ದಾವಣಗೆರೆ ರೈತರಿಗೆ ಖುಷಿ : ಏಲಕ್ಕಿ ಬಾಳೆಗೆ ಬಂಪರ್ ಬೆಲೆ..!
ದಾವಣಗೆರೆ: ಶ್ರಾವಣ ಮಾಸ ಶುರುವಾಯ್ತು ಎಂದರೆ ಸಾಲು ಸಾಲು ಹಬ್ಬಗಳು ಬರುತ್ತಾ ಇರುತ್ತವೆ. ಹೀಗಾಗಿ ಬಾಳೆ ಹಣ್ಣಿಗೆ ಬೇಡಿಕೆ ಜಾಸ್ತಿಯಾಗಿದೆ. ಅದರಲ್ಲೂ ಏಲಕ್ಕಿ ಬಾಳೆಗೆ ಹೆಚ್ಚಿನ ಬೇಡಿಕೆ ಇದೆ. ಸದ್ಯ ಮಾರುಕಟ್ಟೆಯಲ್ಲಿ ಏಲಕ್ಕಿ ಬಾಳೆ ಹಣ್ಣಿನ ಬೆಲೆ 130 ರೂಪಾಯಿಗೆ ತಲುಪಿದೆ. ಪಚ್ಚ ಬಾಳೆ ಹಣ್ಣು 80 ರೂಪಾಯಿಗೆ ತಲುಪಿದೆ. ಇದು ರೈತರ ಮೊಗದಲ್ಲಿ ಸಂತಸವನ್ನು ತಂದಿದೆ.
ಅದರಲ್ಲೂ ದಾವಣಗೆರೆ ಭಾಗದಲ್ಲಿಯೇ ಏಲಕ್ಕಿ ಬೆಳೆಗಾರರು ಹೆಚ್ಚಾಗಿದ್ದಾರೆ. ಸಾಲು ಸಾಲು ಹಬ್ಬಗಳು ಇರುವ ಕಾರಣ ದೇವರಿಗೆ ಏಲಕ್ಕಿ ಬಾಳೆ ಹಣ್ಣನ್ನೇ ಪೂಜೆಗಾಗಿ ಬಳಸುವುದು. ಪಚ್ಚ ಬಾಳೆ ಹಣ್ಣು ಆಂಧ್ರಪ್ರದೇಶ ಹಾಗೂ ತೆಲಂಗಾಣ ಭಾಗದಿಂದ ಬರುತ್ತವೆ. ಗ್ರಾಹಕರಿಗೆ ಹಣ್ಣಿನ ದರ ಕೇಳಿನೆ ಶಾಕ್ ಆಗುತ್ತಿದೆ. ಮಧ್ಯಮವರ್ಗದವರಿಗೆ ಬರೀ ಒಂದು ಕೆಜಿಗೆ 130 ರೂಪಾಯಿ ಕೊಟ್ಟು ತೆಗೆದುಕೊಳ್ಳುವುದು ಸುಲಭದ ಮಾತಲ್ಲ. ಹೀಗಾಗಿ ಮಧ್ಯಮವರ್ಗದ ಗ್ರಾಹಕರು ಪಚ್ಚೆ ಬಾಳೆ ಹಣ್ಣಿನ ಮೊರೆ ಹೋಗಿದ್ದಾರೆ. ಆದರೆ ಇದು ರೈತರಿಗೆ ಖುಷಿ ತಂದಿದೆ. ರೈತರಿಗೂ ಸಿಗುವುದು ಅಲ್ಪಸ್ವಲ್ಪ ಆದ್ರೆ ಬೆಲೆ ಏರಿಕೆ ಮಧ್ಯವರ್ತಿಗಳಿಗೇನೆ ಹೆಚ್ಚು ಸಂತಸ ತಂದಿರೋದು.
ಬಹುತೇಕ ವ್ಯಾಪಾರಿಗಳು ಹಸಿ ಬಾಳೇ ಗೊನೆಯನ್ನೇ ಖರೀದಿ ಮಾಡಿಬಿಡುತ್ತಾರೆ. ಗೋಧಾಮಿನಲ್ಲಿ ಎರಡ್ಮೂರು ದಿನ ಶೇಖರಿಸಿಟ್ಟು ಹಣ್ಣಾದ ಮೇಲೆ ಮಾರುಕಟ್ಟೆಗೆ ತರುತ್ತಾರೆ. ಹೀಗಾಗಿ ರೈತರಿಗೆ ಕೊಟ್ಟದ್ದು ಸಣ್ಣ ಅಮೌಂಟ್ ಆದರೆ ಮಾರುಕಟ್ಟೆಯಲ್ಲಿ ಮಾರಾಟ ಮಾಡುವುದು, ಅವರಿಗೆ ಲಾಭವಾಗುವ ದರವಾಗಿರುತ್ತದೆ. ಪ್ರಸ್ತುತ ಇಳುವರಿ ಕೂಡ ಶೇಕಡ 50 ರಷ್ಟು ಕುಸಿತವಾಗಿದೆ. ಮಳೆ ಹೆಚ್ಚಾಗಿ ಬರುತ್ತಿರುವ ಕಾರಣ ಬಾಳೆ ಬೆಳೆ ನಾಶವಾಗುತ್ತಿದೆ. ಇದು ರೈತರಿಗೆ ಇನ್ನಷ್ಟು ನಷ್ಟ ಉಂಟು ಮಾಡಿದೆ.