ದಾವಣಗೆರೆ | ಸೂಳಿಕೆರೆ ತುಂಬುವುದಕ್ಕೆ ಸನಿಹ : ರೈತರಲ್ಲಿ ಮೂಡಿದೆ ಸಂತಸ
ದಾವಣಗೆರೆ : ರಾಜ್ಯದಲ್ಲಿ ನಿರಂತರ ಮಳೆಯಿಂದ ಹಲವೆಡೆ ಸಮಸ್ಯೆಗಳು ಉಂಟಾಗಿವೆ. ಅದರಲ್ಲೂ ಸಿಲಿಕಾನ್ ಸಿಟಿಯಲ್ಲಿ ಕೆಲವೊಂದು ನಗರ ಪ್ರದೇಶ ರಸ್ತೆಗಳಲ್ಲೂ ಕೆರೆಯಂತಾಗಿದೆ. ಇದರ ಜೊತೆಗೆ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕೆರೆಕಟ್ಟೆಗಳಿ, ಜಲಾಶಯಗಳು ತುಂಬುವ ಸೂಚನೆ ನೀಡಿದೆ. ಇದರಿಂದ ಬೇಸಿಗೆ ಕಾಲಕ್ಕೂ ಅಚ್ಚಹಸಿರು ಸಿಗಲಿದೆ ಎಂಬುದು ರೈತರ ಸಂತಸಕ್ಕೆ ಕಾರಣವಾಗಿದೆ.
ಅದರಲ್ಲೂ ಏಷ್ಯಾದ ಅತಿ ದೊಡ್ಡ 2ನೇ ಕೆರೆ, ದಾವಣಗೆರೆಯ ಸೂಳಿಕೆರೆ ಕೋಡಿ ಬೀಳಲು ಕೇವಲ ಒಂದೂವರೆ ಅಡಿ ನೀರಷ್ಟೇ ಬಾಕಿ ಇದೆ. ಕೆರೆಯ ನೀರಿನ ಮೂಲವಾದ ಹರಿದ್ರಾವತಿ ಹಳ್ಳ ಮೈದುಂಬಿ ಹರಿಯುತ್ತಿದ್ದು, ಅಪಾರ ಪ್ರಮಾಣದಲ್ಲಿ ನೀರು ಕೆರೆಗೆ ಹರಿದು ಬರುತ್ತಿದೆ. ಹಳ್ಳ ತುಂಬಿ ಹರಿಯುತ್ತಿರುವ ಕಾರಣ ಸಾಗರ-ಕೊರಟಿಗೆರೆ ರಸ್ತೆ ಮೇಲೆ ನೀರು ಹರಿದು ಸಂಪರ್ಕ ಕಡಿತವಾಗಿದೆ. ನ್ಯಾಮತಿ ತಾಲೂಕಿನ ಯರಗನಾಳ್ ಗ್ರಾಮದ ಹೊರವಲಯದಲ್ಲಿರುವ ಗೌಡನಗೆರೆ ನಿರಂತರ ಮಳೆಯಿಂದಾಗಿ ಕೋಡಿಯಿಂದ ಹೆಚ್ಚಾಗಿ ನೀರು ಹೊರಗೆ ಬರುತ್ತಿದೆ. ಅಕ್ಕಪಕ್ಕದ ಗ್ರಾಮಗಳು ನೀರಿನಿಂದ ತುಂಬಿ ತುಳುಕುತ್ತಿವೆ. ಸದಾ ಮಳೆಯಾಗುತ್ತಿರುವ ಕಾರಣ ಒಂದಷ್ಟು ಸಮಸ್ಯೆಗಳು ಕಾಡುತ್ತಿವೆ. ಇದರ ನಡುವೆ ಜಲಾಶಯಗಳು, ಕೆರೆಗಳು ತುಂಬಿರುವುದು ಸಂಸತವನ್ನು ತಂದಿದೆ.
ಆದರೆ ಇಲ್ಲಿ ಬೆಳೆ ಹಾನಿ ಹೆಚ್ಚಾಗುತ್ತಿದೆ. ಮುಂಗಾರು ಬಿತ್ತನೆಗೆ ಅಪಾರ ಹಾನಿಯಾಗಿದೆ. ಆದರೆ ಈಗ ಹಿಂಗಾರು ಬಿತ್ತನೆಗೂ ಅವಕಾಶವಿಲ್ಲದಂತಾಗಿದೆ. ಅದರಲ್ಲೂ ಅಡಿಕೆ, ತೆಂಗು ತೋಟಗಳಲ್ಲಿ ನೀರು ನಿಂತಿದೆ. ಮಳೆ ಹೀಗೆ ಮುಂದುವರೆದರೆ ಇನ್ನಷ್ಟು ಮುಂಗಾರು ಬೆಳೆಗಳ ಜೊತೆಗೆ ತೋಟಗಾರಿಕಾ ಬೆಳೆಗಳು ನಾಶವಾಗುತ್ತವೆ. ಸೂಳೆಕೆರೆ ತುಂಬಿ ಹರಿಯುತ್ತಿರುವ ಕಾರಣ ಅಚ್ಚುಕಟ್ಟು ಪ್ರದೇಶದಲ್ಲಿ ಸಾವಿರಾರು ಎಕರೆ ಭತ್ತದ ಪ್ರದೇಶಗಳು ಜಲಾವೃತವಾಗಿವೆ.