Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಹಣ ದ್ವಿಗುಣ : ಆಂಧ್ರ ಮೂಲದ ಕ್ರೌಡ್ ಕ್ಲಬ್ ಇಂಟರ್ ನ್ಯಾಷನಲ್ ಪ್ರೈವೇಟ್ ಲಿಮಿಟೆಡ್ ಹೆಸರಿನಲ್ಲಿ ರೂ.4.79 ಕೋಟಿ ಮೋಸ

06:02 PM Aug 30, 2024 IST | suddionenews
Advertisement

ದಾವಣಗೆರೆ, ಆ.30 :  ಆಂಧ್ರಪ್ರದೇಶದ ಕರ್ನೂಲ್ ಸ್ಕಂದ ಶಾಪಿಂಗ್ ಮಾಲ್, ಓಲ್ಡ್ ಟಾಕೀಸ್ ವಿಳಾಸದ ಕ್ರೌಡ್ ಕ್ಲಬ್ ಇಂಟರ್ ನ್ಯಾಷನಲ್ ಪ್ರೈವೇಟ್ ಲಿಮಿಟೆಡ್ ಕೋಡೆ ರಮಣಯ್ಯ ತಂದೆ ಕೋಡೆ ಶ್ರೀನಿವಾಸಲು ಇವರು ಈ ಪ್ರೈವೇಟ್ ಲಿಮಿಟೆಡ್‍ನಲ್ಲಿ ಠೇವಣಿ ಇಟ್ಟಲ್ಲಿ 60 ದಿನಗಳಲ್ಲಿ ಹಣ ದ್ವಿಗುಣವಾಗಲಿದೆ ಎಂದು ನಂಬಿಸಿ 106 ಗ್ರಾಹಕರಿಂದ ರೂ.4,79,99,000 ಗಳನ್ನು ಹೂಡಿಕೆ ಮಾಡಿಸಿಕೊಂಡು ಮೋಸ ಮಾಡಲಾಗಿದೆ ಎಂದು ಹೊಳಲ್ಕೆರೆ ತಾಲ್ಲೂಕು ಚಿಕ್ಕಜಾಜೂರು ಗ್ರಾಮದ ರಮೇಶಪ್ಪ ಇವರು ನೀಡಿದ ದೂರು ಮೇರೆಗೆ ಪ್ರಕರಣ ದಾಖಲಿಸಿ ದಾವಣಗೆರೆ ಸಿಐಡಿ, ಸಿಐಯು ಘಟಕದಿಂದ ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಉಪಾಧೀಕ್ಷಕರಾದ ಮಾಲತೇಶ್ ಎನ್.ಕೂನಬೇವು ತಿಳಿಸಿದ್ದಾರೆ.

Advertisement

ರಮೇಶಪ್ಪನಿಗೆ ಪರಿಚಯಸ್ಥರಾದ ಟಿ.ವಿ.ಶೇಷಯ್ಯ ಮತ್ತು ಎಂ.ಏಳುಕೊಂಡಲು ಇವರು ಕ್ರೌಡ್ ಕ್ಲಬ್ ಇಂಟರ್ ನ್ಯಾಷನಲ್ ಪ್ರೈವೇಟ್ ಲಿಮಿಟೆಡ್ ನಲ್ಲಿ ಹಣ ಠೇವಣಿ ಇಟ್ಟಲ್ಲಿ 60 ದಿನಗಳಲ್ಲಿ ಹಣ ದ್ವಿಗುಣವಾಗಲಿದೆ ಎಂದು ತಿಳಿಸಿ ಕಂಪನಿಯ ಙes ಬ್ಯಾಂಕ್ ಖಾತೆ 114563300000374 ಗೆ ಹಣ ವರ್ಗಾವಣೆ ಮಾಡಿದ್ದು 60 ದಿನಗಳ ನಚಿತರ ರಮೇಶಪ್ಪ ರೂ.1,96,000 ರೂ.ಗಳನ್ನು ವಾಪಸ್ ಪಡೆದಿದ್ದರು. ನಾನು ಇಟ್ಟ ಠೇವಣಿಗೆ ಬಾಂಡ್ ಪೇಪರ್ ಮೇಲೆ ಅಗ್ರಿಮೆಂಟ್ ಸಹ ನೀಡಿರುತ್ತಾರೆ. ಇದನ್ನು ನಂಬಿ ನಾನು ಸೇರಿದಂತೆ ಸ್ನೇಹಿತರಿಗೆ ಮತ್ತು ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಪರಿಚಯಸ್ಥರಿಗೆ ತಿಳಿಸಿ ಒಟ್ಟು 106 ಜನರಿಂದ ರೂ. ರೂ.4,79,99,000 ಹೂಡಿಕೆ ಮಾಡಿಸಲಾಗಿತ್ತು. ಈ ಮೊತ್ತಕ್ಕೆ 60 ದಿನಗಳ ನಂತರ ಯಾವುದೇ ಹಣ ವಾಪಸ್ ನೀಡಿರುವುದಿಲ್ಲ. ಇದರಿಂದ ಇಷ್ಟು ಗ್ರಾಹಕರು ಕಂಪನಿಯನ್ನು ನಂಬಿ ಮೋಸ ಹೋಗಿರುತ್ತಾರೆ.

ಪ್ರಕರಣವು ಪ್ರಸ್ತುತ ದಾವಣಗೆರೆ ಸಿಐಡಿ, ಸಿಐಯು ಘಟಕದಲ್ಲಿ ತನಿಖೆ ನಡೆಯುತ್ತಿದ್ದು ಕ್ರೌಡ್ ಕ್ಲಬ್ ಇಂಟರ್ ನ್ಯಾಷನಲ್ ಪ್ರೈವೇಟ್ ಲಿಮಿಟೆಡ್ ಹೆಸರುಗಳಲ್ಲಿ ಸ್ಥಿರ ಮತ್ತು ಚರ ಆಸ್ತಿಗಳನ್ನು ಮಾಡಿರುವುದಾಗಿ ತಿಳಿದು ಬಂದಿದ್ದು ಈ ಸಂಸ್ಥೆಯ ಹೆಸರಿನಲ್ಲಿ ಆಸ್ತಿ ಇದ್ದಲ್ಲಿ ಮಾಹಿತಿ ನೀಡಲು ಮತ್ತು ಕಂಪನಿಯಿಂದ ಮೋಸ ಹೋಗಿದ್ದಲ್ಲಿ 9480800192 ಗೆ ಮಾಹಿತಿ ನೀಡಲು ತಿಳಿಸಲಾಗಿದೆ.

Advertisement

Advertisement
Tags :
Andhra-basedbengaluruchitradurgaCrowd Club International Private LimitedDuplication of moneyfraudsuddionesuddione newsಆಂಧ್ರ ಪ್ರದೇಶಕ್ರೌಡ್ ಕ್ಲಬ್ ಇಂಟರ್ ನ್ಯಾಷನಲ್ ಪ್ರೈವೇಟ್ ಲಿಮಿಟೆಡ್ಗ್ರಾಹಕರ ಮೋಸಚಿತ್ರದುರ್ಗಬೆಂಗಳೂರುಸುದ್ದಿಒನ್ಸುದ್ದಿಒನ್ ನ್ಯೂಸ್ಹಣ ದ್ವಿಗುಣ
Advertisement
Next Article