For the best experience, open
https://m.suddione.com
on your mobile browser.
Advertisement

ನೀವೂ ಸಸ್ಯಹಾರಿಗಳಾ..? ಕಬ್ಬಿಣಾಂಶ.. ಕ್ಯಾಲ್ಶಿಯಂಗಾಗಿ ರಾಗಿ ಸೇವಿಸಿ..!

06:26 AM Aug 31, 2024 IST | suddionenews
ನೀವೂ ಸಸ್ಯಹಾರಿಗಳಾ    ಕಬ್ಬಿಣಾಂಶ   ಕ್ಯಾಲ್ಶಿಯಂಗಾಗಿ ರಾಗಿ ಸೇವಿಸಿ
Advertisement

ರಾಗಿ ತಿಂದವ ನಿರೋಗಿಯಾಗಿರ್ತಾನೇ ಅನ್ನೋದು ಲೋಕಾರೂಢಿ ಮಾತು. ಹಾಗೇ ಹಿರಿಯರ ಅನುಭವದ ಮಾತು. ರಾಗಿ ತಿನ್ನುವುದರಿಂದ ದೇಹ ಶಕ್ತಿಯುತವಾಗಿಯೂ ಇರುತ್ತೆ, ರೋಗಗಳಿಂದಾನೂ ದೂರ ಇರಬಹುದು. ಯಾಕಂದ್ರೆ ರಾಗಿಯಲ್ಲಿ ಅಷ್ಟು ಪೋಷಾಕಾಂಶಗಳು ಇರುತ್ತವೆ. ನಮ್ಮ ದೇಹಕ್ಕೆ ಎಲ್ಲಾ ರೀತಿಯಿಂದಾನು ಅನುಕೂಲ ಒದಗಿಸುತ್ತದೆ.

Advertisement
Advertisement

ರಾಗಿಯಲ್ಲಿ ಕ್ಯಾಲ್ಶಿಯಂ ಹಾಗೂ ಕಭಿಣದ ಅಂಶಗಳು ಯಥೇಚ್ಛವಾಗಿರುತ್ತವೆ. ಈ ಎರಡು ನಮ್ಮ ದೇಹಕ್ಕೆ ಬೇಕಾದ ಬಹುಮುಖ್ಯವಾದ ಪೋಷಕಾಂಶಗಳು. ಕಬ್ಬಿಣದ ಪೂರೈಕೆ ದೇಹದಲ್ಲಿ ಹೆಚ್ಚಾಗಿಯೇ ಇರಬೇಕು. ಹೀಗಾಗಿ ಈ ಎರಡು ಅಂಶಗಳು ದೇಹದಲ್ಲಿ ಇರಬೇಕು ಅಂದ್ರೆ ರಾಗಿಯನ್ನು ಪ್ರತಿದಿನ ನಿಮ್ಮ ಆಹಾರದಲ್ಲಿ ಸೇವಿಸಬೇಕಾಗುತ್ತದೆ.

ಇನ್ನು ಮನುಷ್ಯನಿಗೆ ಕ್ಯಾಲ್ಶಿಯಂ ಅನ್ನೋದು ಬಹಳ ಮುಖ್ಯ. ಬೆಳೆಯುವ ಮಕ್ಕಳಿಗೆ, ಗರ್ಭಿಣಿಯರಿಗೆ ಅತ್ಯಂತ ಅವಶ್ಯಕವಾಗಿದೆ. ಈಗಂತೂ ಸೂರ್ಯನ ಬಿಸಿಲನ್ನೇ ನೋಡದ ಮಕ್ಕಳಲ್ಲಿ ಮೂಳೆಗಳ ಸಮಸ್ಯೆ ಹೆಚ್ಚಾಗಿಯೇ ಕಾಡುತ್ತದೆ. ಅದಕ್ಕಾಗಿ ವೈದ್ಯರು, ಔಷಧಿಗಳು ಅಂತಾನೇ ಹೋಗುವುದು ಹೆಚ್ಚು. ಅಡುಗೆ ಮನೆಯಲ್ಲಿಯೇ, ತಿನ್ನುವ ಆಹಾರದಲ್ಲಿಯೇ ನಾವೂ ಕ್ಯಾಲ್ಶಿಯಂ ಕಂಡುಕೊಳ್ಳಬಹುದು. ಅದರಲ್ಲಿ ಮುಖ್ಯವಾಗಿ ಬಳಕೆ ಮಾಡಬೇಕಿರುವುದೇ ರಾಗಿ.

Advertisement

ಮಾಂಸಹಾರಿಗಳಿಗೆ ಹೇಗೋ ಒಂದಷ್ಟು ಪೋಷಕಾಂಶಗಳು ಸಿಗುತ್ತವೆ. ಆದರೆ ಸಸ್ಯಹಾರಿಗಳಿಗೆ ವಿಟಮಿನ್ ಕೊರತೆ ಎದುರಾಗಬಾರದು ಎಂದರೆ ರಾಗಿ ಬಳಕೆ ಉತ್ತಮ. ಇದರಲ್ಲಿ ಹೆಚ್ಚಿನ ಕಬ್ಬಿಣಾಂಶ ಇದೆ. ರಾಗಿಯನ್ನ ಸೇವನೆ ಮಾಡುವುದಕ್ಕೆ ಹಲವು ವಿಧಗಳಿವೆ. ಹಲವು ಜಿಲ್ಲೆಯಲ್ಲಿ ಮುದ್ದೆ ಮಾಡಿ ಸವಿದರೆ, ಇನ್ನು ಕೆಲವು ಕಡೆ ಮುದ್ದೆಯ ಬಗ್ಗೆ ಪರಿಚಯವಿರಲ್ಲ. ಹೀಗಾಗಿ ರಾಗಿಯನ್ನ ಮಿಲ್ಲೆಟ್ ರೂಪದಲ್ಲು ತಿನ್ನಬಹುದು. ಹಾಗೇ ಇಡ್ಲಿ, ದೋಸೆಯನ್ನು ಮಾಡಿಕೊಂಡು ತಿನ್ನಬಹುದು. ಒಟ್ಟಾರೆ ದೇಹಕ್ಕೆ ಬೇಕಾದ ಪೋಷಾಕಾಂಶಗಳ ಆಗರವಿರುವ ರಾಗಿಯನ್ನು ತಪ್ಪದೆ ಸೇವಿಸಿ.

Advertisement

(ಪ್ರಮುಖ ಸೂಚನೆ: ಆರೋಗ್ಯ ತಜ್ಞರು ಮತ್ತು ಇತರ ಅಧ್ಯಯನಗಳಿಂದ ಪಡೆದ ಮಾಹಿತಿಯ ಆಧಾರದ ಮೇಲೆ ನಾವು ಈ ವಿವರಗಳನ್ನು ಒದಗಿಸುತ್ತಿದ್ದೇವೆ. ವಿಷಯಗಳು ಕೇವಲ ತಿಳುವಳಿಕೆಗಾಗಿ ಮಾತ್ರ. ನಿಮಗೆ ಯಾವುದೇ ಅನುಮಾನಗಳು ಅಥವಾ ಸಮಸ್ಯೆಗಳಿದ್ದರೆ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ.)

Tags :
Advertisement