ದಾವಣಗೆರೆಯಲ್ಲಿ 13 ವರ್ಷದ ವಿದ್ಯಾರ್ಥಿನಿ ಸಾವು : ಡೆಂಗ್ಯೂ ಆತಂಕ
ವಿಜಯನಗರ: ರಾಜ್ಯದಲ್ಲಿ ಡೆಂಗ್ಯೂ ಭಯ ಮನೆ ಮಾಡಿದೆ. ಹೊಸಪೇಟೆಯಲ್ಲಿ ಓದುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ಜ್ವರದಿಂದ ಸಾವನ್ನಪ್ಪಿದ್ದಾಳೆ. ಇದರಿಂದ ಡೆಂಗ್ಯೂ ಬಗ್ಗೆ ಇರುವ ಆತಂಕ ಮತ್ತಷ್ಟು ಹೆಚ್ಚಾಗಿದೆ. 13 ವರ್ಷದ ಜಾಹ್ನವಿ ಮೃತ ದುರ್ದೈವಿ.
ಜಾಹ್ನವಿ 7ನೇ ತರಗತಿಯಲ್ಲಿ ಓದುತ್ತಿದ್ದಳು. ಹೊಸಪೇಟೆಯ ವಿಜ್ಞಾನ ಇ-ಟೆಕ್ನೋ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಳು. ವೈರಲ್ ಫೀವರ್ ಎಂದುಕೊಂಡು ಹೊಸಪೇಟೆಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಬಳಿಕ ದಾವಣಗೆರೆಯ ಬಾಪೂಜಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ಚಿಕಿತ್ಸೆಯನ್ನು ನೀಡಲಾಗಿತ್ತು. ಆದರೆ ಈಗ ವಿದ್ಯಾರ್ಥಿನಿ ಮೃತ ಪಟ್ಟಿದ್ದಾಳೆ.
ಸಾಮಾನ್ಯವಾಗಿ ಈಡೀಸ್ ಸೊಳ್ಳೆ ಕಚ್ಚುವುದರಿಂದ ಈ ಡೆಂಗ್ಯೂ ಹರಡುತ್ತದೆ. ಕಚ್ಚಿದ ಐದಾರು ದಿನಗಳಿಗೆ ಜ್ವರದ ಲಕ್ಷಣ ಕಾಣಿಸುತ್ತದೆ. ರಾಜ್ಯದಲ್ಲೂ ಇದೇ ಆತಂಕ ಮನೆ ಮಾಡಿದೆ. ಯಾಕಂದ್ರೆ ಡೆಂಗ್ಯೂ ಜ್ವರಕ್ಕೆ ನಿರ್ದಿಷ್ಟವಾದ ಔಷಧಿ ಇಲ್ಲ. ರೋಗ ಲಕ್ಷಣಕ್ಕೆ ಅನುಗುಣವಾಗಿ ಚಿಕಿತ್ಸೆ ನೀಡಲಾಗುತ್ತದೆ. ಇದೀಗ ಮೃತ ಜಾಹ್ನವಿಗೆ ಡೆಂಗ್ಯೂ ತಗಲಿತ್ತಾ ಅಥವಾ ಬೇರೆ ಏನಾದರೂ ಸಮಸ್ಯೆ ಆಗಿದೆಯಾ ಎಂಬುದನ್ನು ವಿಜಯನಗರ ಆರೋಗ್ಯ ಇಲಾಖೆ ಸ್ಪಷ್ಟಪಡಿಸಬೇಕಾಗಿದೆ.