Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

2 ದಿನ ನಡೆದ ಅಖಿಲ ಭಾರತ ವೀರಶೈವ ಕಾರ್ಯಕ್ರಮಕ್ಕೆ ಎಂ ಬಿ ಪಾಟೀಲ್ ಗೈರಾಗಲು ಕಾರಣವೇನು..?

02:11 PM Dec 26, 2023 IST | suddionenews
Advertisement

 

Advertisement

 

ಬೆಂಗಳೂರು: ಇತ್ತಿಚೆಗೆ ಎರಡು ದಿನಗಳ ಕಾಲ ಅಖಿಲ ಭಾರತ ವೀರಶೈವ ಮಹಾಸಭಾದ 24ನೇ ಮಹಾ ಅಧಿವೇಶನ ದಾವಣಗೆರೆಯಲ್ಲಿ ನಡೆದಿದೆ. ಈ ಕಾರ್ಯಕ್ರಮಕ್ಕೆ ರಾಜಕೀಯ ಪಕ್ಷದವರು ಸೇರಿದ್ದರು. ಆದರೆ ಕಾಂಗ್ರೆಸ್ ನಾಯಕ ಎಂ ಬಿ ಪಾಟೀಲ್ ಗೈರಾಗಿದ್ದರು. ಇದು ಹಲವರಿಗೆ ಪ್ರಶ್ನೆಯಾಗಿ ಕಾಡಿತ್ತು. ಇದೀಗ ಅದಕ್ಕೆ ಸ್ವತಃ ಎಂ ಬಿ ಪಾಟೀಲ್ ಅವರೇ ಉತ್ತರ ನೀಡಿದ್ದಾರೆ.

Advertisement

ನಗರದಲ್ಲಿ ಮಾತನಾಡಿದ ಎಂ ಬಿ ಪಾಟೀಲ್ ಅವರು, ಕೆ ಎಲ್ ಇ ಸೊಸೈಟಿ ಅಧ್ಯಕ್ಷರಾದ ಪ್ರಭಾಕರ ಕೋರೆ ಅವರ 50ನೇ ವಿವಾಹ ವಾರ್ಚಿಕೋತ್ಸವ ಹಾಗೂ ವಿಜಯಪುರದಲ್ಲಿ ಒಂದು ಕಾರ್ಯಕ್ರಮ ಈ ಮೊದಲೇ ನಿಗದಿಯಾಗಿತ್ತು. ಹೀಗಾಗಿ ದಾವಣಗೆರೆಯಲ್ಲಿ ನಡೆದ ವೀರಶೈವ ಕಾರ್ಯಕ್ರಮದಲ್ಲಿ ಖುದ್ದಾಗಿ ಭಾಗವಹಿಸಲು ಸಾಧ್ಯವಾಗಲಿಲ್ಲ. ಆದರೆ ಅದಿವೇಶನಕ್ಕೆ ಸಂದೇಶ ಕಳುಹಿಸಿಕೊಟ್ಟಿದ್ದೆ. ಮೇಲಿನ ಕಾರ್ಯಕ್ರಮಗಳು ಮೊದಲೇ ನಿಗದಿಯಾಗಿದ್ದವು. ಇಲ್ಲವಾಗಿದ್ದರೆ, ನಾನು ಅಧಿವೇಶನಕ್ಕೆ ಹೋಗುತ್ತಿದ್ದೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಇದರಲ್ಲಿ ಅಸಮಾಧಾನವೇನು ಇಲ್ಲ. ಅಧಿವೇಶನಕ್ಕೆ ನನ್ನನ್ನು ಉದ್ಘಾಟಕನಾಗಿ ಆಹ್ವಾನ ಮಾಡಲಾಗಿತ್ತು. ಅಧಿವೇಶನದಲ್ಲಿ ಜಾತಿ ಗಣತಿ ಕುರಿತು ನಿರ್ಣಯ ಅಂಗೀಕರಿಸಲಾಗಿದೆ. ಲಿಂಗಾಯತರಲ್ಲಿ ಇರುವ 60-70 ಒಳಪಂಗಡಗಳೆಲ್ಲವೂ ಒಂದೇ ಸೂರಿನಡಿ ಬರಬೇಕು. ಹೀಗಾದರೆ ಮಾತ್ರ ಲಿಂಗಾಯತ ಸಮುದಾಯಕ್ಕೆ ಮೀಸಲಾತಿಯ ಲಾಭ ಸಿಗುತ್ತದಷ್ಟೆ. ಇದನ್ನು ನಾನು ಮೊದಲಿನಿಂದಲೂ ಹೇಳುತ್ತ ಬಂದಿದ್ದೇನೆ ಎಂದಿದ್ದಾರೆ. ಲಿಂಗಾಯತ ಸಮಾವೇಶನದ ಅಧಿವೇಶನಕ್ಕೆ ಹೋಗದೆ ಇರುವ ಕಾರಣವನ್ನು ಸಚಿವ ಎಂ ಬಿ ಪಾಟೀಲ್, ಈ ಮೂಲಕ ಬಹಿರಂಗ ಪಡಿಸಿದ್ದಾರೆ. ಗೈರಾಗಿದ್ದಕ್ಕೆ ಅಸಮಾಧಾನದ ವಿಚಾರ ಚರ್ಚೆಗೆ ಬಂದಿತ್ತು. ಅದಕ್ಕೂ ಸ್ಪಷ್ಟನೆ ನೀಡಿದ್ದಾರೆ.

Advertisement
Tags :
All India VeerashaivabengalurudavanagereMb patilProgramsuddioneಅಖಿಲ ಭಾರತ ವೀರಶೈವಎಂ ಬಿ ಪಾಟೀಲ್ಕಾರ್ಯಕ್ರಮಗೈರುದಾವಣಗೆರೆಬೆಂಗಳೂರುಸುದ್ದಿಒನ್
Advertisement
Next Article