Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ದಾವಣಗೆರೆ ಭಾಗದಲ್ಲಿ ತೆಂಗಿನಕಾಯಿ ಇಳುವರಿ ತಗ್ಗಲು ಕಾರಣವೇನು ಗೊತ್ತಾ..?

12:01 PM Nov 19, 2024 IST | suddionenews
Advertisement

ದಾವಣಗೆರೆ: ಈ ಭಾಗದ ಸುತ್ತಲಿನ ರೈತರು ತೆಂಗು ಬೆಳೆಯನ್ನು ಹೆಚ್ಚಾಗಿ ಬೆಳೆಯುತ್ತಾರೆ. ಆದರೆ ಈ ವರ್ಷ ನೋಡಿದರೆ ತೆಂಗು ಇಳುವರಿಯೇ ಕಡಿಮೆಯಾಗಿದೆ. ಸುಮಾರು ಶೇಕಡ 70 ರಷ್ಟು ಇಳುವರಿ ಕುಸಿದಿದ್ದು, ರೈತರು ನಿಜಕ್ಕೂ ಕಂಗಲಾಗಿದ್ದಾರೆ. ಹೀಗೆ ಇಳುವರಿ ದಿಢೀರನೇ ಕಡಿಮೆ ಆಗುವುದಕ್ಕೆ ಕಾರಣವೇ ಆ ಹುಳಗಳು.

Advertisement

ಕಂದು ಹುಳು ಕಾಟ ಜೋರಾಗಿದೆ. ಈ ಹುಳಗಳಿಂದಾನೇ ಹರಿಹರ ತಾಲೂಕಿನಾದ್ಯಂತ ರೈತರು ಸಮಸ್ಯೆ ಎದುರಿಸುವಂತೆ ಆಗಿದೆ. ತೆಂಗಿಗೆ ಹುಳಗಳ ಕಾಟ ಶುರುವಾಗಿರುವ ಕಾರಣ, ಮರದಲ್ಲಿ ಗರಿಗಳನ್ನೆಲ್ಲಾ ತಿಂದು ಹಾಕುತ್ತಿದೆ. ತೆಂಗಿನ ಗರಿಗಳನ್ನೆಲ್ಲ ಕಂದು ಹುಳುಗಳು ತಿಂದರೆ, ಕಾಯಿ ಬಲಿಯುವುದಕ್ಕೆ ಬಲವೇ ಇಲ್ಲದಂತಾಗುತ್ತದೆ. ಹೀಗಾಗಿಯೇ ಬೆಳೆಯಲ್ಲಿ ಕುಸಿತ ಕಾಣುತ್ತಿದೆ. ಈ ಹುಳಗಳ ಉಪಟಳ ಇಂದು ನಿನ್ನೆಯದಲ್ಲ ಕಳೆದ ನಾಲ್ಕು ವರ್ಷಗಳಿಂದಾನೂ ರೈತರಿಗೆ ಹುಳಗಳದ್ದೆ ತೊಂದರೆಯಾಗಿದೆ. ಅದಷ್ಟೇ ಅಲ್ಲ ಈ ಹುಳಗಳು ದಿನಕ್ಕೇನೆ ಸಾವಿರಾರು ಮೊಟ್ಟೆ ಹಾಕುವುದರಿಂದ ಇವುಗಳ ಸಂತತಿ ಅಧಿಕವಾಗುತ್ತಾ ಹೋಗುತ್ತದೆ‌. ಇದರಿಂದ ಬೆಳೆಗಳು ನಾಶವಾಗುತ್ತವೆ. ಈ ಹುಳಗಳನ್ನು ನಿಯಂತ್ರಿಸುವುದಕ್ಕೆ ರೈತರು ಸಹ ಸಾವಿರಾರು ರೂಪಾಯಿ ಖರ್ಚು ಮಾಡಿದ್ದಾರೆ. ಆದರೂ ಪ್ರಯೋಜನವಾಗಿಲ್ಲ.

ಈ ಕಂದು ಹುಳುಗಳ ನಾಶಕ್ಕೆ ತೋಟಗಾರಿಕಾ ಇಲಾಖೆ ಕೂಡ ಪ್ರಯತ್ನ ಪಟ್ಟಿದೆ. ಅಂದ್ರೆ ಈ ಹುಳುಗಳನ್ನು ತಿನ್ನುವಂತಹ ಮತ್ತೊಂದು ಹುಳುಗಳನ್ನು ತೋಟಗಾರಿಕಾ ಇಲಾಖೆ ಉತ್ಪತ್ತಿ ಮಾಡಿತ್ತು. ಆದರೆ ಆ ಹುಳುಗಳು ಕಂದು ಹುಳುಗಳನ್ನು ನಿರೀಕ್ಷೆ ಮಟ್ಟದಲ್ಲಿ ನಾಶ ಮಾಡಲಿಲ್ಲ. 10 ಸಾವಿರ ತೆಂಗು ಬರುವ ಜಾಗದಲ್ಲಿ 3 ಸಾವಿರ ತೆಂಗು ಬರುತ್ತಿದೆ. ಹೀಗಾಗಿಯೇ ಎಳನೀರಿನ ದರ ಗಗನಕ್ಕೇರಿದೆ.

Advertisement

Advertisement
Tags :
bengaluruchitradurgacoconut yielddavanagereDavangerekannadaKannadaNewssuddionesuddionenewsಕನ್ನಡಕನ್ನಡವಾರ್ತೆಕನ್ನಡಸುದ್ದಿಚಿತ್ರದುರ್ಗತೆಂಗಿನಕಾಯಿ ಇಳುವರಿದಾವಣಗೆರೆಬೆಂಗಳೂರುಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article