For the best experience, open
https://m.suddione.com
on your mobile browser.
Advertisement

ಎಂ.ಪಿ. ರೇಣುಕಾಚಾರ್ಯ ಅವರಿಗೆ ಕೊಲೆ ಬೆದರಿಕೆ : ಮಗನನ್ನು ಕೊಲ್ಲುವುದಾಗಿ ಕರೆ..!

03:37 PM Jun 03, 2024 IST | suddionenews
ಎಂ ಪಿ  ರೇಣುಕಾಚಾರ್ಯ ಅವರಿಗೆ ಕೊಲೆ ಬೆದರಿಕೆ   ಮಗನನ್ನು ಕೊಲ್ಲುವುದಾಗಿ ಕರೆ
Advertisement

ದಾವಣಗೆರೆ: ಹೊನ್ನಾಳಿಯ ಮಾಜಿ ಶಾಸಕ ರೇಣುಕಾಚಾರ್ಯ ಅವರಿಗೆ ಕೊಲೆ ಬೆದರಿಕೆಯ ಕರೆಯೊಂದು ಬಂದಿದೆ. ದೂರವಾಣಿ ಮೂಲಕ ಕೊಲೆ ಬೆದರಿಕೆಯಾಕಿದ್ದಾರೆ. ಜೊತೆಗೆ ಅವರ ಮಗನನ್ನು ಕೊಲ್ಲುವುದಾಗಿ ತಿಳಿಸಿದ್ದಾರೆ. ಇಂದು ಬೆಳಗ್ಗೆ ಈ ಬೆದರಿಕೆ ಕರೆ ಬಂದಿದ್ದು, ಬೆದರಿಕೆ ಹಾಕಿದ್ದಾರೆ. ಈ ಸಂಬಂಧ ದೂರು ಕೂಡ ನೀಡಲಾಗಿದೆ.

Advertisement

912250155161 ಹಾಗೂ 60695539248 ನಂಬರ್‌ಗಳಿಂದ ಕರೆ ಮಾಡಿದ್ದಾರೆ. ಇವತ್ತು ರಾತ್ರಿಯ ಒಳಗೆ ನಿನ್ನ ಹಾಗೂ ನಿನ್ನ ಮಗನನ್ನು ಮುಗಿಸುತ್ತೇವೆ ಎಂದು ಕರೆ ಮಾಡಿದ್ದರಂತೆ. ಕೊಲೆ ಮಾಡುವುದಾಗಿ ಯಾಕೆ ಹೇಳಿದರೂ, ಯಾವ ಕಾರಣಕ್ಕಾಗಿ ಕೊಲೆ ಬೆದರಿಕೆ ಹಾಕಿದರು, ಯಾರವರು ಎಂಬ ಯಾವ ವಿಚಾರವೂ ಇನ್ನು ತಿಳಿದಿಲ್ಲ. ದೂರು ನೀಡಿದ್ದು, ತನಿಖೆಯ ನಂತರ ಸತ್ಯ ಹೊರ ಬೀಳಲಿದೆ.

Advertisement

ಇನ್ನು ಇದೇ ವೇಳೆ ರಾಜ್ಯ ಸರ್ಕಾರದ ವಿರುದ್ದ ಆಕ್ರೋಶ ಹೊರ ಹಾಕಿದ್ದು, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಅಭಿವೃದ್ಧಿ ಶೂನ್ಯವಾಗಿದೆ. ರೈತರ ಆತ್ಮಹತ್ಯೆ ಪ್ರಕರಣಗಳು ಜಾಸ್ತಿಯಾಗಿವೆ. ಇಲ್ಲಿಯವರೆಗೂ 500ಕ್ಕೂ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೈತರ ಬಗ್ಗೆ ನಿಜವಾದ ಕಾಳಜಿ ಇದ್ದರೆ, ಆತ್ಮಹತ್ಯೆ ಯಾಕಾಗಿ ಆಗ್ತಾ ಇದಾವೆ ಎಂಬುದನ್ನು ಕಂಡು ಹಿಡಿದು, ರೈತರ ಸಾಲ ಮನ್ನಾ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

Advertisement

Advertisement

ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಬಹುಕೋಟಿ ಹಗರಣ ಹಾಗೂ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧೀಕ್ಷಕ ಚಂದ್ರಶೇಖರ್ ಅವರು ಆತ್ಮಹತ್ಯೆಗೂ ಮುನ್ನ ಡೆತ್‍ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವುದು ಪತ್ರಿಕೆಗಳಲ್ಲಿ ವರದಿಯಾಗಿದೆ. ನಿಗಮದ ಬಹುಕೋಟಿ ಹಗರಣ ಹಾಗೂ ಆತ್ಮಹತ್ಯೆ ಪ್ರಕರಣದಲ್ಲಿ ನ್ಯಾಯ ಸಿಗಬೇಕಾದರೆ ಈ ಪ್ರಕರಣವನ್ನು ಸಿಬಿಐಗೆ ವಹಿಸಿ ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

Advertisement
Tags :
Advertisement