For the best experience, open
https://m.suddione.com
on your mobile browser.
Advertisement

ಸಾಮಾನ್ಯರಿಗೂ ತಿಂದ ತಕ್ಷಣ ವಾಂತಿಯಾಗುತ್ತಾ..? : ಹಾಗಾದ್ರೆ ಕಾಮಾಲೆ ಇರಬಹುದು ಎಚ್ಚರ..!

05:52 AM Apr 03, 2023 IST | suddionenews
ಸಾಮಾನ್ಯರಿಗೂ ತಿಂದ ತಕ್ಷಣ ವಾಂತಿಯಾಗುತ್ತಾ      ಹಾಗಾದ್ರೆ ಕಾಮಾಲೆ ಇರಬಹುದು ಎಚ್ಚರ
Advertisement

ಮನುಷ್ಯನ ದೇಹಕ್ಕೆ ಆಹಾರ ಬಹಳ ಮುಖ್ಯ. ತಿಂದರೆ ಮಾತ್ರ ದೇಹ ವರ್ಕ್ ಆಗುವುದು, ಶಕ್ತಿದಾಯಕವಾಗಿ ಇರಲು ಸಾಧ್ಯ. ಅನಾರೋಗ್ಯದ ಸಮಯದಲ್ಲಿ ಊಟ ಮಾಡದೆ ಇದ್ದಾಗ ಅದೆಷ್ಟು ಸುಸ್ತಾಗಿ ಬಿಡುತ್ತೆ ಅಲ್ವಾ. ಹೀಗಾಗಿಯೇ ಆಹಾರ ಬಹಳ ಮುಖ್ಯವಾಗುತ್ತೆ. ಆದರೆ ತಿಂದ ಆಹಾರ ತಕ್ಷಣವೇ ವಾಂತಿಯಾಗಿ ಬಿಟ್ಟರೆ.

Advertisement

ಸಾಮಾನ್ಯವಾಗಿ ಗರ್ಭಿಣಿಯರಿಗೆ ಆರಂಭದಲ್ಲಿ ವಾಂತಿಯಾಗುತ್ತದೆ. ತಿಂದ ಕೂಡಲೇ ವಾಂತಿಯಾಗುತ್ತದೆ. ಅದು ಸಾಮಾನ್ಯವಾದದ್ದು. ಆದರೆ ಸಾಮಾನ್ಯರಿಗೆ ತಿಂದ ಕೂಡಲೇ ವಾಂತಿಯಾದರೆ ಅದು ಅನಾರೋಗ್ಯದ ಮುನ್ಸೂಚನೆ, ಇನ್ಯಾವುದೋ ಕಾಯಿಲೆಗೆ ತುತ್ತಾಗುವ ಸಾಧ್ಯತೆ ಇದೆ.

ಅದರಲ್ಲೂ ತಿಂದ ಕೂಡಲೆ ವಾಂತಿಯಾದರೆ ಅದರ ಸಂಕಟವನ್ನು ಅನುಭವಿಸುವವರಿಗೆ ಗೊತ್ತು. ಹೊಟ್ಟೆಯಲ್ಲೆಲ್ಲಾ ತೊಳಸಿ ಬರುತ್ತೆ. ಇನ್ನು ಊಟವೇ ಬೇಡಪ್ಪ ಎನಿಸುವಷ್ಟು. ಈ ರೀತಿ ವಾಂತಿಯಾದರೆ ಅದು ಕಾಮಾಲೆ ರೋಗದ ಲಕ್ಷಣವೂ ಆಗಿರುತ್ತೆ. ಕೆಲವೊಮ್ಮೆ ಅಸಿಡಿಟಿ ಜಾಸ್ತಿಯಾಗಿ, ಹೊಟ್ಟೆಯಲ್ಲೆಲ್ಲಾ ಆಮ್ಲವಿದ್ದಂತೆ ಫೀಲ್ ಆಗುತ್ತದೆ.

Advertisement

ಕಾಮಾಲೆ ಕಾಯಿಲೆ ಇದ್ದಾಗಲೂ ಜೀರ್ಣಕ್ರಿಯೆಯಲ್ಲಿ ಸಮಸ್ಯೆ ಉಂಟಾಗುತ್ತದೆ. ಕಾಮಾಲೆ ಕಾಯಿಲೆಯಿದ್ದವರಿಗೂ ಊಟ ಮಾಡಿದ ಕೂಡಲೇ ವಾಂತಿಯಾಗುತ್ತದೆ.

ಅಷ್ಟೇ ಅಲ್ಲ ಮೂತ್ರಪಿಂಡದಲ್ಲಿ ಕಲ್ಲುಗಳಿದ್ದರು ಊಟ ಮಾಡಿದ ಕೂಡಲೇ ವಾಂತಿಯಾಗುವಂತೆ ಮಾಡುತ್ತದೆ. ಇದನ್ನೆಲ್ಲಾ ತಪ್ಪಿಸಬೇಕೆಂದರೆ ಆಹಾರ ಪದ್ಧತಿಯಲ್ಲಿ ಒಂದಿಷ್ಟು ಬದಲಾವಣೆ ಮಾಡಿಕೊಳ್ಳಿ.

ಮಸಾಲೆಯುಕ್ತ ಆಹಾರದಿಂದ ದೂರ ಇರಿ. ಹಾಗೇ ಒಂದೇ ಸಲ ಹೆಚ್ಚಹ ಆಹಾರ ಸೇವಿಸಬೇಡಿ. ಊಟವಾದ ಕೂಡಲೇ ಚಹಾ / ಕಾಫಿ ಕುಡೊಯಬೇಡಿ. ತುಂಬಾ ಸಮಯ ಹೊಟ್ಟೆಯನ್ನು ಖಾಲಿ ಬಿಡಬೇಡಿ.

Tags :
Advertisement