For the best experience, open
https://m.suddione.com
on your mobile browser.
Advertisement

ಲೋಕಸಭೆಯಲ್ಲಿ ಪಂಚಮಸಾಲಿ ಸಮುದಾಯಕ್ಕೆ ಹೆಚ್ಚಿನ ಟಿಕೆಟ್ ಗೆ ವಚನಾನಂದ ಸ್ವಾಮೀಜಿ ಬೇಡಿಕೆ..!

12:38 PM Feb 01, 2024 IST | suddionenews
ಲೋಕಸಭೆಯಲ್ಲಿ ಪಂಚಮಸಾಲಿ ಸಮುದಾಯಕ್ಕೆ ಹೆಚ್ಚಿನ ಟಿಕೆಟ್ ಗೆ ವಚನಾನಂದ ಸ್ವಾಮೀಜಿ ಬೇಡಿಕೆ
Advertisement

Advertisement

ದಾವಣಗೆರೆ: ಲೋಕಸಭಾ ಚುನಾವಣೆ ಸನಿಹವಾಗುತ್ತಿರುವ ಹೊತ್ತಲ್ಲಿ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಜಾಸ್ತಿಯಾಗುತ್ತಿದೆ. ಅದರ ಜೊತೆಗೆ ಸಮುದಾಯಗಳಿಂದಾನೂ ಬೇಡಿಕೆ ಬರುತ್ತಿದೆ. ಇದೀಗ ಪಂಚಮಸಾಲಿ ಲಿಂಗಾಯತ ಸಮುದಾಯಕ್ಕೆ ಹೆಚ್ಚಿನ ಟಿಕೆಟ್ ಗಳನ್ನು ನೀಡಬೇಕೆಂದು ಬಿಜೆಪಿ ಹಾಗೂ ಕಾಂಗ್ರೆಸ್ ಎರಡು ಪಕ್ಷಕ್ಕೂ ವಚನಾನಂದ ಸ್ವಾಮೀಜಿ ಆಗ್ರಹಿಸಿದ್ದಾರೆ.

Advertisement

ಪಂಚಮಸಾಲಿ ಸಮುದಾಯಕ್ಕೆ ಲೋಕಸಭೆಯಲ್ಲಿ ಹೆಚ್ಚಿನ ಆದ್ಯತೆ ನೀಡಬೇಕೆಂದಿದ್ದಾರೆ. ದಾವಣಗೆರೆ ಸೇರಿದಂತೆ ಉತ್ತರ ಕರ್ನಾಟಕದ ಬಾಗಲಕೋಟೆ, ವಿಜಯಪುರ, ಧಾರವಾಡ, ಗದಗ, ಬೆಳಗಾವಿ, ಕೊಪ್ಪಳ, ಚಿಕ್ಕೋಡಿ ಸೇರಿದಂತೆ ಉತ್ತರ ಕರ್ನಾಟಕದಲ್ಲಿ ನಮ್ಮವರೆ ಹೆಚ್ಚಾಗಿದ್ದಾರೆ. ರಾಜ್ಯದಲ್ಲಿ ಸುಮಾರು 80 ಲಕ್ಷಕ್ಕೂ ಹೆಚ್ಚು ಸಮುದಾಯವಿದೆ. ಇತ್ತೀಚಿನ ದಿನಗಳಲ್ಲಿ ನಮ್ಮವರಿಗೆ ರಾಜಕೀಯವಾಗಿ ಮಾನ್ಯತೆ ಸಿಕ್ಕಿಲ್ಲ. ಹೀಗಾಗಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ನಮ್ಮವರಿಗೆ ಮಾನ್ಯತೆ ಸಿಗಬೇಕು ಎಂದಿದ್ದಾರೆ.

ಈ ಕೆಲಸವನ್ನು ಎರಡು ರಾಷ್ಟ್ರೀಯ ಪಕ್ಷಗಳು ಮಾಡಬೇಕು. ಯಾವ ಕ್ಷೇತ್ರಕ್ಕೆ ಕೊಡುತ್ತಾರೋ..? ಯಾವ ವ್ಯಕ್ತಿಗೆ ಕೊಡುತ್ತಾರೋ ಅದು ಪಕ್ಷಕ್ಕೆ ಬಿಟ್ಟ ವಿಚಾರ. ಪಕ್ಷಕ್ಕೆ ನಿಷ್ಠೆಯಿಂದ ಇದ್ದವರಿಗೆ ಮತ್ತು ಯೋಗ್ಯವಾಗಿದ್ದವರಿಗೆ ಟಿಕೆಟ್ ನೀಡಲಿ. ನಮ್ಮ ಸೋದರ ಸಮುದಾಯದ ಸಂಖ್ಯೆ ಕಡಿಮೆ ಇದ್ದರು ಹೆಚ್ಚಿನ ಪಾಲನ್ನು ಪಡೆಯುತ್ತಿದ್ದಾರೆ. ನಮ್ಮ ಸಮುದಾಯ ಕೇವಲ ಮತಕ್ಕೆ ಮಾತ್ರ ಸೀಮಿತವಾದಂತೆ ಇದೆ. ಆದರೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನಮ್ಮವರಿಗೆ ಟಿಕೆಟ್ ಸಿಗಬೇಕು. ಕೂಡಲ ಸಂಗಮ ಭಕ್ತರಿಗೆ ಕೊಟ್ಟರು ಓಕೆ. ನಾವೂ ಬೆಂಬಲ ನೀಡುತ್ತೇವೆ. ಎರಡು ಪಕ್ಷಗಳು ನಮ್ಮ ಸಮಾಜದವರಿಗೆ ನೀಡದರೆ ನಾವೇ ಹೊಂದಾಣಿಕೆ ಮಾಡಿಕೊಂಡು ಆ ವ್ಯಕ್ತಿಯನ್ನು ಗೆಲ್ಲಿಸುತ್ತೇವೆ ಎಂದಿದ್ದಾರೆ.

Tags :
Advertisement