Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಕೊರೊನಾ ಬಂದವರಿಗೆ ಕಾಡುತ್ತೆ H3N2 ವೈರಸ್ : ಆರೋಗ್ಯ ಸಚಿವರು ಏನಂದ್ರು..?

02:32 PM Mar 06, 2023 IST | suddionenews
Advertisement

 

Advertisement

ಬೆಂಗಳೂರು: ಕೊರೊನಾ ವೈರಸ್ ನಿಂದ ಭಯಮುಕ್ತರಾಗಿ ಬದುಕುತ್ತಿರುವಾಗ ಜನರನ್ನು ಮತ್ತೆ ಆತಂಕಕ್ಕೆ ದೂಡುತ್ತಿರುವುದು ಇದೇ ಕೊರೊನಾ. ಮತ್ತೆ ಹೆಚ್ಚಾಗ್ತಾ ಇದೆ, ಎಚ್ಚರದಿಂದ ಇರಿ ಎಂದು ತಜ್ಞರು ಸಲಹೆ ನೀಡುತ್ತಿದ್ದಾರೆ. ಅದರ ಜೊತೆಗೆ ಹೊಸ ಹೊಸ ತಳಿಯ ವೈರಸ್ ಗಳು ಕಾಣಿಸುತ್ತಿವೆ. ಇಂದು ಈ ಸಂಬಂಧ ಮಹತ್ವದ ಸಭೆ ನಡೆಸಿದ್ದು, ಸಚಿವ ಸುಧಾಕರ್ ಕೂಡ ಜನರಿಗೆ ಎಚ್ಚರಿಕೆಯಿಂದ ಇರಲು ಸೂಚಿಸಿದ್ದಾರೆ.

ರಾಜ್ಯದಲ್ಲಿ H3N2 ವೈರಸ್ ಆತಂಕ ಶುರುವಾಗಿದೆ. ಹೀಗಾಗಿ ಇಂದು ತಜ್ಞರ ಜೊತೆಗೆ ಸಭೆ ನಡೆಸಲಾಗಿದೆ. ಬಳಿಕ‌ ಮಾತನಾಡಿದ ಸಚಿವ ಸುಧಾಕರ್, H3N2 ವೈರಸ್ ಬಹಳ ಆತಂಕಕಾರಿಯಲ್ಲ. ಈ ವೈರಸ್ ಬಂದರೆ 5-6ರಿಂದ ದಿನಗಳ ಕಾಲ ಕೆಮ್ಮು, ಶೀತ ಜ್ವರ ಇರುತ್ತೆ. ಬಳಿಕ ವಾಸಿಯಾಗುತ್ತದೆ. ಭಯಪಡುವ ಅಗತ್ಯವೇನು ಇಲ್ಲ ಎಂದಿದ್ದಾರೆ.

Advertisement

ಇಂದು ತಾಂತ್ರಿಕ ಸಲಹಾ ಸಮಿತಿಯ ಸಭೆ ನಡೆಸಿದ್ದೇವೆ. ಕೊರೊನಾ ಬಂದವರಿಗೆ ದೀರ್ಘಕಾಲದ ತನಕ ಕೆಮ್ಮು ಇರುತ್ತೆ. ಹಾಗಂತ ಯಾರು ಭಯಪಡಬೇಕಾದ ಅಗತ್ಯವಿಲ್ಲ. ಆರೋಗ್ಯ ಸಿಬ್ಬಂದಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದಿದ್ದಾರೆ.

Advertisement
Tags :
bengalurufeaturedH3N2 ವೈರಸ್suddioneಆರೋಗ್ಯ ಸಚಿವರುಕೊರೊನಾಬೆಂಗಳೂರುಸುದ್ದಿಒನ್
Advertisement
Next Article