Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಗಂಧದ ಮರಗಳ ಅಕ್ರಮ ಕಟಾವಣೆ, ಆರೋಪಿ ಬಂಧನ

04:25 PM Jun 30, 2023 IST | suddionenews
Advertisement

 

Advertisement

ಮಾಹಿತಿ  ಕೃಪೆ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ದಾವಣಗೆರೆ

ಸುದ್ದಿಒನ್, ದಾವಣಗೆರೆ, ಜೂನ್.30 :: ಪ್ರಾದೇಶಿಕ ಅರಣ್ಯ ವ್ಯಾಪ್ತಿಯ ದಾವಣಗೆರೆ ವಲಯ ಹೆಬ್ಬಾಳು ಶಾಖೆಯ ಆನಗೋಡು ಗಸ್ತಿನಲ್ಲಿ ಜೂನ್ 26 ರಂದು ಹೆಬ್ಬಾಳು ಶಾಖೆಯ ಸಿಬ್ಬಂದಿಯವರು ರಾತ್ರಿ ಗಸ್ತು ತಿರುಗುತ್ತಿದ್ದ ಸಂದರ್ಭದಲ್ಲಿ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಶ್ರೀಗಂಧದ ಮರವನ್ನು ಕಟಾವಣೆ ಮಾಡುತ್ತಿದ್ದ ಆರೋಪಿಯನ್ನು ಉಪ ಅರಣ್ಯ ಸಂರಕ್ಷಣಾಧಿಕಾರಿ ಎನ್.ಹೆಚ್ ಜಗನ್ನಾಥ ಹಾಗೂ ತಂಡದವರು ಬಂಧಿಸಲಾಗಿದೆ.

Advertisement

ಒಬ್ಬ ಆರೋಪಿಯನ್ನು ಬಂಧಿಸಿ ಅಂದಾಜು ರೂ. 1 ಲಕ್ಷ ಮೌಲ್ಯದ 15 ಕೆ.ಜಿ ಶ್ರೀಗಂಧವನ್ನು ಜಪ್ತು ಪಡಿಸಿ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಹಾಗೂ ಮತ್ತೊಬ್ಬ ಆರೋಪಿ ತಪ್ಪಿಸಿಕೊಂಡಿದ್ದು, ಪತ್ತೆ ಹಚ್ಚುವ ಕಾರ್ಯ ಪ್ರಗತಿಯಲ್ಲಿರುತ್ತದೆ. ನಿಮ್ಮ ಹತ್ತಿರದ ಅರಣ್ಯ ಪ್ರದೇಶಗಳ ಸುತ್ತಮುತ್ತ ವನ್ಯಜೀವಿ, ಅರಣ್ಯ ಸಂಪತ್ತಿಗೆ ಮಾರಕವಾಗುವಂತಹ ಕಾರ್ಯಚಟುವಟಿಕೆಗಳು ಕಂಡುಬಂದಲ್ಲಿ ಇಲಾಖೆ ಉಚಿತ ಸಹಾಯವಾಣಿ 1926ಗೆ ಕರೆ ಮಾಡಲು ಕೋರಲಾಗಿದೆ.

Advertisement
Tags :
Accused arresteddavanagereIllegal salesandalwood treesಅಕ್ರಮ ಕಟಾವಣೆಆರೋಪಿ ಬಂಧನಗಂಧದ ಮರದಾವಣಗೆರೆ
Advertisement
Next Article