ಹೈಕಮಾಂಡ್ ನಿಂದ ಶಿವಶಂಕರಪ್ಪಗೆ ನೋಟೀಸ್ : ಈ ಬಗ್ಗೆ ಶಾಮನೂರು ರಿಯಾಕ್ಷನ್ ಏನು..?
ದಾವಣಗೆರೆ: ರಾಜ್ಯ ರಾಜಕೀಯದಲ್ಲಿ ಶಾಮನೂರು ಶಿವಶಂಕರಪ್ಪ ನೀಡಿದ ಹೇಳಿಕೆ ಬಿಸಿ ಬಿಸಿ ಚರ್ಚೆಯಾಗುತ್ತಿದೆ. ಲಿಂಗಾಯತರಿಗೆ ಸ್ಥಾನಮಾನ ನೀಡಿಲ್ಲ ಎಂಬ ಹೇಳಿಕೆ ವಿಪಕ್ಷಗಳು ಬೆಂಬಲ ನೀಡುವಷ್ಟರ ಮಟ್ಟಿಗೆ ಸದ್ದು ಮಾಡುತ್ತಿದೆ. ಲೋಕಸಭಾ ಚುನಾವಣೆಯ ಹೊಸ್ತಿಲಲ್ಲಿ ಸ್ವಪಕ್ಷದವರೇ ಈ ರೀತಿಯ ಹೇಳಿಕೆಗಳನ್ಮು ನೀಡುವುದು, ಕಾಂಗ್ರೆಸ್ ಗೆ ಮುಜುಗರ ತರುವಂತದ್ದಾಗಿದೆ. ಅಷ್ಟೇ ಅಲ್ಲ ಚುನಾವಣೆಗೂ ಎಫೆಕ್ಟ್ ಆಗುವ ಸಾಧ್ಯತೆ ಇದೆ. ಹೀಗಾಗಿ ಹೈಕಮಾಂಡ್ ಶಾಮನೂರು ಶಿವಶಂಕರಪ್ಪ ಅವರಿಗೆ ನೋಟೀಸ್ ನೀಡಿದೆ ಎಮ್ನಲಾಗುತ್ತಿದೆ.
ಈ ಬಗ್ಗೆ ಶಾಮನೂರು ಶಿವಶಂಕರಪ್ಪ ರಿಯಾಕ್ಟ್ ಮಾಡಿದ್ದು, ಈ ವಿಚಾರವಾಗಿ ಕಾಂಗ್ರೆಸ್ ನಿಂದ ನನಗೆ ಯಾವುದೇ ನೋಟೀಸ್ ಬಂದಿಲ್ಲ. ಸಿಎಂ ಸಿದ್ದರಾಮಯ್ಯ ಅವರ ಜೊತೆಗೆ ಮಾತನಾಡಿರುವುದನ್ನು ನಾನು ಇಲ್ಲಿ ಹೇಳುವುದಕ್ಕೆ ಆಗುವುದಿಲ್ಲ ಎಂದಿದ್ದಾರೆ.
ಇನ್ನು ಡಿಸೆಂಬರ್ 23,24 ರಂದು ಲಿಂಗಾಯತ ಮಹಾ ಅಧಿವೇಶನ ನಡೆಯುತ್ತದೆ. ಇದು ಶಕ್ತಿ ಪ್ರದರ್ಶನವಲ್ಲ. ಅಧಿವೇಶನದಲ್ಲಿ ಹತ್ತು ಲಕ್ಷಕ್ಕೂ ಹೆಚ್ಚು ಮಂದಿ ಸೇರಿದರೆ ಅದು ಶಕ್ತಿಪ್ರದರ್ಶನ ಆಗಲಿದೆ. ಈಗ ಸಮುದಾಯಗಳ ಅಧಿಕಾರಿಗಳ ಪಟ್ಟಿಬಿಡುಗಡೆ ಬಗ್ಗೆ ಪ್ರಶ್ನೆಗಳನ್ನು ಕೇಳಬೇಡಿ ಎಂದಿದ್ದಾರೆ.
ಲಿಂಗಾಯತ ಅಧಿಕಾರಿಗಳಿಗೆ ಮನ್ನಣೆ ನೀಡುತ್ತಿಲ್ಲ. ಆಯಕಟ್ಟಿನ ಪ್ರಮುಖ ಹುದ್ದೆಗಳಿಗೆ ಬೇರೆ-ಬೇರೆ ಸಮುದಾಯದ ಅಧಿಕಾರಿಗಳನ್ನೇ ಕೂರಿಸಲಾಗಿದೆ. ಇದರೊಂದಿಗೆ ಲಿಂಗಾಯತ ಅಧಿಕಾರಿಗಳನ್ನು ಮೂಲೆ ಗುಂಪು ಮಾಡಲಾಗುತ್ತಿದೆ ಎಂದು ಶಾಮನೂರು ಶಿವಶಂಕರಪ್ಪ ತಮ್ಮದೇ ಸರ್ಕಾರದ ವಿರುದ್ಧ ಬಹಿರಂಗ ಅಸಮಾಧಾನ ಹೊರಹಾಕಿದ್ದಾರೆ. ಇದರ ಬೆನ್ನಲ್ಲೇ ಇದೀಗ ಸಿದ್ದರಾಮಯ್ಯನವರ ಅಭಿಮಾನಿಗಳು ದಾವಣಗೆರೆ ಜಿಲ್ಲೆಯಲ್ಲಿ ಎಷ್ಟು ಲಿಂಗಾಯತ ಅಧಿಕಾರಿಗಳು ಯಾವೆಲ್ಲ ಹುದ್ದೆಯಲ್ಲಿ ಇದ್ದಾರೆ ಎನ್ನುವ ಪಟ್ಟಿ ಬಿಡುಗಡೆ ಮಾಡುವ ಮೂಲಕ ಟಾಂಗ್ ಕೊಟ್ಟಿದ್ದಾರೆ.