For the best experience, open
https://m.suddione.com
on your mobile browser.
Advertisement

ಜಗಳೂರು ಪಟ್ಟಣ ಪಂಚಾಯಿತಿ ಸದಸ್ಯ ಸ್ಥಾನಕ್ಕೆ ಉಪ ಚುನಾವಣೆ

06:38 PM Nov 04, 2024 IST | suddionenews
ಜಗಳೂರು ಪಟ್ಟಣ ಪಂಚಾಯಿತಿ ಸದಸ್ಯ ಸ್ಥಾನಕ್ಕೆ ಉಪ ಚುನಾವಣೆ
Advertisement

Advertisement

ದಾವಣಗೆರೆ ನ.4 : ಜಗಳೂರು ಪಟ್ಟಣ ಪಂಚಾಯಿತಿಯ 9 ನೇ ವಾರ್ಡ್‍ಗೆ ಉಪಚುನಾವಣೆ ನಡೆಸಲು ವೇಳಾಪಟ್ಟಿ ಪ್ರಕಟಿಸಿ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿಯವರು ಅಧಿಸೂಚನೆ ಹೊರಡಿಸಿದ್ದಾರೆ.  

ಹಿಂದುಳಿದ ವರ್ಗ `ಬ` ಗೆ ಮೀಸಲಿರುತ್ತದೆ.   ನಾಮಪತ್ರಗಳನ್ನು ಸಲ್ಲಿಸಲು ನವೆಂಬರ್ 11 ಕೊನೆಯ ದಿನ. ನ.12 ರಂದು ನಾಮಪತ್ರಗಳನು ಪರಿಶೀಲನೆ, ನ.14 ರಂದು ಉಮೇದುವಾರಿಕೆಗಳನ್ನು ಹಿಂತೆಗೆದುಕೊಳ್ಳಲು ಕೊನೆಯ ದಿನವಾಗಿರುತ್ತದೆ. ನ.23 ರಂದು ಬೆಳಿಗ್ಗೆ 7 ರಿಂದ ಸಂಜೆ 5 ಗಂಟೆಯವರೆಗೆ ಮತದಾನ ಅವಶ್ಯವಿದ್ದರೆ ಮತದಾನ ನಡೆಯಲಿದ್ದು ನ.26 ರಂದು ಚುನಾವಣಾ ಪ್ರಕ್ರಿಯೆಗಳು ಮುಕ್ತಾಯವಾಗಲಿವೆ.

Advertisement
Advertisement

ಸದಸ್ಯರಾದ ಬಿ.ಟಿ.ರವಿಕುಮಾರ್ ಬಿನ್ ತಿಮ್ಮಾರೆಡ್ಡಿ ಇವರ ಸದಸ್ಯತ್ವವು ಹೈಕೋರ್ಟ್ ಆದೇಶದಂತೆ ರದ್ದಾಗಿದ್ದು ತೆರವಾದ ಈ ಸ್ಥಾನಕ್ಕೆ ಉಪಚುನಾವಣೆ  ನಡೆಯುತ್ತಿದೆ.

Tags :
Advertisement