For the best experience, open
https://m.suddione.com
on your mobile browser.
Advertisement

Apple Benefits: ಪೋಷಕಾಂಶಗಳು ಹೆಚ್ಚಿರುವ ಸೇಬನ್ನು ಯಾವ ಸಮಯದಲ್ಲಿ ತಿನ್ನಬೇಕು ಗೊತ್ತಾ?

05:55 AM Apr 06, 2024 IST | suddionenews
apple benefits  ಪೋಷಕಾಂಶಗಳು ಹೆಚ್ಚಿರುವ ಸೇಬನ್ನು ಯಾವ ಸಮಯದಲ್ಲಿ ತಿನ್ನಬೇಕು ಗೊತ್ತಾ
Advertisement

ಸುದ್ದಿಒನ್ :  ದಿನಕ್ಕೊಂದು ಸೇಬು ತಿಂದರೆ ವೈದ್ಯರಿಂದ ದೂರ ಉಳಿಯಬಹುದು ಎಂಬ ಮಾತಿದೆ. ಇದನ್ನು ತಿನ್ನುವುದರಿಂದ ಕರುಳನ್ನು ಆರೋಗ್ಯವಾಗಿಡುವ ಬ್ಯಾಕ್ಟೀರಿಯಾಗಳು ಹೆಚ್ಚುತ್ತವೆ. ಇದು ಕೆಲವು ರೀತಿಯ ಕೊಬ್ಬಿನಾಮ್ಲಗಳ ಉತ್ಪಾದನೆಗೆ ಸಹಾಯ ಮಾಡುತ್ತದೆ. ಆದರೆ ದಿನಕ್ಕೊಂದು ಸೇಬು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು. 

Advertisement

ಸೇಬುಗಳಲ್ಲಿ ನಾರಿನಂಶ ಹೆಚ್ಚಾಗಿರುತ್ತದೆ ಮತ್ತು ಇದರಲ್ಲಿ ಕಡಿಮೆ ಕೊಬ್ಬಿನಂಶವಿದೆ. ಅಲ್ಲದೇ ಕಡಿಮೆ ಸೋಡಿಯಂ ಮತ್ತು ಹೆಚ್ಚಿನ ಪೊಟ್ಯಾಸಿಯಮ್ ಅನ್ನು ಹೊಂದಿರುತ್ತವೆ. ಹೆಚ್ಚಿನ ಪ್ರಮಾಣದಲ್ಲಿ ವಿಟಮಿನ್ ಸಿ ಅನ್ನು ಕೂಡಾ ಹೊಂದಿರುತ್ತದೆ

ಸೇಬುಗಳು ವಿವಿಧ ಪೋಷಕಾಂಶಗಳನ್ನು ಹೊಂದಿರುವುದರಿಂದ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ತುಂಬಾ ಉಪಯುಕ್ತವಾಗಿವೆ.

Advertisement

ಸೇಬು ಕೂಡ ತೂಕ ಇಳಿಸಲು ಸಹಾಯ ಮಾಡುತ್ತದೆ. ದೇಹದಲ್ಲಿನ ಯಾವುದೇ ಉರಿಯೂತವನ್ನು ಕಡಿಮೆ ಮಾಡಲು ಮತ್ತು ಹೃದಯವನ್ನು ಆರೋಗ್ಯವಾಗಿಡಲು ಈ ಹಣ್ಣು ಉಪಯುಕ್ತವಾಗಿದೆ.

ದಿನದ ಯಾವ ಸಮಯದಲ್ಲಿ ಸೇಬು ತಿಂದರೆ ಲಾಭ ಹೆಚ್ಚು. ರಾತ್ರಿ ಸೇಬು ತಿನ್ನಬಹುದೋ ಬೇಡವೋ ಎಂಬುದನ್ನೂ ತಿಳಿದುಕೊಳ್ಳಬೇಕು.

ಆರೋಗ್ಯ ತಜ್ಞರ ಪ್ರಕಾರ ಬೆಳಗ್ಗೆ ಸೇಬು ಹಣ್ಣನ್ನು ತಿನ್ನುವುದು ದೇಹಕ್ಕೆ ಒಳ್ಳೆಯದು. ಮಧ್ಯಾಹ್ನ ಊಟದ ನಂತರ ಸೇಬು ತಿನ್ನುವುದು ಒಳ್ಳೆಯದು ಎಂದು ಹಲವರು ಭಾವಿಸುತ್ತಾರೆ. ಆದರೆ ಆರೋಗ್ಯ ತಜ್ಞರು ಬೆಳಗಿನ ಉಪಾಹಾರದ ಸಮಯದಲ್ಲಿ ಸೇಬು ತಿನ್ನುವುದರಿಂದ ಹಲವಾರು ಪ್ರಯೋಜನಗಳಿವೆ. ರಾತ್ರಿಯಲ್ಲಿ ಸೇಬು ತಿನ್ನದಿರುವುದು ಉತ್ತಮ ಎಂದು ಹೇಳುತ್ತಾರೆ.

ಹಾಲು ಮತ್ತು ಸೇಬು ಒಟ್ಟಿಗೆ ತಿನ್ನುವುದು ಸೂಕ್ತ. ಆರೋಗ್ಯ ತಜ್ಞರ ಪ್ರಕಾರ, ನಾರಿನಂಶವಿರುವ ಈ ಹಣ್ಣನ್ನು ತಿನ್ನುವುದರಿಂದ ದಿನವಿಡೀ ಜೀರ್ಣಕ್ರಿಯೆ ಸಾಮಾನ್ಯವಾಗಿರುತ್ತದೆ‌.

(ಪ್ರಮುಖ ಸೂಚನೆ: ಆರೋಗ್ಯ ತಜ್ಞರು ಮತ್ತು ಇತರ ಅಧ್ಯಯನಗಳಿಂದ ಪಡೆದ ಮಾಹಿತಿಯ ಆಧಾರದ ಮೇಲೆ ನಾವು ಈ ವಿವರಗಳನ್ನು ಒದಗಿಸುತ್ತಿದ್ದೇವೆ. ವಿಷಯಗಳು ಕೇವಲ ತಿಳುವಳಿಕೆಗಾಗಿ ಮಾತ್ರ. ನಿಮಗೆ ಯಾವುದೇ ಅನುಮಾನಗಳು ಅಥವಾ ಸಮಸ್ಯೆಗಳಿದ್ದರೆ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ.)

Advertisement
Tags :
Advertisement