Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಮಗುವಿನ ದೃಷ್ಟಿ ಮಂಕಾಗಿದೆ.. ಕನ್ನಡಕ ಬೇಕಾಗುವುದು ಎಂದು ತಿಳಿಯುವುದೇಗೆ ಗೊತ್ತಾ..?

05:51 AM Aug 14, 2024 IST | suddionenews
Advertisement

ಸುದ್ದಿಒನ್ : ಇತ್ತೀಚಿನ ದಿನಗಳಲ್ಲಿ ಕನ್ನಡಕ ಹಾಕುವುದು ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ. ಕಣ್ಣಿನ ದೃಷ್ಟಿ ಸಾಕಷ್ಟು ಜನರಿಗೆ ಮಂದವಾಗುತ್ತಿದೆ. ಒಬ್ಬೊಬ್ಬರು ತಲೆ ನೋವಿನ ಸಮಸ್ಯೆಗೆ ಹಾಕುತ್ತಾರೆ, ಇನ್ನೊಂದಷ್ಟು ಜನ ಸಮೀಪ ದೃಷ್ಟಿ, ಮತ್ತೊಂದಿಷ್ಟು ಜನರು ದೂರದೃಷ್ಟಿಗಾಗಿ ಹಾಕುತ್ತಾರೆ. ಹೀಗೆ ಹಲವು ಸಮಸ್ಯೆಗಳಿಗೆ ಹಾಕುತ್ತಾರೆ. ಅದರಲ್ಲೂ ಈಗಿನ ಪೀಳಿಗೆಯಲ್ಲಿ ಎಲ್ ಕೆಜಿ, ಯುಕೆಜಿಗೆ ಮಕ್ಕಳು ಕನ್ನಡಕ ಹಾಕಿಕೊಳ್ಳುವ ಪರಿಸ್ಥಿತಿ ಬಂದೊದಗಿದೆ. ದೊಡ್ಡವರಿಗೇನೋ ಕಣ್ಣಿನ ಸಮಸ್ಯೆ ಬಂದಾಗ ಗೊತ್ತಾಗುತ್ತೆ. ಆದರೆ ಮಕ್ಕಳಿಗೆ ಅದು ಗೊತ್ತಾಗುವುದಾದರೂ ಹೇಗೆ..?

Advertisement

* ಮಕ್ಕಳಲ್ಲಿ ಏಕಾಗ್ರತೆಯ ಕೊರತೆ ಉಂಟಾದರೆ ಅದನ್ನು ಪೋಷಕರು ಸೂಕ್ಷ್ಮವಾಗಿ ಗಮನಿಸಬೇಕಾಗುತ್ತದೆ. ಮಕ್ಕಳಲ್ಲಿ ಸಾಮಾನ್ಯವಾಗಿ ಏಕಾಗ್ರತೆ ಹೆಚ್ಚು. ಆದರೆ ನಿಮ್ಮ ಮಕ್ಕಳಲ್ಲಿ ಏಕಾಗ್ರತೆ ಸರಿಯಾಗಿಲ್ಲವಾದರೆ ಏನೋ ದೃಷ್ಟಿಯ ಸಮಸ್ಯೆಯಿಂದ ಏಕಾಗ್ರತೆಯನ್ನು ಕ್ರೂಢೀಕರಿಸಲು ಸಾಧ್ಯವಿಲ್ಲದೆ ಇರಬಹುದು.

* ಆಗಾಗ ಮಕ್ಕಳ ನೋಟ್ ಬುಕ್ ಕಡೆ ಹೆಚ್ಚು ಗಮನ ಹರಿಸಿ. ಬರೆಯುವಾಗ ತಪ್ಪು ಮಾಡಿದ್ದರೆ, ಓದುವಾಗ ತಪ್ಪು ತಪ್ಪಾಗಿ ಓದುತ್ತಿದ್ದರೆ, ಒತ್ತಡ ಹಾಕಿ ಪುಸ್ತಕವನ್ನು ನೋಡುವುದನ್ನು ಮಾಡಿದರೆ ಅಲ್ಲಿ ಮಗುವಿಗೆ ಕಣ್ಣಿನ ಸಮಸ್ಯೆ ಇದೆ ಎಂದೇ ಅರ್ಥ.

Advertisement

* ಓದುವಾಗಲೂ ಮಕ್ಕಳ ವರ್ತನೆ ಗಮನಿಸಬೇಕು. ಆಗಾಗ ಕಣ್ಣನ್ನು ಉಜ್ಜುತ್ತಿದ್ದರೆ, ತಲೆ ನೋವಿನ ಸಮಸ್ಯೆಯಿಂದ ಬಳಲುತ್ತಿದ್ದರೆ ಕಣ್ಣಿನ ಸಮಸ್ಯೆ ಉಂಟಾಗಿದೆ ಎಂದೇ ಅರ್ಥ.

* ಪುಸ್ತಕವನ್ನು ಓದುವಾಗ ತೀರಾ ಹತ್ತಿರ ತಂದು ಓದುವ ಅಭ್ಯಾಸ ಮಾಡಿಕೊಂಡಿದ್ದರೆ ಅದನ್ನು ಬಿಡುವುದಕ್ಕೆ ಹೇಳಿ. ತೀರಾ ಹತ್ತಿರವೇ ಇಟ್ಟುಕೊಂಡು ಓದಿದರೆ ಖಂಡಿತ ಸಮಸ್ಯೆ ಇರಲಿದೆ. ಜೊತೆಗೆ ಮೊಬೈಲ್ ನೋಡುವಾಗ ತೀರಾ‌ ಮುಖಕ್ಕೆ ಅಂಟಿಕೊಂಡಂತೆ ಇಟ್ಟುಕೊಳ್ಳುವ ಅಭ್ಯಾಸವಿದ್ದರೂ ಬಿಡಿಸಿ. ಈ ರೀತಿಯ ಲಕ್ಷಣಗಳು ಕಂಡು ಬಂದರೆ ತಕ್ಷಣ ಮಕ್ಕಳನ್ನು ಕಣ್ಣಿನ ಡಾಕ್ಟರ್ ಬಳಿ ಕರೆದುಕೊಂಡು ಹೋಗಿ ಪರೀಕ್ಷಿಸಿ.

(ಪ್ರಮುಖ ಸೂಚನೆ: ಆರೋಗ್ಯ ತಜ್ಞರು ಮತ್ತು ಇತರ ಅಧ್ಯಯನಗಳಿಂದ ಪಡೆದ ಮಾಹಿತಿಯ ಆಧಾರದ ಮೇಲೆ ನಾವು ಈ ವಿವರಗಳನ್ನು ಒದಗಿಸುತ್ತಿದ್ದೇವೆ. ವಿಷಯಗಳು ಕೇವಲ ತಿಳುವಳಿಕೆಗಾಗಿ ಮಾತ್ರ. ನಿಮಗೆ ಯಾವುದೇ ಅನುಮಾನಗಳು ಅಥವಾ ಸಮಸ್ಯೆಗಳಿದ್ದರೆ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ.)

Advertisement
Tags :
bengaluruchitradurgasuddionesuddione newsvisionಕನ್ನಡಕಚಿತ್ರದುರ್ಗದೃಷ್ಟಿಬೆಂಗಳೂರುಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article