ಮಧುಮೇಹವನ್ನು ಕಡಿಮೆ ಮಾಡುವುದು ಹೇಗೆ
Advertisement

ಸುದ್ದಿಒನ್ : ವಿಶ್ವಾದ್ಯಂತ ಮಧುಮೇಹದಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಒಮ್ಮೆ ಈ ಖಾಯಿಲೆ ಬಂದರೆ ಜೀವನ ಪರ್ಯಂತ ಕಾಡುತ್ತದೆ. ಆದ್ದರಿಂದ ಮುಂಚಿತವಾಗಿ ಕಾಳಜಿ ವಹಿಸಿದರೆ, ಆರೋಗ್ಯಕರ ಮತ್ತು ಸುಂದರವಾಗಿರಬಹುದು. ನಾವು ಮನೆಯಲ್ಲಿ ನಿತ್ಯ ಬಳಸುವ ಸಾಂಬಾರ ಪದಾರ್ಥಗಳಿಂದ ಹಲವಾರು ರೀತಿಯ ಕಾಯಿಲೆಗಳನ್ನು ಕಡಿಮೆ ಮಾಡಬಹುದು.

Advertisement
Advertisement

ಆಯುರ್ವೇದದಲ್ಲಿಯೂ ಅನೇಕ ರೋಗಗಳನ್ನು ಮನೆಮದ್ದುಗಳಿಂದ ಗುಣಪಡಿಸಲಾಗುತ್ತದೆ. ಮಧುಮೇಹವನ್ನು ನಿಯಂತ್ರಿಸಲು ಹಲವು ಸಲಹೆಗಳು ಈಗಾಗಲೇ ತಿಳಿದಿದ್ದೇವೆ. ಅಡುಗೆಮನೆಯಲ್ಲಿರುವ ಲವಂಗವು ಮಧುಮೇಹವನ್ನು ನಿಯಂತ್ರಿಸಲು ಸಹ ಸಹಾಯ ಮಾಡುತ್ತದೆ. ಲವಂಗದಿಂದ ಮಧುಮೇಹವನ್ನು ಕಡಿಮೆ ಮಾಡುವುದು ಹೇಗೆ? ಮಧುಮೇಹಿಗಳಿಗೆ ಲವಂಗ ಸೇವನೆಯಿಂದ ಆಗುವ ಲಾಭಗಳೇನು ಎಂಬುದನ್ನು ಈಗ ತಿಳಿಯೋಣ.

ಔಷಧೀಯ ಗುಣಗಳು:

Advertisement
Advertisement

ಲವಂಗದಲ್ಲಿ ಹಲವಾರು ಔಷಧೀಯ ಗುಣಗಳಿವೆ. ವಿಟಮಿನ್ ಗಳು, ಮಿನರಲ್ಸ್ ಗಳು, ಖನಿಜಗಳು ಮತ್ತು ನಾರಿನಂಶವನ್ನು ಹೊಂದಿದೆ. ಅವು ಮ್ಯಾಂಗನೀಸ್ ಮತ್ತು ವಿಟಮಿನ್ ಕೆ ಅನ್ನು ಸಹ ಹೊಂದಿರುತ್ತವೆ. ಅವು ಮೂಳೆಗಳನ್ನು ಆರೋಗ್ಯಕರವಾಗಿ ಮತ್ತು ಬಲವಾಗಿಡುತ್ತವೆ. ಲವಂಗದಲ್ಲಿ ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿವೆ. ಇದರಿಂದ ಅನೇಕ ಸಮಸ್ಯೆಗಳನ್ನು ನಿಯಂತ್ರಿಸಬಹುದು.

ಒತ್ತಡವನ್ನು ಕಡಿಮೆ ಮಾಡುತ್ತದೆ :

ಆಹಾರದಲ್ಲಿ ಲವಂಗವನ್ನು  ಬಳಸುವುದರಿಂದ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಒತ್ತಡ ಮತ್ತು ಆತಂಕದಿಂದ ಮಧುಮೇಹ ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ. ಒತ್ತಡವು ಮಧುಮೇಹ ಮಾತ್ರವಲ್ಲದೆ ಅನೇಕ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಆದ್ದರಿಂದ ಲವಂಗವನ್ನು ತೆಗೆದುಕೊಳ್ಳುವುದರಿಂದ ಒತ್ತಡವನ್ನು ನಿಯಂತ್ರಿಸಬಹುದು.

ಮಧುಮೇಹಿಗಳಿಗೆ ಲವಂಗವನ್ನು ಹೇಗೆ ತೆಗೆದುಕೊಳ್ಳುವುದು :

ಮಧುಮೇಹಿಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಲವಂಗವನ್ನು ಸೇವಿಸುತ್ತಾರೆ. ಆದರೆ ಲವಂಗವನ್ನು ಹೇಗೆ ತೆಗೆದುಕೊಳ್ಳಬೇಕು ಎಂಬ ಬಗ್ಗೆ ಅನುಮಾನವಿದೆ. ಪ್ರತಿ ದಿನ 8 ರಿಂದ 10 ಲವಂಗವನ್ನು ಒಂದು ಲೋಟ ನೀರಿನಲ್ಲಿ ಕುದಿಸಿ ನಂತರ ಸೋಸಿ ಉಗುರು ಬೆಚ್ಚಗಿರುವಾಗ ಅದನ್ನು ಕುಡಿಯಿರಿ. ಮೂರು ತಿಂಗಳ ಕಾಲ ಈ ಪಾನೀಯವನ್ನು ಕುಡಿದರೆ ಉತ್ತಮ ಫಲಿತಾಂಶವನ್ನು ಕಾಣಬಹುದು. ಇದರ ಜೊತೆಗೆ ಆಹಾರ ಸೇವನೆಯೂ ನಿಯಂತ್ರಣದಲ್ಲಿರಬೇಕು.

(ಪ್ರಮುಖ ಸೂಚನೆ: ಆರೋಗ್ಯ ತಜ್ಞರು ಮತ್ತು ಇತರ ಅಧ್ಯಯನಗಳಿಂದ ಪಡೆದ ಮಾಹಿತಿಯ ಆಧಾರದ ಮೇಲೆ ನಾವು ಈ ವಿವರಗಳನ್ನು ಒದಗಿಸುತ್ತಿದ್ದೇವೆ. ವಿಷಯಗಳು ಕೇವಲ ತಿಳುವಳಿಕೆಗಾಗಿ ಮಾತ್ರ. ನಿಮಗೆ ಯಾವುದೇ ಅನುಮಾನಗಳು ಅಥವಾ ಸಮಸ್ಯೆಗಳಿದ್ದರೆ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ.)

Tags :
Advertisement