Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ದಾವಣಗೆರೆಯಲ್ಲಿ ಸದ್ದಿಲ್ಲದೆ ದೋಚಿದ್ರು 4 ಕೋಟಿಯ ಚಿನ್ನಾಭರಣ..!

04:34 PM Oct 28, 2024 IST | suddionenews
Advertisement

 

Advertisement

ದಾವಣಗೆರೆ: ಚಾಲಾಕಿ ಖದೀಮರು SBI ಬ್ಯಾಂಕ್ ಗೆ ಕನ್ನ ಹಾಕಿ 4 ಕೋಟಿ ರೂಪಾಯಿಗೂ ಅಧಿಕ ಚಿನ್ನಾಭರಣ ಕದ್ದೊಯ್ದಿರುವ ಘಟನೆ ದಾವಣಗೆರೆ ಜಿಕ್ಲೆಯ ನ್ಯಾಮತಿಯಲ್ಲಿ ನಡೆದಿದೆ. ಕಳ್ಳರ ಕೈಚಳಕ ನೋಡೊ, ಅವರ ಬುದ್ದಿವಂತಿಕೆ ನೋಡಿ ಪೊಲೀಸರೇ ಶಾಕ್ ಆಗಿದ್ದಾರೆ. ಬರೋಬ್ಬರಿ 4 ಕೋಟಿ ಚಿನ್ನಾಭರಣ ಹೊತ್ತೊಯ್ದವರು ಯಾವುದೇ ಸಣ್ಣ ಸುಳಿವನ್ನು ನೀಡಿಲ್ಲ. ಇದು ಪೊಲೀಸರಿಗೂ ತಲೆನೋವಾಗಿದೆ.

ಬ್ಯಾಂಕ್ ನ ಕಿಟಕಿ ಮುರಿದಿರುವ ಖದೀಮರು ಬೆಳ್ಳಂಬೆಳಗ್ಗೆಯೇ ಈ ಕೆಲಸ ಮಾಡಿದ್ದಾರೆ. ಅಪಾರ ಪ್ರಮಾಣದ ಹಣ, ಚಿನ್ನಾಭರಣವನ್ನು ಕದ್ದೊಯ್ದಿದ್ದಾರೆ. ಘಟನೆಯ ಬಗ್ಗೆ ತಿಳಿದ ಕೂಡಲೇ ನ್ಯಾಮತಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ‌. ಕಳ್ಳರು ಕದ್ದಿರುವ ಹಣವೆಷ್ಟು, ಚಿನ್ನಾಭಣ ಎಲ್ಲದರ ಬಗ್ಗೆಯೂ ಮಾಹಿತಿ ಕಲೆ ಹಾಕಿದ್ದಾರೆ. ಮಹಾ ಬುದ್ದಿವಂತಿಕೆಯನ್ನು ಪ್ರದರ್ಶನ ಮಾಡಿರುವ ಖತರ್ನಾಕ್ ಕಳ್ಳರು, ಪೊಲೀಸ್ ಶ್ವಾನಕ್ಕೆ ಅನುಮಾನವೇ ಬರದಂತೆ ಮಾಡಿದ್ದಾರೆ.

Advertisement

ಎಲ್ಲೇ ಕಳ್ಳತನ ನಡೆದರು, ಕಳ್ಳರನ್ನು ಹಿಡಿಯಲು‌ ಏನು ಸುಳಿವು ಸಿಗದೆ ಹೋದಲ್ಲಿ ಪೊಲೀಸ್ ಶ್ವಾನಗಳು ಕಳ್ಳನ ಸುಳಿವನ್ನು ಹುಡುಕುತ್ತವೆ. ಕಳ್ಳರ ಓಡಾಟ, ಬೆವರು ವಾಸನೆ ಏನಾದರೊಂದರ ಜಾಡು ಹಿಡಿದು ಕಳ್ಳರನ್ನು ಹಿಡಿದು ಬಿಡುತ್ತದೆ. ಆದರೆ ಈ ಐನಾತಿ ದರೋಡೆಕೋರರು. ಈಗ ಪೊಲೀಸರ ಶ್ವಾನಗಳಿಗೂ ಯಾವುದೇ ಸುಳಿವು ಸಿಗದಂತೆ ಮಾಡಿದ್ದಾರೆ. ತಾವೂ ಓಡಾಡಿದ ಕಡೆಯಲ್ಲೆಲ್ಲಾ ಖಾರದ ಪುಡಿ ಎರಚಿದ್ದಾರೆ. ಶ್ವಾನ ದಳದ ದಾರಿ ತಪ್ಪಿಸಲು ಇಡೀ ಬ್ಯಾಂಕ್ ನಲ್ಲಿ ಖಾರದ ಪುಡಿ ಎರಚಿದ್ದಾರೆ. ಸಿಸಿಟಿವಿಯ ಡಿವಿಆರ್ ಅನ್ನು ಕದ್ದೊಯ್ದಿದ್ದಾರೆ. ಬ್ಯಾಂಕ್ ಸಿಸಿಟಿವಿ ಇಲ್ಲದೆ ಹೋದರೆ ಏನಾಯ್ತು ಪೊಲೀಸರು ಇಡೀ ನಗರದ ಸಿಸಿಟಿವಿಯನ್ನು ಪರಿಶೀಲನೆ ಮಾಡುತ್ತಿದ್ದಾರೆ.

Advertisement
Tags :
bengaluruchitradurgaDavangeregold jewelerystolensuddionesuddione newsಚಿತ್ರದುರ್ಗಚಿನ್ನಾಭರಣದಾವಣಗೆರೆಬೆಂಗಳೂರುಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article