Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಅಂಚೆ ಇಲಾಖೆಯ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ

06:53 PM Aug 28, 2024 IST | suddionenews
Advertisement

ದಾವಣಗೆರೆ, ಆ.28 : ಅಂಚೆ ಇಲಾಖೆಯಿಂದ 6 ರಿಂದ 9 ನೇ ತರಗತಿ ವಿದ್ಯಾರ್ಥಿಗಳಿಗೆ ಅಂಚೆ ಚೀಟಿಗಳ ಸಂಗ್ರಹಕ್ಕೆ ಉತ್ತೇಜಿಸಲು 'ದೀನ್ ದಯಾಳ ಸ್ಪರ್ಶ ಯೋಜನೆಯಡಿ ಅರ್ಜಿ ಆಹ್ವಾನಿಸಲಾಗಿದೆ.

Advertisement

ಈ ಯೋಜನೆಯಡಿ ಅಂಚೆ ಚೀಟಿಗಳ ಮೌಲ್ಯ ಮತ್ತು ಸಂಶೋಧನೆಯ ಕುರಿತಾದ ಹವ್ಯಾಸ ಬೆಳೆಸಲು ವಿದ್ಯಾರ್ಥಿವೇತನ ನೀಡಲಾಗುವುದು. ಚಿಕ್ಕ ವಯಸ್ಸಿನಲ್ಲಿ ಮಕ್ಕಳಲ್ಲಿ ಅಂಚೆ ಚೀಟಿಗಳ ಸಂಗ್ರಹ ಉತ್ತೇಜನದ ಮೂಲಕ ಸದಾಭಿರುಚಿಯ ಆರೋಗ್ಯ ಪೂರ್ಣ ಜ್ಞಾನಾಧಾರಿತ ಹವ್ಯಾಸ ಬೆಳೆಸುವ್ಯದು ಇದರ ಉದ್ದೇಶವಾಗಿದೆ. 2023-24 ನೇ ಶೈಕ್ಷಣಿಕ ವರ್ಷದಲ್ಲಿ ಶೇ 60ರಷ್ಟು ಅಂಕ ಪಡೆದಿರಬೇಕು ಮತ್ತು ಅಂಚೆ ಚೀಟಿಗಳ ಠೇವಣಿ ಖಾತೆಯನ್ನು ಅಥವಾ ಶಾಲೆಗಳ ಅಂಚೆ ಚೀಟಿ ಕ್ಲಬ್ ಸದಸ್ಯರಾಗಿರಬೇಕು.

ಅಂಚೆ ಚೀಟಿಗಳ ಸಂಗ್ರಹದ ರಸಪ್ರಶ್ನೆ ಮತ್ತು ಯೋಜನೆ ಕಾರ್ಯದ ಆಧಾರದ ಮೇಲೆ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುತ್ತಿದ್ದು, ಆಯ್ಕೆಯಾದ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ 6 ಸಾವಿರ ವಿದ್ಯಾರ್ಥಿವೇತನ ನೀಡಲಾಗುತ್ತದೆ. ಅರ್ಜಿ ಸಲ್ಲಿಸಲು ಸೆ.3 ಕೊನೆಯ ದಿನವಾಗಿರುತ್ತದೆ. ಹೆಚ್ಚಿನ ಮಾಹಿತಿಗೆ  www.indiapost.gov.in  ಅಥವಾ  www.karnatakapost.gov.in     8861126883 2019146755, 08192-236277 ಸಂಖ್ಯೆಗಳಿಗೆ ಸಂಪರ್ಕಿಸಬಹುದೆಂದು ಅಂಚೆ ಇಲಾಖೆ ಅಧೀಕ್ಷಕರಾದ ಚಂದ್ರಶೇಖರ ತಿಳಿಸಿದ್ದಾರೆ.

Advertisement

Advertisement
Tags :
Application InvitationDepartment of PostScholarshipಅಂಚೆ ಇಲಾಖೆಅರ್ಜಿ ಆಹ್ವಾನವಿದ್ಯಾರ್ಥಿವೇತನ
Advertisement
Next Article