ಕೆಲವೊಬ್ಬರ ದೇಹಕ್ಕೆ ಈ ಆಹಾರಗಳೇ ಗ್ಯಾಸ್ಟ್ರಿಕ್ ಸಮಸ್ಯೆಯನ್ನುಂಟು ಮಾಡುತ್ತವೆ ಎಚ್ಚರ..!
ಗ್ಯಾಸ್ಟ್ರಿಕ್ ಸಮಸ್ಯೆ ಅನ್ನೋದು ಈಗ ಎಲ್ಲರ ಪಾಲಿಗೆ ಕೊಂಚ ಹೆಚ್ಚೆ ಯಮಧೂತವಾಗಿ ಕಾಡುವುದಕ್ಕೆ ಶುರುವಾಗಿದೆ. ಅದಕ್ಕೆ ಕಾರಣ ಹಲವು. ಕೆಲವೊಂದಿಷ್ಟು ಮಂದಿ ಹೊರಗಡೆಯ ಊಟಕ್ಕೆ ಬಹಳ ಅಡಿಕ್ಟ್ ಆಗಿರುತ್ತಾರೆ. ಹೀಗಾಗಿ ಸೋಡಾ ಜಾಸ್ತಿಯಾದಾಗಲೂ ಗ್ಯಾಸ್ಟ್ರಿಕ್ ಸಮಸ್ಯೆ ಕಾಡುವುದಕ್ಕೆ ಶುರುವಾಗುತ್ತದೆ. ಇನ್ನು ಕೆಲವರಿಗೆ ಆಹಾರ ಪದಾರ್ಥಗಳಿಂದಾನೂ ಗ್ಯಾಸ್ಟ್ರಿಕ್ ಸಮಸ್ಯೆ ಕಾಡುವುದಕ್ಕೆ ಶುರುವಾಗುತ್ತದೆ.
ಗ್ಯಾಸ್ಟ್ರಿಕ್ ಸಮಸ್ಯೆಯನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡುವಂತದ್ದೇ ಅಲ್ಲ. ನಿರ್ಲಕ್ಷ್ಯ ಮಾಡಬಾರದು ಕೂಡ. ಹೀಗಾಗಿ ಯಾವೆಲ್ಲಾ ಆಹಾರ ಪದಾರ್ಥ ತಿನ್ನುವುದರಿಂದ ಗ್ಯಾಸ್ಟ್ರಿಕ್ ಸಮಸ್ಯೆ ಕಾಡುತ್ತದೆ ಎಂಬುದನ್ನು ಮುಂದೆ ತಿಳಿಯಿರಿ.
ಕೆಲವೊಂದಿಷ್ಟು ಜನರಿಗೆ ಪಾಪ್ ಕಾರ್ನ್ ಆಗಿ ಬರಲ್ಲ. ಪಾಪ್ ಕಾರ್ನ್ ತಿಂದರೆ ಹಿಂದೆಯೇ ಗ್ಯಾಸ್ಟ್ರಿಕ್ ಸಮಸ್ಯೆ ಕೂಡ ಕಾಡುತ್ತದೆ. ಹೀಗಾಗಿ ಅಂತವರು ಪಾಪ್ ಕಾರ್ನ್ ನಿಂದ ದೂರ ಇರುವುದು ಉತ್ತಮ.
ಸಲಾಡ್ ತಿನ್ನುವುದು ಆರೋಗ್ಯಕ್ಕೆ ಉತ್ತಮ. ಅದು ಪ್ರೂಟ್ಸ್ ಸಲಾಡ್ ಆದರೆ ಮಾತ್ರ. ತರಕಾರಿಯಲ್ಲೂ ಸಲಾಡ್ ಬೆಸ್ಟ್. ಆದರೆ ಕೆಲವೊಂದು ತರಕಾರಿಯನ್ನು ಹಸಿ ಹಸಿಯಾಗಿ ತಿನ್ನುವುದರಿಂದ ಗ್ಯಾಸ್ಟ್ರಿಕ್ ಸಮಸ್ಯೆ ಉಂಟಾಗುತ್ತದೆ. ಅದರಲ್ಲೂ ಜೀರ್ಣಕ್ರಿಯೆಗೆ ತೊಂದರೆಯಾಗುತ್ತದೆ. ಹೀಗಾಗಿ ಸ್ವಲ್ಪ ಬೇಯಿಸಿದ ತರಕಾರಿಯನ್ನೇ ತಿನ್ನಿ.
ಇನ್ನು ಚ್ಯುಯಿಂಗ್ ಗಮ್. ಇದನ್ನ ಕೆಲವರು ಹೇಗೆ ಅಭ್ಯಾಸ ಮಾಡಿಕೊಂಡಿರುತ್ತಾರೆ ಎಂದರೆ, ಯಾವಾಗಲೂ ಜಗಿಯುತ್ತಾ ಇರುತ್ತಾರೆ. ಚ್ಯೂಯಿಂಗ್ ಗಮ್ ಜಗಿಯುವುದರಿಂದಾನೆ ಹೊಟ್ಟೆಯಲ್ಲಿ ಗ್ಯಾಸ್ ಕ್ರಿಯೇಟ್ ಆಗುತ್ತದೆ. ಹೀಗಾಗಿ ಗ್ಯಾಸ್ಟ್ರಿಕ್ ಸಮಸ್ಯೆಯೂ ಉಲ್ಭಣವಾಗುತ್ತದೆ. ಚ್ಯೂಯಿಂಗ್ ಗಮ್ ಜಗಿಯುವ ಅಭ್ಯಾಸವಿದ್ದರೆ, ಆದಷ್ಟು ಬಿಟ್ಟು ಬಿಡುವುದು ಉತ್ತಮ.