ದಾವಣಗೆರೆ ಹಾಲಿ ಸಂಸದರಿಗೆ ಬಂಡಾಯದ ಬಿಸಿ : ಚಿತ್ರದುರ್ಗದವರಿಗೆ ದಾವಣಗೆರೆ ಟಿಕೆಟ್ ನೀಡದಂತೆ ಬಿಎಸ್ವೈ ಬಳಿ ಮನವಿ
ದಾವಣಗೆರೆ: ಲೋಕಸಭಾ ಚುನಾವಣೆ ಸನಿಹವಾಗುತ್ತಿದೆ. ಈ ಹೊತ್ತಲ್ಲಿ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆಯೂ ಜಾಸ್ತಿಯಾಗುತ್ತಿದೆ. ಇದರ ಬೆನ್ನಲ್ಲೇ ದಾವಣಗೆರೆ ಹಾಲಿ ಸಂಸದ ಜಿ ಎಂ ಸಿದ್ದೇಶ್ವರ್ ಅವರ ವಿರುದ್ಧ ಬಂಡಾಯದ ಧ್ವನಿ ಕೇಳಿಸುತ್ತಿದೆ. ಅವರಿಗೆ ಟಿಕೆಟ್ ನೀಡದಂತೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ಬಳಿ ಮನವಿಯನ್ನು ಮಾಡಿದ್ದಾರೆ.
ಡಾಲರ್ಸ್ ಕಾಲೋನಿಯಲ್ಲಿರುವ ಯಡಿಯೂರಪ್ಪ ಅವರ ನಿವಾಸಕ್ಕೆ ರೇಣುಕಾಚಾರ್ಯ, ಗುರುಸಿದ್ದನಗೌಡ, ಮಾಡಾಳ್ ಮಲ್ಲಿಕಾರ್ಜುನ ಸೇರಿದಂತೆ ನೂರಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರು ಆಗಮಿಸಿದ್ದಾರೆ. ಈ ವೇಳೆ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಸಿದ್ದೇಶ್ವರ್ ಅವರಿಗೆ ಟಿಕೆಟ್ ನೀಡದಂತೆ ಮನವಿ ಮಾಡಿದ್ದಾರೆ.
ಸಂಸದ ಜಿ ಎಂ ಸಿದ್ದೇಶ್ವರ ಅವರು ಮೂಲತಃ ಚಿತ್ರದುರ್ಗದವರು. ಅವರಿಗೆ ಅವರಿಗೆ ದಾವಣಗೆರೆ ಕ್ಷೇತ್ರದ ಟಿಕೆಟ್ ನೀಡದಂತೆ ಒತ್ತಾಯಿಸಿದ್ದಾರೆ. ಈ ಬಾರಿ ಕ್ಷೇತ್ರದಲ್ಲಿ ಸ್ಥಳೀಯರಿಗೆ ಟಿಕೆಟ್ ಕೊಡುವಂತೆ ಮನವಿ ಮಾಡಿದ ನಾಯಕರು ಸರ್ವೇ ಮಾಡಿಸಿ, ಯಾರ ಹೆಸರು ಬರುತ್ತದೋ ಅವರಿಗೆ ಟಿಕೆಟ್ ಕೊಡಿ ಅಂದಿದ್ದಾರೆ. ಇದೆ ವೇಳೆ ಮಾಜಿ ಶಾಸಕ ಎಂ ಪಿ ರೇಣುಕಾಚಾರ್ಯ ಮಾತನಾಡಿ, ದಾವಣಗೆರೆಯಲ್ಲಿ ಚುನಾವಣೆ ಪೂರ್ವ ಪಾರದರ್ಶಕ ಸಮೀಕ್ಷೆ ನಡೆಯಲಿ. ನನಗೆ ಟಿಕೆಟ್ ಕೊಡಿ ಎಂದು ಕೇಳಿಲ್ಲ. ಆದರೆ ಸಮೀಕ್ಷೆ ಮಾಡಿ ಯಾರಿಗಾದರೂ ಕೊಡಲಿ. ಯಡಿಯೂರಪ್ಪ ಅವರ ಬಳಿ ಕಾರ್ಯಕರ್ತರ ಭಾವನೆಯನ್ನು ತಿಳಿಸುತ್ತೇನೆ ಎಂದು ಮಾಜಿ ಸಚಿವ ಎಂ ಪಿ ರೇಣುಕಾಚಾರ್ಯ ಅವರು ತಿಳಿಸಿದ್ದಾರೆ. ಯಾರುಗೆ ಕೊಟ್ಟರು ಸಮಾಧಾನ ಆದರೆ ಸಿದ್ದೇಶ್ವರ ಅವರಿಗೆ ನೀಡುವುದು ಬೇಡ ಎಂದಿದ್ದಾರೆ.