ರೇಣುಕಾಚಾರ್ಯ ಅವರನ್ನು ಪಕ್ಷದಿಂದ ಹೊರ ಹಾಕುವಂತೆ ಹೈಕಮಾಂಡ್ ಸೂಚಿಸಿದೆಯಾ..?
ದಾವಣಗೆರೆ: ಲೋಕಸಭಾ ಚುನಾವಣೆಯಲ್ಲಿ ಕೆಲವು ಭಿನ್ನಾಭಿಪ್ರಾಯ ಹೊಗೆಯಾಡುತ್ತಿದೆ. ಕೆಲವರು ಬಂಡಾಯವನ್ನೇ ಎದ್ದಿದ್ದಾರೆ. ದಾವಣಗೆರೆಯ ವಿಚಾರದಲ್ಲೂ ಅಷ್ಟೇ ಟಿಕೆಟ್ ವಿಚಾರಕ್ಕೆ ರೇಣುಕಾಚಾರ್ಯ ಬೇಸರ ಮಾಡಿಕೊಂಡು ಕೂತಿದ್ದಾರೆ. ಸಂಸದ ಸಿದ್ದೇಶ್ವರ ಪತ್ನಿಗೆ ಟಿಕೆಟ್ ಕೊಟ್ಟಿದ್ದಕ್ಕೆ ಕೋಪ ಹೊರಗೆ ಹಾಕಿದ್ದಾರೆ. ಅಷ್ಟೇ ಅಲ್ಲ ಅತೃಪ್ತರ ತಂಡ ಕಟ್ಟಿಕೊಂಡು ಬಹಿರಂಗವಾಗಿಯೇ ಸಭೆ ನಡೆಸಿದ್ದಾರೆ. ರೇಣುಕಾಚಾರ್ಯರ ಟೀಂ ಹೈಕಮಾಂಡ್ ನಾಯಕರಿಗೆ ಟಿಕೆಟ್ ಬದಲಿಸುವಂತೆ ಸೂಚನೆ ನೀಡಿದೆ. ಹೀಗಾಗಿ ಹೈಕಮಾಂಡ್ ನಿಂದ ಎಚ್ಚರಿಕೆಯ ಸಂದೇಶ ಸಿಕ್ಕಿದೆ.
ಹೈಕಮಾಂಡ್ ಸೂಚನೆ ಮೇರೆಗೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರು ರೇಣುಕಾಚಾರ್ಯ ಅವರಿಗೆ ಕರೆ ಮಾಡಿ ಎಚ್ಚರಿಕೆ ನೀಡಿದ್ದಾರೆ. ಪಕ್ಷದಲ್ಲಿ ಇದ್ದು ಕೆಲಸ ಮಾಡುವುದಾದರೆ ಮಾಡು. ಹೈಕಮಾಂಡ್ ನಾಯಕರು ಕರೆ ಮಾಡಿ ಪಕ್ಷದಿಂದ ಹೊರ ಹಾಕುವಂತೆ ಸೂಚಿಸಿದ್ದಾರೆ. ಇಲ್ಲ ನೀನು ಬೇರೆ ಪಕ್ಷಕ್ಕೆ ಹೋಗುವುದಿದ್ದರು ಹೋಗು ಎಂದು ನೇರವಾಗಿಯೇ ಹೇಳಿದ್ದಾರೆಂದು ಮೂಲಗಳಿಂದ ಮಾಹಿತಿ ದೊರೆತಿದೆ.
ಟಿಕೆಟ್ ಘೋಷಣೆಯಾದ ಬೆನ್ನಲ್ಲೇ ಹಲವು ಸಮಸ್ಯೆಗಳು ತಲೆದೂರಿದ್ದು, ಅದನ್ನು ಸರಿ ಪಡಿಸುವಂತೆ ಹೈಕಮಾಂಡ್ ನಾಯಕರು ಸೂಚಿಸಿದ್ದಾರೆ. ಈ ಸಂಬಂಧ ದಾವಣಗೆರೆ ಬಿಜೆಪಿ ನಾಯಕರು ಕರೆ ಮಾಡಿ, ರಾಜಿ ಸಂಧಾನ ಮಾಡಿಸುವಂತೆ ಕೇಳಿಕೊಂಡಿದ್ದಾರೆ. ಇದಕ್ಕೆ ಬಿವೈ ವಿಜಯೇಂದ್ರ ಅವರು ಸುಮ್ಮನೆ ಆಗಿದ್ದರು ಇದೇ ವಿಚಾರವಾಗಿ ಇದೀಗ ಬಿಎಸ್ ಯಡಿಯೂರಪ್ಪ ಅವರು ರೇಣುಕಾಚಾರ್ಯ ಅವರಿಗೆ ಕರೆ ಮಾಡಿ ಕ್ಲಾಸ್ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.
ಹೈಕಮಾಂಡ್ ಅಷ್ಟೊಂದು ಕೋಪ ಮಾಡಿಕೊಳ್ಳುವುದಕ್ಕೆ ಕೆಲವೊಂದು ಕಾರಣಗಳಿವೆ. ಅದರಲ್ಲೂ ಟಿಕೆಟ್ ಘೋಷಣೆಯಾದ ಬೆನ್ನಲ್ಲೇ ಅತೃಪ್ತರ ತಂಡ ರೆಡಿಯಾಗಿತ್ತು, ಆ ತಂಡವನ್ನು ಕಟ್ಟಿದ್ದೇ ರೇಣುಕಾಚಾರ್ಯ ಎಂಬ ಮಾಹಿತಿ ಹೈಕಮಾಂಡ್ ಗೆ ಸಿಕ್ಕ ಬೆನ್ನಲ್ಲೇ ಕೋಪಗೊಂಡಿದ್ದಾರೆ.