ವಚನಾನಂದ ಶ್ರೀಗಳನ್ನು ಭೇಟಿ ಮಾಡಿ ರಾಹುಲ್ ಗಾಂಧಿ ಚರ್ಚಿಸಿದ ಆ ವಿಚಾರವೇನು..?
ದಾವಣಗೆರೆ: ರಾಜ್ಯದಲ್ಲಿ ಚುನಾವಣಾ ಬಿಸಿ ದಿನೇ ದಿನೇ ಕಾವೇರುತ್ತಿದೆ. ಯಾಕಂದ್ರೆ ಮತದಾನಕ್ಕೆ ಇರುವುದು ಇನ್ನು ಬೆರಳೆಣಿಕೆಯಷ್ಟು ದಿನ. ಹೀಗಾಗಿ ಭರ್ಜರಿ ಪ್ತಚಾರ ನಡೆಯುತ್ತಿದೆ. ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ದೆಹಲಿಯಿಂದ ನೇರ ರಾಜ್ಯಕ್ಕೆ ಆಗಮಿಸಿ ತಮ್ಮ ಅಭ್ಯರ್ಥಿಗಳ ಪ್ರಚಾರ ಮಾಡುತ್ತಿದ್ದಾರೆ. ಇದೀಗ ಇಂದು ರಾಹುಲ್ ಗಾಂಧಿ ರಾಜ್ಯಕ್ಕೆ ಬಂದು ಪ್ರಚಾರ ಮಾಡಿದ್ದಕ್ಕಿಂತ ಹೆಚ್ಚಾಗಿ, ಪಂಚಮಸಾಲಿ ಮಠಕ್ಕೆ ಭೇಟಿ ನೀಡಿರುವುದು ಗಮನ ಸೆಳೆದಿದೆ.
ಇಂದು ರಾಹುಲ್ ಗಾಂಧಿ ಹರಿಹರಕ್ಕೆ ಭೇಟಿ ನೀಡಿದ್ದರು. ಈ ವೇಳೆ ರಾಹುಲ್ ಗಾಂಧಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ನೇರವಾಗಿ ಹರಿಹರದ ಮಠದ ಆವರಣದಲ್ಲಿಯೇ ಲ್ಯಾಂಡ್ ಆಗಿತ್ತು. ಹೀಗಾಗಿ ರಾಹುಲ್ ಗಾಂಧಿಯವರು ನೇರವಾಗಿ, ಮಠಕ್ಕೆ ತೆರಳಿ ವಚನಾನಂದ ಶ್ರೀಗಳನ್ನು ಭೇಟಿ ಮಾಡಿದರು. ಅವರ ಆಶೀರ್ವಾದ ಪಡೆದರು.
ರಾಹುಲ್ ಗಾಂಧಿಯವರು ಮಠಕ್ಕೆ ಆಗಮಿಸುತ್ತಿದ್ದಂತೆ ವಚನನಾಂದ ಶ್ರೀಗಳು ಕೂಡ ಆತ್ಮೀಯವಾಗಿ ಬರ ಮಾಡಿಕೊಂಡರು. ಸ್ವಲ್ಪ ಸಮಯ ಇಬ್ಬರು ರಾಜಕೀಯ ಚರ್ಚೆ ನಡೆಸಿದರು. ಬಳಿಕ ಮಠದಿಂದ ತೆರಳಿದ ಮೇಲೆ ರಾಹುಲ್ ಗಾಂಧಿ ಅವರು, ತಮ್ಮ ಅಭ್ಯರ್ಥಿ ಪರ ಪ್ರಚಾರ ನಡೆಸಿದರು.
ಹರಿಹರದ ಗಾಂಧಿ ಮೈದಾನದಲ್ಲಿ ರಾಹುಲ್ ಗಾಂಧಿ ಅವೆಉ ಪ್ರಚಾರ ಕಾರ್ಯ ನಡೆಸಿದರು. ಕೆ ಸಿ ವೇಣುಗೋಪಾಲದ, ಎಸ್ ಎಸ್ ಮಲ್ಲಿಕಾರ್ಜುನ್ ಸೇರಿದಂತೆ ಕಾಂಗ್ರೆಸ್ ನಾಯಕರು ರಾಹುಲ್ ಗಾಂಧಿಗೆ ಸಾಥ್ ನೀಡಿದರು.