Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಸೋತ ಮೇಲೆ ಸುಮ್ಮನೆ ಕೂತಿರಬೇಕು : ಜಿಎಂ ಸಿದ್ದೇಶ್ವರ ವಿರುದ್ಧ ಶಾಮನೂರು ಶಿವಶಂಕರಪ್ಪ ವಾಗ್ದಾಳಿ

05:14 PM Jul 31, 2024 IST | suddionenews
Advertisement

 

Advertisement

ಸುದ್ದಿಒನ್, ದಾವಣಗೆರೆ, ಜುಲೈ. 31 : ಎಂಪಿ ಎಲೆಕ್ಷನ್ ನಲ್ಲಿ ಸೋತ‌ ಮೇಲೆ ಸುಮ್ಮನೆ ಮನೆಯಲ್ಲಿ ಕುಳಿತುಕೊಳ್ಳಬೇಕು. ಅದನ್ನು ಬಿಟ್ಟು ಅವರು ಹೇಗೆ ಗೆದ್ದರು, ಇವರು ಹೇಗೆ ಗೆದ್ದರು ಎಂಬುದನ್ನು ಕೆದಕುತ್ತಾ ಕೂರಬಾರದು ಎಂದು ಮಾಜಿ ಸಂಸದ ಜಿಎಂ ಸಿದ್ದೇಶ್ವರ ವಿರುದ್ಧ ಶಾಸಕ ಶಾಮನೂರು ಶಿವಶಂಕರಪ್ಪ ವಾಗ್ದಾಳಿ ನಡೆಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಇಂದು ಮಾತನಾಡಿದ ಅವರು, ಚುನಾವಣೆಯಲ್ಲಿ ಇಂದು ಒಂದು ವೋಟಿನಿಂದ ಗೆದ್ದರಿ, ಸಾವಿರ ವೋಟಿನಿಂದ ಗೆದ್ದರು, ಲಕ್ಷ ವೋಟಿನಿಂದ ಗೆದ್ದರು ಒಂದೇನೆ. ಅದನ್ನು ಬಿಟ್ಟು..? ಅವರು ಹೇಗೆ ಗೆದ್ದರು ಇವರು ಹೇಗೆ ಗೆದ್ದರು ಎಂದು ಕೇಳುತ್ತಾ ಕೂರುವುದಲ್ಲ.

Advertisement

ಯಡಿಯೂರಪ್ಪ, ವಿಜಯೇಂದ್ರ ಅವರಿಗೆ ಬೈದಿಲ್ಲ ಅಂತಾರೆ. ಪೇಪರ್ ಕಟ್ಟಿಂಗ್ ಎಲ್ಲಾ ಕೊಡ್ರಿ ಅವ್ನಿಗೆ. ನಾನು ಕೊಡ್ತೇನೆ. ಅಲ್ಲೊಂದು ಮಾತಾಡ್ತಾನೆ, ಇಲ್ಲೊಂದು‌ ಮಾತಾಡ್ತಾನೆ. ಎಲೆಕ್ಷನ್ ಗೂ ಮುನ್ನ ಹೋಗಿ ನಮ್ ಹತ್ರ ದುಡ್ಡಿಲ್ಲ ಅಂತ ಹೇಳಿ ಐದು ಕೋಟಿ ಹತ್ತು ಕೋಟಿ ತೆಗೆದುಕೊಂಡು ಬಂದಿರೋದು ನಮಗೆಲ್ಲ ಗೊತ್ತಿದೆ. ಅದನ್ನೆಲ್ಲ ಬಿಟ್ಟು ಕೇಸ್ ಹಾಕಿಸಿದ್ದಾನಲ್ಲ ದೊಡ್ಡ ಮನುಷ್ಯ. ಆ ಕೇಸ್ ಅವರಂತೆ ಆಗಿದ್ಯಲ್ಲ. ಏನು ಆಗುತ್ತೆ ಅಂದ್ರೆ ಇನ್ನೊಂದು ಸಲ ಬಂದ್ರೆ ಜಾಸ್ತಿ ಜನ ಅವನ ವಿರುದ್ಧ ಆಗ್ತಾರೆ.

ಈಗಾಗಲೇ ದಾವಣಗೆರೆ ಸುತ್ತಮುತ್ತ ಬಿಜೆಪಿಯನ್ನ ಎರಡು ಮಾಡಿಟ್ಟಿದ್ದಾನೆ. ಇನ್ಮೇಲೆ ನಾಲ್ಕು ಮಾಡಿಡುತ್ತಾನೆ ಅವ್ನು ಅಂತ ಚೆನ್ನಾಗ್ ಅವ್ನೆ‌. ಅವ್ನು ಎಲ್ಲಿ ಕೈ ಇಡುತ್ತಾನೋ ಅಲ್ಲಿ ಹೋಗುತ್ತಾನೆ. ಜನರಿಗೆ ಅದೆಲ್ಲ ಗೊತ್ತಾಗುತ್ತೆ. ಎಂಪಿ ಜನರಿಗೆ ಮುಖ ತೋರಿಸುತ್ತಾನೋ ಗೊತ್ತಿಲ್ಲ. ಅವ ಮೂರು ದಿನ ದಾವಣಗೆರೆಯಲ್ಲಿ ಇರ್ತಾನಂತೆ. ಮೂರು ಅಲ್ಲದೆ ಇದ್ರೆ ನಾಲ್ಕು ದಿನ ಇರ್ಲಿ. ಆದ್ರೆ ಬಾಯಿ‌ ಮುಚ್ಚಿಕೊಂಡು ಇರಬೇಕು ಎಂದಿದ್ದಾರೆ.

Advertisement
Tags :
bengaluruchitradurgadavanagareMP GM SiddeshwarShamanur Shivashankarappasuddionesuddione newsಚಿತ್ರದುರ್ಗಜಿಎಂ ಸಿದ್ದೇಶ್ವರ್ದಾವಣಗೆರೆಬೆಂಗಳೂರುವಾಗ್ದಾಳಿಶಾಮನೂರು ಶಿವಶಂಕರಪ್ಪಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article