ಹುಬ್ಬಳ್ಳಿಯಿಂದ ನಾಳೆ ಹೋರಾಟ : ರಾಜ್ಯ ಸರ್ಕಾರದ ವಿರುದ್ಧ ರೇಣುಕಾಚಾರ್ಯ ಕಿಡಿ..!
ದಾವಣಗೆರೆ: ಇಂದು ನಾಡಿನೆಲ್ಲೆಡೆ ದಸರಾ ಸಂಭ್ರಮವನ್ನು ಆಚರಣೆ ಮಾಡಲಾಗಿದೆ. ಈ ಬೆನ್ನಲ್ಲೇ ರೇಣುಕಾಚಾರ್ಯ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಅದರಲ್ಲೂ ಮಹಿಷ ಮರ್ಧನನ ರೀತಿ ರಾಜ್ಯ ಸರ್ಕಾರ ಮರ್ಧನವಾಗುತ್ತದೆ ಎಂದಿದ್ದಾರೆ. ವಿಜಯದಶಮಿಯ ದಿನವೇ ಈ ಸರ್ಕಾರ ಹಿಂದೂಗಳ ಭಾವನೆಗೆ ಧಕ್ಕೆ ತಂದಿದೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.
ರಾಜ್ಯದಲ್ಲಿ ಭಯೋತ್ಪಾದಕ ಆಡಳಿತ ಹಿಂಬಾಗಿಲ ಮೂಲಕ ಆಡಳಿತ ನಡೆಸುತ್ತಿದೆ. ದೇಶದ್ರೋಹಿಗಳ ಸರ್ಕಾರ ಆಡಳಿತ ನಡೆಸುತ್ತಿದೆ. ಈ ಹಿಂದೆ ಪಿಎಫ್ಐ,ಎಸ್ಡಿಪಿಐ ಮೇಲೆ ಹಾಕಿದ್ದ ಕೇಸ್ ಅನ್ನು ಹಿಂಪಡೆದಿದ್ದರು. ಆ ಬಳಿಕ ಭಯೋತ್ಪಾದನೆ ಹೆಚ್ಚಾಗಿದೆ. ಕಳೆದ ಮೂರು ವರ್ಷಗಳ ಹಿಂದೆ ಪೊಲೀಸ್ ಠಾಣೆ ಸುಡಲು ಹೋಗಿದ್ದರು. ಮಾರಕಾಸ್ತ್ರಗಳ ಬಳಕೆ ಮಾಡಿದ್ದರು. ಕಲ್ಲು ತೂರಾಟ ಮಾಡಿದ್ದರು. ಪೊಲೀಸ್ ಮೇಲೆ ಹಲ್ಲೆ ಕೂಡ ಮಾಡಿದ್ದರು. ಅಂದು 120 ಜನರನ್ನು ಅರೆಸ್ಟ್ ಮಾಡಲಾಗಿತ್ತು. ಇಂದು ಅವರ ಮೇಲಿನ ಕೇಸ್ ವಾಪಾಸ್ ಪಡೆಯುತ್ತಿದ್ದೀರಲ್ಲ ನಾಚಿಕೆ ಆಗಲ್ವಾ ನಿಮಗೆ ಎಂದು ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.
ನಾಡು, ನುಡಿ, ಜಲದ ವಿಚಾರದಲ್ಲಿ ಹೋರಾಟ ಮಾಡಿದವರ ಮೇಲಿನ ಕೇಸ್ ವಾಪಸ್ ಪಡೆಯಿರಿ. ದೇಶವಿರೋಧದ ಮೇಲೆ ಕೇಸ್ ಹಾಕಿದ್ದನ್ನು ಹಿಂಪಡೆದರೆ ಅವರು ಮತ್ತಷ್ಟು ಮೆರಿತಾರೆ. ಜನ ನಿಮಗೆ ಅವಕಾಶ ಕೊಟ್ಟಿದ್ದಾರೆ. ನಿಮ್ಮ ಇಬ್ಬನಿಗೆ ನೀತಿ ಕೈಬಿಡಿ. ಭಯೋತ್ಪಾದನೆಗೆ ಬೆಂಬಲ ಕೊಡುವ ಕೆಲಸ ಕೈಬಿಡಬೇಕು ಎಂದು ಆಕ್ರೋಶ ಹೊರ ಹಾಕಿದರು.
ಹುಬ್ಬಳ್ಳಿ ಗಲಭೆ ಪ್ರಕರಣ ವಾಪಸ್ ಪಡೆಯಲು ಸರ್ಕಾರ ನಿರ್ಧರಿಸಿರುವ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕರು ಇಂದು ಸಭೆ ನಡೆಸಿದರು. ಈ ವೇಳೆ ಸರ್ಕಾರದ ತೀರ್ಮಾನದ ವಿರುದ್ಧ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ ಎಂದು ಬಿಜೆಪಿ ಶಾಸಕ ಮಹೇಶ್ ಟೆಂಗಿನಕಾಯಿ ಹೇಳಿದ್ದಾರೆ.