Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ದಾವಣಗೆರೆಯಿಂದ ಕಲ್ಬುರ್ಗಿ ಮತ್ತು ಮಂಗಳೂರು ಜಿಲ್ಲೆಗಳಿಗೆ ಸ್ಲೀಪರ್ ಪಲ್ಲಕ್ಕಿ ಸಾರಿಗೆ ಸೌಕರ್ಯ

07:16 PM Nov 17, 2023 IST | suddionenews
Advertisement

ದಾವಣಗೆರೆ, ನ. 17 : ದಾವಣಗೆರೆ ಭಾಗದ ಪ್ರಯಾಣಿಕರ ಅನುಕೂಲಕ್ಕಾಗಿ ಕಲ್ಬುರ್ಗಿ ಮತ್ತು ಮಂಗಳೂರು ಜಿಲ್ಲೆಗಳಿಗೆ ಹವಾ ನಿಯಂತ್ರಿತ ರಹಿತ ಸ್ಲೀಪರ್ ಪಲ್ಲಕ್ಕಿ ಸಾರಿಗೆ ಸೌಕರ್ಯವನ್ನು ಕಲ್ಪಿಸಲಾಗಿದೆ.

Advertisement

ದಾವಣಗೆರೆ-ಕಲ್ಬುರ್ಗಿ: ದಾವಣಗೆರೆಯಿಂದ ರಾತ್ರಿ 7.15 ರಿಂದ ಹೊರಟು ಹರಿಹರ, ಹರಪನಹಳ್ಳಿ, ಹೊಸಪೇಟೆ, ಗಂಗಾವತಿ, ಲಿಂಗಸೂರು ಮಾರ್ಗವಾಗಿ ಬೆಳಿಗ್ಗೆ 5.10 ಗಂಟೆ ಕಲ್ಬುರ್ಗಿ ತಲುಪುವುದು. ಕಲ್ಬುರ್ಗಿಯಿಂದ ರಾತ್ರಿ 8 ಗಂಟೆಗೆ ಹೊರಟು ಅದೇ ಮಾರ್ಗವಾಗಿ ಬೆಳಿಗ್ಗೆ 5.25 ಕ್ಕೆ ದಾವಣಗೆರೆ ತಲುಪುವುದು.

ದಾವಣಗೆರೆ-ಮಂಗಳೂರು : ದಾವಣಗೆರೆಯಿಂದ ರಾತ್ರಿ 9.30 ರಿಂದ ಹೊರಟು ಹರಿಹರ, ಶಿವಮೊಗ್ಗ, ಉಡುಪಿ ಮಾರ್ಗವಾಗಿ ಬೆಳಿಗ್ಗೆ 6.30 ಗಂಟೆಗೆ ಮಂಗಳೂರು ತಲುಪುವುದು.

Advertisement

ಮಂಗಳೂರಿನಿಂದ ರಾತ್ರಿ 9.30 ಕ್ಕೆ ಅದೇ ಮಾರ್ಗವಾಗಿ ಹೊರಟು ಬೆಳಿಗ್ಗೆ 6.30 ಗಂಟೆಗೆ ದಾವಣಗೆರೆ ತಲುಪುವುದು.
ಮುಂಗಡ ಬುಕ್ಕಿಂಗ್ ಮಾಡಲು ಕೌಂಟರ್ ಮತ್ತು ಆನ್‍ಲೈನ್
ksrtc.karnataka.gov.in ಮೂಲಕ ಬುಕ್ಕಿಂಗ್ ಮಾಡಬಹುದೆಂದು ಕರಾರಸಾ ನಿಗಮ ದಾವಣಗೆರೆ ವಿಭಾಗೀಯ ನಿಯಂತ್ರಣಾಧಿಕಾರಿ ಸಿದ್ದೇಶ್ ಹೆಬ್ಬಾರ್ ತಿಳಿಸಿದ್ದಾರೆ.

Advertisement
Tags :
DavangerekalburgiMangaloreMangalore districtspallakki transportSleeper pallaki transportಕಲ್ಬುರ್ಗಿದಾವಣಗೆರೆಮಂಗಳೂರುಸ್ಲೀಪರ್ ಪಲ್ಲಕ್ಕಿ ಸಾರಿಗೆ
Advertisement
Next Article