ರಕ್ತಹೀನ ಸಮಸ್ಯೆಯಿಂದ ಬಳಲುತ್ತಿರುವವರಿಗಾಗಿ ಒಂದಷ್ಟು ಟಿಪ್ಸ್
ಸಾಕಷ್ಟು ಮಹಿಳೆಯರು ಇತ್ತೀಚೆಗೆ ಈ ಸಮಸ್ಯೆಯಿಂದ ಕಂಗೆಟ್ಟಿದ್ದಾರೆ. ಪರಿಹಾರ ಕಂಡುಕೊಳ್ಳಲು ಹರಸಾಹಸ ಪಡ್ತಿದ್ದಾರೆ. ಹೀಗಾಗಿ ರಕ್ತಹೀನತೆಯ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಇಲ್ಲೊಂದಿಷ್ಟು ಟಿಪ್ಸ್ ಇದೆ.
ಬೀಟ್ ರೂಟ್ ಎನ್ನುವುದು ರಕ್ತಹೀನತೆಗೆ ಪರಿಣಾಮಕಾರಿ ಆಹಾರ. ಸಾಮಾನ್ಯ ರಕ್ತ ಕೊರತೆ ಉಂಟಾದರೆ ವೈದ್ಯರು ಕೂಡ ಮೊದಲು ಬೀಟ್ ರೂಟ್ ಸೇವನೆಗೆ ಸಲಹೆ ನೀಡುತ್ತಾರೆ. ಇದರಲ್ಲಿ ಕಂಡು ಬರುವ ಕಬ್ಬಿಣಾಂಶ, ಫೋಲಿಕ್ ಆ್ಯಸಿಡ್, ಫೈಬರ್ ಮತ್ತು ಪೊಟಾಶಿಯಂ ಅಂಶಗಳು ದೇಹದಲ್ಲಿ ರಕ್ತವನ್ನು ಹೆಚ್ಚಿಸುತ್ತದೆ.
ದಾಳಿಂಬೆ ತಿಂದರೆ ಶೀಘ್ರದಲ್ಲೇ ರಕ್ತಹೀನತೆಯ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. ಇದರಲ್ಲಿರುವ ಕಬ್ಬಿಣಾಂಶ, ಕ್ಯಾಲ್ಸಿಯಂ, ಪ್ರೋಟೀನ್, ಕಾರ್ಬೋಹೈಡ್ರೇಟ್ಗಳು ಮತ್ತು ಫೈಬರ್ ಅಂಶಗಳು ಹಿಮೋಗ್ಲೊಬಿನ್ ಪ್ರಮಾಣವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.
ವಿಟಮಿನ್ ಸಿ ಸಮೃದ್ಧವಾಗಿರುವ ನೆಲ್ಲಿಕಾಯಿಗಳು ಕೂಡ ರಕ್ತಹೀನತೆಯ ಸಮಸ್ಯೆಗೆ ಪ್ರಮುಖ ಆಹಾರವಾಗಿದೆ. ಆರೋಗ್ಯಕ್ಕೂ ತುಂಬಾ ಪ್ರಯೋಜನಕಾರಿ ಆಗಿರುವ ನೆಲ್ಲಿಕಾಯಿಯಲ್ಲಿ ಕ್ಯಾಲ್ಸಿಯಂ, ವಿಟಮಿನ್, ಕಬ್ಬಿಣಾಂಶ ಹೆಚ್ಚಾಗಿದ್ದು, ಇದನ್ನು ಪ್ರತಿನಿತ್ಯ ತಿಂದರೆ ರಕ್ತದ ಕೊರತೆಗೆ ಪರಿಹಾರ ಕಂಡುಕೊಳ್ಳಬಹುದು.