Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ದಾವಣಗೆರೆಯಲ್ಲಿ ಪಾನಿಪೂರಿ ತಿಂದ ಮಕ್ಕಳು ಅಸ್ವಸ್ಥ : ಪಾನಿಯನ್ನು ಪರೀಕ್ಷೆಗೆ ಕಳುಹಿಸಿದ ಅಧಿಕಾರಿಗಳು

09:28 PM Mar 15, 2024 IST | suddionenews
Advertisement

ದಾವಣಗೆರೆ: ಪಾನಿಪೂರಿ ಎಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಬಾಯಿ ಚಪ್ಪರಿಸಿಕೊಂಡು ತಿನ್ನುತ್ತಾರೆ. ಪಾನಿಪೂರಿ ಕೂಡ ಆರೋಗ್ಯಕ್ಕೆ ಒಳ್ಳೆಯದ್ದಲ್ಲ, ಪಾನಿಪೂರಿ ಮಾಡಲು ಬಳಸುವ ನೀರು ಶುದ್ಧತೆ ಇರಲ್ಲ ಎಂದೇ ಹಲವು ಬಾರಿ ದೂರುಗಳು ಬಂದರು, ಪಾನಿಪೂರಿ ಪ್ರಿಯರು ಮಾತ್ರ ಕಡಿಮೆಯಾಗಿಲ್ಲ. ಇದೀಗ ದಾವಣಗೆರೆಯಲ್ಲಿ ಪಾನಿಪೂರಿ ತಿಂದ 19‌ ಮಕ್ಕಳು ಅಸ್ವಸ್ಥರಾಗಿದ್ದಾರೆ.

Advertisement

ಹರಿಹರ ತಾಲೂಕಿನ ಮಲೆಬೆನ್ನೂರು ಪಟ್ಟಣದಲ್ಲಿ ಈ ಘಟನೆ ನಡೆದಿದೆ. ಪಟ್ಟಣದ ಕೆಲವೆಡೆ ಪಾನಿಪೂರಿ ಮಾಡಲಾಗುತ್ತಿತ್ತು. ಅದನ್ನು ತಿಂದ ಮಕ್ಕಳು ವಾಂತಿ - ಭೇದಿ ಮಾಡಿಕೊಂಡು ಅಸ್ವಸ್ಥರಾಗಿದ್ದಾರೆ. ಮಕ್ಕಳನ್ನು ತಕ್ಷಣ ಆಸ್ಪತ್ರೆಗೆ ಸೇರಿಸಲಾಗಿದೆ. ಪ್ರಾಥಮಿಕ ಚಿಕಿತ್ಸೆಯನ್ನು ಕೊಡಿಸಲಾಗಿದೆ. ಸದ್ಯ ಮಕ್ಕಳನ್ನು ಆರೋಗ್ಯ ಕೇಂದ್ರಕ್ಕೆ ಶಿಫ್ಟ್ ಮಾಡಲಾಗಿದೆ. ಆದರೆ ಈ 19 ಮಕ್ಕಳಲ್ಲಿ ಒಂದು ಮಗುವಿಗೆ ತೀರಾ ಅಸ್ವಸ್ಥತೆಯಾಗಿದೆ. ಮಗುವನ್ನು ಐಸಿಯು ನಲ್ಲಿ ಇರಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ.

ಇನ್ನು ಘಟನೆ ಸಂಬಂಧ ಪಾನಿಪೂರಿಗಾಗಿ ಬಳಕೆ ಮಾಡಿದ್ದ ನೀರನ್ನು ಪರೀಕ್ಷಡ ಕಳುಹಿಸಿದ್ದಾರೆ. ಹರಿಹರ ತಹಶೀಲ್ದಾರ್​ ಗುರುಬಸಯ್ಯ, ಹರಿಹರ ಟಿಎಚ್ ಓ, ಮಲೆಬೆನ್ನೂರ ಪಟ್ಟಣದ ಮುಖ್ಯ ಅಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನು ಮಲೆಬೆನ್ನೂರು ಪಟ್ಟಣದಲ್ಲಿ ಪಾನಿಪುರಿ ಮಾರಾಟ ಮಾಡದಂತೆ ಕಟ್ಟುನಿಟ್ಟಿನಿ ಸೂಚನೆ ಹೊರಡಿಸಿದ್ದಾರೆ. ಮಲೆಬೆನ್ನೂರು ಪಟ್ಟಣದಲ್ಲಿ 25ಕ್ಕೂ ಹೆಚ್ಚು ಆಶಾ ಕಾರ್ಯಕರ್ತೆಯರು ಮನೆ ಮನೆಗೂ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Advertisement

Advertisement
Tags :
childrendavanagereDavangerepani puripanipuriದಾವಣಗೆರೆಪಾನಿಪೂರಿಪಾನಿಯನ್ನು ಪರೀಕ್ಷೆಮಕ್ಕಳು ಅಸ್ವಸ್ಥ
Advertisement
Next Article