Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಗೃಹಲಕ್ಷ್ಮಿ ಯೋಜನೆ : ದಾವಣಗೆರೆ ಜಿಲ್ಲೆಯಲ್ಲಿ 1,10,000 ಫಲಾನುಭವಿಗಳ ನೊಂದಣಿ ಕಾರ್ಯ ಪೂರ್ಣ

08:03 PM Jul 26, 2023 IST | suddionenews
Advertisement

ಮಾಹಿತಿ ಕೃಪೆ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ದಾವಣಗೆರೆ

Advertisement

ದಾವಣಗೆರೆ; (ಜುಲೈ. 26) : 2023-24 ನೇ ಸಾಲಿನಲ್ಲಿ ಮಹಿಳಾ ಸಬಲೀಕರಣಕ್ಕಾಗಿ ಸರ್ಕಾರದ ಗೃಹಲಕ್ಷ್ಮಿ ಯೋಜನೆಯನ್ನು ಜಾರಿಗೊಳಿಸಿದ್ದು, ಯೋಜನೆಯಡಿ ಜಿಲ್ಲೆಯ ಪಡಿತರ ಕಾರ್ಡ್ ಹೊಂದಿದ ಕುಟುಂಬದ ಯಜಮಾನಿಗೆ ಮಾಸಿಕ ರೂ 2000 ಗಳನ್ನು ಡಿ.ಬಿ.ಟಿ ಮೂಲಕ ನೇರವಾಗಿ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ.

ಜಿಲ್ಲೆಯಲ್ಲಿ ಅಂದಾಜು 4,50,000 ಫಲಾನುಭವಿಗಳಿದ್ದು, ಸುಮಾರು 1,10,000 ಫಲಾನುಭವಿಗಳ ನೊಂದಣಿ ಕಾರ್ಯ ಪೂರ್ಣಗೊಂಡಿದ್ದು, ಉಳಿದ ಫಲಾನುಭವಿಗಳ ಅರ್ಜಿಗಳನ್ನು ಇನ್ನು ಒಂದು ವಾರದೊಳಗೆ ನೊಂದಣಿ ಮಾಡಲಾಗುತ್ತದೆ.

Advertisement

ಜಿಲ್ಲೆಯಾದ್ಯಂತ ಒಟ್ಟು 411 ನೊಂದಣಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, ಅರ್ಜಿ ಸಲ್ಲಿಸಲು ಯಾವುದೇ ಕಾಲ ಮಿತಿಯಿರುವುದಿಲ್ಲ ಹಾಗೂ ನೊಂದಣಿಗೆ ಶುಲ್ಕ ಪಾವತಿಸುವಂತಿಲ್ಲ. ಯಾವುದೇ ಕೇಂದ್ರಗಳಲ್ಲಿ ನೋಂದಾಯಿಸಲು ಹಣ ಕೇಳಿದಲ್ಲಿ ಸಾರ್ವಜನಿಕರು ಸಂಬಂಧಪಟ್ಟ ಶಿಶು ಅಭಿವೃದ್ಧಿ ಯೋಜನಾಧಿಕಾರಿ, ಪೋಲೀಸ್ ಠಾಣೆ ಅಥವಾ ತಹಶೀಲ್ದಾರರ ಕಚೇರಿ ಸಂಪರ್ಕಿಸಿ ದೂರು ಸಲ್ಲಿಸಲು ಅಪರ ಜಿಲ್ಲಾಧಿಕಾರಿ ಪಿ.ಎನ್ ಲೋಕೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement
Tags :
beneficiariescompletedDavangere districtfeaturedGruhalakshmi Yojanaregistrationsuddioneಕಾರ್ಯಗೃಹಲಕ್ಷ್ಮಿ ಯೋಜನೆದಾವಣಗೆರೆ ಜಿಲ್ಲೆನೋಂದಣಿಪೂರ್ಣಫಲಾನುಭವಿಗಳುಸುದ್ದಿಒನ್
Advertisement
Next Article