Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ದಾವಣಗೆರೆ ಜಿಲ್ಲೆಯ ತಾಲ್ಲೂಕುವಾರು ಮತದಾರರ ಅಂಕಿ ಅಂಶ : ಮಾಹಿತಿ ನೀಡಿದ ಜಿಲ್ಲಾಧಿಕಾರಿ ಡಾ. ವೆಂಕಟೇಶ್ ಎಂ.ವಿ

08:39 PM Jan 22, 2024 IST | suddionenews
Advertisement

 

Advertisement

 

ದಾವಣಗೆರೆ ಜ.22 :   ಚುನಾವಣಾ ಆಯೋಗದ ನಿರ್ದೇಶನದನ್ವಯ ಮತದಾರರ ಪಟ್ಟಿಯನ್ನು ಪರಿಷ್ಕರಿಸಿ ಜನವರಿ 22 ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದ್ದು ಜಿಲ್ಲೆಯಲ್ಲಿ 14,58,594 ಮತದಾರರಿದ್ದಾರೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ; ವೆಂಕಟೇಶ್ ಎಂ.ವಿ ತಿಳಿಸಿದರು.

Advertisement

ಅವರು ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮತದಾರರ ಪಟ್ಟಿ ಪ್ರಚುರಪಡಿಸಿದ ಬಗ್ಗೆ ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ನಡೆಸಿದ ಸಭೆಯಲ್ಲಿ ತಿಳಿಸಿದರು. ಆಯೋಗದ ನಿರ್ದೇಶನದನ್ವಯ ಅಕ್ಟೋಬರ್ 27 ರಂದು ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದ್ದು ಅದರಲ್ಲಿ 14,53,818 ಮತದಾರರಿದ್ದರು.

ಮತದಾರರ ಪಟ್ಟಿಗೆ ಆಕ್ಷೇಪಣೆ ಸಲ್ಲಿಸಲು 2024 ರ ಜನವರಿ 12 ರ ವರೆಗೆ ಅವಕಾಶ ಕಲ್ಪಿಸಲಾಗಿದ್ದು ಈ ವೇಳೆ ಹೊಸ ನೊಂದಣಿ, ಬೇರೆ ಕ್ಷೇತ್ರಕ್ಕೆ ವರ್ಗಾವಣೆ ಹಾಗೂ ಮರಣ ಹೊಂದಿದವರನ್ನು ಪಟ್ಟಿಯಿಂದ ರದ್ದುಪಡಿಸಲಾಗಿದ್ದು ಅಂತಿಮ ಮತದಾರರ ಪಟ್ಟಿಯನ್ವಯ ಜಿಲ್ಲೆಯಲ್ಲಿ 7,27,246 ಪುರುಷ, 7,31,230 ಮಹಿಳೆಯವರು, 118 ಇತರೆ ಸೇರಿ 14,58,594 ಮತದಾರರಿದ್ದಾರೆ. ಮತದಾರರ ಪಟ್ಟಿಯನ್ನು ಎಲ್ಲಾ ತಹಶೀಲ್ದಾರರ ಕಚೇರಿ, ಉಪವಿಭಾಗಾಧಿಕಾರಿಗಳ ಕಚೇರಿ ಹಾಗೂ ವೆಬ್‍ಸೈಟ್‍ನಲ್ಲಿ ಪ್ರಕಟಿಸಲಾಗಿದ್ದು ಸಾರ್ವಜನಿಕರು ತಮ್ಮ ಮತದಾರರ ವಿವರವನ್ನು ಪರಿಶೀಲಿಸಿಕೊಳ್ಳಬೇಕೆಂದರು.

ಪರಿಷ್ಕರಣೆಯ ವೇಳೆ ಒಟ್ಟು 18714 ಮತದಾರರನ್ನು ದಾಖಲೆಗಳ ಪರಿಶೀಲನೆ ಮಾಡಿ ಪಟ್ಟಿಯಿಂದ ತೆಗೆದು ಹಾಕಲಾಗಿದೆ. ಇದರಲ್ಲಿ ಶೇ 90 ರಷ್ಟು ಮರಣ ಹೊಂದಿದವರು ಹಾಗೂ ಎರಡೂ ಕಡೆ ಪಟ್ಟಿಯಲ್ಲಿ ಸೇರ್ಪಡೆಯಾದವುಗಳಾಗಿರುತ್ತವೆ.

ಯುವ ಮತದಾರರ ನೊಂದಣಿ; ಜಿಲ್ಲೆಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಅವಧಿಯಲ್ಲಿ 29081 ಯುವ ಮತದಾರರನ್ನು ಹೊಸದಾಗಿ ಪಟ್ಟಿಗೆ ಸೇರ್ಪಡೆ ಮಾಡಲಾಗಿದೆ. ಸೇರ್ಪಡೆಯಾದವರಲ್ಲಿ ಜಗಳೂರು 4239, ಹರಿಹರ 4646, ದಾವಣಗೆರೆ ಉತ್ತರ 4032, ದಾವಣಗೆರೆ ದಕ್ಷಿಣ 3581, ಮಾಯಕೊಂಡ 4176, ಚನ್ನಗಿರಿ 3884, ಹೊನ್ನಾಳಿ ಕ್ಷೇತ್ರದಲ್ಲಿ 4523 ಯುವ ಮತದಾರರು ಹೊಸದಾಗಿ ಮತದಾರರ ಪಟ್ಟಿಗೆ ನೊಂದಾಯಿಸಿದ್ದಾರೆ.

ಅಂತಿಮ ಮತದಾರರ ಪಟ್ಟಿಯನ್ವಯ ಜಗಳೂರು 195640, ಹರಿಹರ 209708, ದಾವಣಗೆರೆ ಉತ್ತರ 245823, ದಾವಣಗೆರೆ ದಕ್ಷಿಣ 215300, ಮಾಯಕೊಂಡ 192925, ಚನ್ನಗಿರಿ 200828, ಹೊನ್ನಾಳಿ 198370 ಮತದಾರಿದ್ದಾರೆ. ಜಿಲ್ಲೆಯಲ್ಲಿ 1693 ಮತಗಟ್ಟೆಗಳಿದ್ದು ಜಗಳೂರು 263, ಹರಿಹರ 228, ದಾವಣಗೆರೆ ಉತ್ತರ 245,  ದಾವಣಗೆರೆ ದಕ್ಷಿಣ 217, ಮಾಯಕೊಂಡ 240, ಚನ್ನಗಿರಿ 255, ಹೊನ್ನಾಳಿ 245 ಮತಗಟ್ಟೆಗಳಿವೆ.

18 ವರ್ಷ ತುಂಬುವರು ನೊಂದಣಿಗೆ ಅವಕಾಶ; ಹೊಸ ಮತದಾರರು ಆನ್‍ಲೈನ್ ಮೂಲಕ ವೋಟರ್ ಹೆಲ್ಪ್‍ಲೈನ್ ಆಫ್, https;//voters.eci.gov.in     ಹಾಗೂ https;//ceo.karnataka.gov.in     ನಲ್ಲಿ ನೊಂದಾಯಿಸಬಹುದಾಗಿದ್ದು 2024 ರ ಏಪ್ರಿಲ್ 1, ಜುಲೈ 1 ಹಾಗೂ ಅಕ್ಟೋಬರ್ 1 ಕ್ಕೆ 18 ವರ್ಷ ಪೂರ್ಣಗೊಳ್ಳುವವರು ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಲು ಅವಕಾಶ ಇರುತ್ತದೆ. ಆದರೆ ಚುನಾವಣೆ ವೇಳಾಪಟ್ಟಿ ಒಳಗೆ 18 ವರ್ಷ ತುಂಬುವವರು ಮಾತ್ರ ಮತದಾನ ಮಾಡಲು ಅರ್ಹರಾಗುತ್ತಾರೆ. ಮತದಾರರು ಯಾವುದೇ ಸಹಾಯ ಬೇಕಿದ್ದಲ್ಲಿ ಜಿಲ್ಲಾ ಸಂಪರ್ಕ ಸಂಖ್ಯೆ 1950 ಗೆ ಕರೆ ಮಾಡಬಹುದಾಗಿದೆ ಎಂದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್, ಮಹಾನಗರ ಪಾಲಿಕೆ ಆಯುಕ್ತರಾದ ರೇಣುಕಾ ಹಾಗೂ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಉಪಸ್ಥಿತರಿದ್ದರು.

Advertisement
Tags :
Davangere districtDistrict Collector Dr. Venkatesh M.Vstatisticssuddionesuddione newsvotersಜಿಲ್ಲಾಧಿಕಾರಿ ಡಾ. ವೆಂಕಟೇಶ್ ಎಂ.ವಿತಾಲ್ಲೂಕುವಾರುದಾವಣಗೆರೆ ಜಿಲ್ಲೆಮತದಾರರ ಅಂಕಿ ಅಂಶಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article