For the best experience, open
https://m.suddione.com
on your mobile browser.
Advertisement

ಅಗಸೆ ಬೀಜ ನಿಮ್ಮ ಕೂದಲ ಆರೋಗ್ಯ ಕಾಪಾಡುತ್ತೆ.. ಹೇಗೆ ಗೊತ್ತಾ..?

05:39 AM Jul 21, 2023 IST | suddionenews
ಅಗಸೆ ಬೀಜ ನಿಮ್ಮ ಕೂದಲ ಆರೋಗ್ಯ ಕಾಪಾಡುತ್ತೆ   ಹೇಗೆ ಗೊತ್ತಾ
Advertisement

Advertisement

ತಲೆ ಕೂದಲ ಆರೈಕೆ ಬಹಳ ಬಹಳ ಕಷ್ಟ. ಸಾಕಷ್ಟು ಜನರಿಗೆ ಇದರ ಅನುಭವ ಆಗಿರುತ್ತೆ. ಓದುವಾಗ ದಟ್ಟವಾಗಿ ಇದ್ದ ಕೂದಲು. ಕೆಲಸಕ್ಕೆ ಬಂದ ಮೇಲೆ ಒಂದಿಡಿಯೂ ಸಿಗ್ತಾ ಇಲ್ಲ ಎಂಬ ಬೇಸರವನ್ನ ಹಲವು ಹೆಣ್ಣು ಮಕ್ಕಳು ಹಂಚಿಕೊಂಡಿದ್ರೆ, ಕೆಲವು ಗಂಡು ಮಕ್ಕಳು ತಲೆ ಕೂದಲು ಉದುರುವುದ‌ನ್ನು ಕಂಡು ಬೇಸರ ಮಾಡಿಕೊಂಡಿರುತ್ತಾರೆ. ಮುಖದ ಸೌಂದರ್ಯ ಹೆಚ್ಚಿಸಲು ಕೂದಲು ಮೊದಲಾಕರ್ಷಣೆ. ಹೀಗಾಗಿ ಕೂದಲಿನ ಹಾರೈಕೆಗೆ ಏನೇನೋ ಪ್ರಯೋಗ ಮಾಡಲಾಗಿರುತ್ತದೆ. ಕೂದಲ ಆರೈಕೆಗೆ ಅಗಸೆ ಬೀಜ ಉತ್ತಮ ಎನ್ನಲಾಗುತ್ತಿದೆ.

Advertisement

ಕೂದಲಿಗೆ ಅಗಸೆ ಬೀಜಗಳನ್ನು ಬಳಸುವುದರಿಂದ ಕೂದಲಿನ ಹಾನಿಯನ್ನು ತಡೆಯಬಹುದು ಎಂದು ಅನೇಕ ಅಧ್ಯಯನಗಳೂ ಹೇಳುತ್ತವೆ. ಹೀಗಾಗಿ‌ ಕೂದಲ ಬೆಳವಣಿಗೆಗೆ ಅಗಸೆ ಬೀಜಗಳನ್ನು ಆದಷ್ಟು ಬಳಕೆ ಮಾಡಿ. ಅದನ್ನು ಬಳಸುವ ಮಾರ್ಗವನ್ನು ಇಲ್ಲಿ ತಿಳಿಸಲಾಗಿದೆ.

2 ಚಮಚದಷ್ಟು ಅಗಸೆ ಬೀಜದ ಎಣ್ಣೆ ಹಾಗೂ ಬಿಸಿಯಾದ ಟವೆಲ್.‌ ಮೊದಲು ಒಂದು ಬೌಲ್ ತೆಗೆದುಕೊಂಡು ಅಗಸೆ ಬೀಜದ ಎಣ್ಣೆಯನ್ನು ಸ್ವಲ್ಪ ಬೆಚ್ಚಗಾಗುವವರೆಗೆ ಅಂದರೆ ಸುಮಾರು ಒಂದು ನಿಮಿಷ ಬಿಸಿ ಮಾಡಿ. ಬೌಲ್ ಅನ್ನು ಗ್ಯಾಸ್‌ನಿಂದ ತೆಗೆದು ಕೆಳಗಿಡಿ. ಇದನ್ನು ನಿಮ್ಮ ಕೂದಲಿನ ಬೇರುಗಳು ಮತ್ತು ನೆತ್ತಿಯ ಮೇಲೆ ಅನ್ವಯಿಸಿ. ಈಗ ನಿಮ್ಮ ಕೂದಲನ್ನು ಬಿಸಿ ಟವೆಲ್‌ನಿಂದ ಕಟ್ಟಿಕೊಳ್ಳಿ. ಸುಮಾರು 30 ನಿಮಿಷಗಳ ಕಾಲ ಹಾಗೆಯೇ ಬಿಡಿ. ನಂತರ ಸಾಮಾನ್ಯ ಶಾಂಪೂ ಬಳಸಿ ತಲೆಸ್ನಾನ ಮಾಡಿ. ಹೀಗೆ ವಾರಕ್ಕೆ 2-3 ಬಾರಿ ಮಾಡಿ ಆಗ ನಿಮ್ಮ ಕೂದಲು ಎಷ್ಟು ದಪ್ಪವಾಗಿ ಬೆಳೆಯುತ್ತೆ ಎಂಬುದನ್ನು ನೋಡಿ.

Tags :
Advertisement