For the best experience, open
https://m.suddione.com
on your mobile browser.
Advertisement

ಮಾಜಿ ಸಚಿವ ಬಿಸಿ ಪಾಟೀಲ್ ಅಳಿಯ ಆತ್ಮಹತ್ಯೆ : ಕಾರು ರಸ್ತೆ ಬದಿ ಕಾರು ನಿಲ್ಲಿಸಿ ವಿಷ ಸೇವನೆ..!

06:25 PM Jul 08, 2024 IST | suddionenews
ಮಾಜಿ ಸಚಿವ ಬಿಸಿ ಪಾಟೀಲ್ ಅಳಿಯ ಆತ್ಮಹತ್ಯೆ   ಕಾರು ರಸ್ತೆ ಬದಿ ಕಾರು ನಿಲ್ಲಿಸಿ ವಿಷ ಸೇವನೆ
Advertisement

ದಾವಣಗೆರೆ: ಮಾಜಿ ಸಚಿವ ಬಿ.ಸಿ.ಪಾಟೀಲ್ ಅಳಿಯ ಪ್ರತಾಪ್ ಕುಮಾರ್ ಕೆ.ಜೆ ಆತ್ಮಹತ್ಯೆಗೆ ಶರಣಾಗಿದ್ದಾರೆ. 41 ವರ್ಷ ವಯಸ್ಸಾಗಿತ್ತು. ದಾವಣಗೆರೆ ಜಿಲ್ಲೆಯ ಹೊನ್ನಾಳಿ ಅರಣ್ಯ ಪ್ರದೇಶದಲ್ಲಿ ರಸ್ತೆ ಬದಿ ಕಾರು ನಿಲ್ಲಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇವರು ಬಿ.ಸಿ ಪಾಟೀಲ್ ಅವರ ದೊಡ್ಡ ಮಗಳ ಗಂಡ ಪ್ರತಾಪ್ ಕುಮಾರ್.

Advertisement

ಪ್ರತಾಪ್ ಕುಮಾರ್ ವಿಷ ಸೇವಿಸಿದ್ದನ್ನು ಕಂಡ ಸ್ಥಳೀಯರು ತಜ್ಷಣ ಅವರನ್ನು ಹತ್ತಿರದ ಆಸ್ಪತ್ರೆಗೆ ಸೇರಿಸಿದ್ದಾರೆ. ಹೆಚ್ಚಿನ ಚಿಕಿತ್ಸೆಗೆಂದು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

Advertisement

ವೆನ್ಯೂ ಕಾರಿನಲ್ಲಿ ಬಂದಿದ್ದ ಪ್ರತಾಪ್ ಕುಮಾರ್, ಹರಿಹರ-ಶಿವಮೊಗ್ಗ ರಾಜ್ಯ ಹೆದ್ದಾರಿಯಲ್ಲಿ ಬರುವ ಹೊನ್ನಾಳಿ ತಾಲೂಕಿನ ಅರಕೆರೆ ಗ್ರಾಮದ ಬಳಿ ಕಾರು ನಿಲ್ಲಿಸಿ ವಿಷ ಸೇವಿಸಿದ್ದಾರೆ. ಕಾರಿನಲ್ಲಿ ವಿಷದ ಬಾಟಲಿ ಪತ್ತೆಯಾಗಿದೆ. ಆದರೆ ಪ್ರತಾಪ್ ಕುಮಾರ್ ವಿಷ ಸೇವಿಸಿದ್ದು ಯಾಕೆ ಎಂಬುದು ಮಾತ್ರ ತಿಳಿದಿಲ್ಲ.

Advertisement

ಪ್ರತಾಪ್ ಕುಮಾರ್ ದಾವಣಗೆರೆಯ ಕತ್ತಲಗೆರೆ ಗ್ರಾಮದವರು. ಕಳೆದ ಹದಿನೈದು ವರ್ಷದ ಹಿಂದೆ ಬಿ.ಸಿ ಪಾಟೀಲ್ ಅವರ ಮಗಳು ಸೌಮ್ಯ ಅವರನ್ನು ಮದುವೆಯಾಗಿದ್ದರು. ಆದರೆ ಇದೀಗ ಏಕಾಏಕಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿಷ ಸೇವಿಸುವಂಥದ್ದು ಏನಾಗಿತ್ತು ಎಂಬುದು ಕೂಡ ಗೊತ್ತಿಲ್ಲ. ಸದ್ಯ ಪೊಲೀಸರು ಈ ಬಗ್ಗೆ ತನಿಖೆ ನಡೆಸಿದಾಗ ಸತ್ಯಾಸತ್ಯತೆ ಹೊರ ಬರಬಹುದು. ಆದರೆ ಪ್ರತಾಪ್ ಸಾವಿನಿಂದಾಗಿ ಕುಟುಂಬದಲ್ಲಿ ದುಃಖ ಮರುಗಟ್ಟಿದೆ. ಮಗಳ ಗಂಡ ಇಷ್ಟು ಬೇಗ ಹೋಗಿದ್ದನ್ನು ನೆನೆದು ಬಿ.ಸಿ ಪಾಟೀಲ್ ಅವರು ದುಃಖಿತರಾಗಿದ್ದಾರೆ. ಇಡೀ ಕುಟುಂಬ ಪ್ರತಾಪ್ ಅವರನ್ನು ನೆನೆದು ಕಣ್ಣೀರು ಹಾಕುತ್ತಿದೆ.

Advertisement
Advertisement

Advertisement
Tags :
Advertisement