Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ದಾವಣಗೆರೆ ಲೋಕಸಭಾ ಕ್ಷೇತ್ರದ ಕಣದಲ್ಲಿ 30 ಅಭ್ಯರ್ಥಿಗಳು  : 7 ವಿಧಾನಸಭಾ ಕ್ಷೇತ್ರಗಳು ಸೇರಿದಂತೆ ಚುನಾವಣೆಯ ಮತದಾರರ ಸಂಪೂರ್ಣ ಮಾಹಿತಿ....!

05:55 PM May 06, 2024 IST | suddionenews
Advertisement

ದಾವಣಗೆರೆ.ಮೇ.5 : ದಾವಣಗೆರೆ ಲೋಕಸಭಾ ಚುನಾವಣಾ ಮತದಾನ ಮೇ 7 ರಂದು ಬೆಳಗ್ಗೆ 7 ರಿಂದ ಸಂಜೆ 6 ಗಂಟೆಯವರೆಗೆ ನಡೆಯಲಿದ್ದು ಚುನಾವಣಾ ಕಣದಲ್ಲಿ 30 ಅಭ್ಯರ್ಥಿಗಳಿದ್ದು ಎಲ್ಲಾ ಕ್ಷೇತ್ರಗಳ ಮಸ್ಟರಿಂಗ್ ಕೇಂದ್ರಗಳಿಂದ ಮತಗಟ್ಟೆಗಳನ್ನು ಹೊತ್ತ ಸಿಬ್ಬಂದಿಗಳು ಮತಗಟ್ಟೆಯನ್ನು ತಲುಪಿದ್ದಾರೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ: ವೆಂಕಟೇಶ್ ಎಂ.ವಿ ತಿಳಿಸಿದ್ದಾರೆ.

Advertisement

ದಾವಣಗೆರೆ ಜಿಲ್ಲೆಯ 7 ವಿಧಾನಸಭಾ ಕ್ಷೇತ್ರ ಸೇರಿ ವಿಜಯನಗರ ಜಿಲ್ಲೆಯ ಹರಪನಹಳ್ಳಿ ವಿಧಾನಸಭಾ ಕ್ಷೇತ್ರವು ದಾವಣಗೆರೆ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡಲಿದೆ. ಕ್ಷೇತ್ರದಲ್ಲಿ 851990 ಪುರುಷ, 857117 ಮಹಿಳೆ, 137 ಇತರೆ ಸೇರಿ 1709244 ಮತದಾರರಿದ್ದು 1946 ಮತಗಟ್ಟೆಗಳಿವೆ.

ಕ್ಷೇತ್ರವಾರು ವಿವರದನ್ವಯ ಜಗಳೂರು 263 ಮತಗಟ್ಟೆಗಳಲ್ಲಿ 100046 ಪುರುಷ, 98759 ಮಹಿಳೆ, 10 ಇತರೆ ಸೇರಿ 198815 ಮತದಾರರಿದ್ದಾರೆ.

Advertisement

ಹರಪನಹಳ್ಳಿ 253 ಮತಗಟ್ಟೆಗಳಲ್ಲಿ 112969 ಪುರುಷ, 110985 ಮಹಿಳೆ ಹಾಗೂ 19 ಇತರೆ ಸೇರಿ 223973 ಮತದಾರರು.

ಹರಿಹರ ಕ್ಷೇತ್ರದ 228 ಮತಗಟ್ಟೆಗಳಲ್ಲಿ 105510 ಪುರುಷ, 106870 ಮಹಿಳೆ, 17 ಇತರೆ ಸೇರಿ 212397 ಮತದಾರರು,

ದಾವಣಗೆರೆ ಉತ್ತರ 245 ಮತಗಟ್ಟೆಗಳಲ್ಲಿ 124485 ಪುರುಷ, 128635 ಮಹಿಳೆ, 36 ಇತರೆ ಸೇರಿ 253156,

ದಾವಣಗೆರೆ ದಕ್ಷಿಣ 217 ಮತಗಟ್ಟೆ, 109184 ಪುರುಷ, 111774 ಮಹಿಳೆ, 39 ಇತರೆ ಸೇರಿ 220997,

ಮಾಯಕೊಂಡ 240 ಮತಗಟ್ಟೆಗಳಲ್ಲಿ 97759 ಪುರುಷ, 97326 ಮಹಿಳೆ, 4 ಇತರೆ ಸೇರಿ 195089, ಚನ್ನಗಿರಿ 255 ಮತಗಟ್ಟೆಗಳಲ್ಲಿ 101653 ಪುರುಷ, 102208 ಮಹಿಳೆ, 9 ಇತರೆ ಸೇರಿ 203870, ಹೊನ್ನಾಳಿ 245 ಮತಗಟ್ಟೆಗಳಲ್ಲಿ 100384 ಪುರುಷ, 100560 ಮಹಿಳೆ, 3 ಇತರೆ ಸೇರಿ 200947 ಮತದಾರರಿದ್ದಾರೆ.

ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 1946 ಮತಗಟ್ಟೆಗಳಿದ್ದು ಇದರಲ್ಲಿ ಪ್ರತಿ ಮತಗಟ್ಟೆಯಲ್ಲಿ ಮತಗಟ್ಟೆ ಅಧ್ಯಕ್ಷಾಧಿಕಾರಿ, ಸಹಾಯಕ ಅಧ್ಯಕ್ಷಾಧಿಕಾರಿ, ಮತಗಟ್ಟೆ ಸಿಬ್ಬಂದಿ 2 ಸೇರಿ ಪ್ರತಿ ಮತಗಟ್ಟೆಗಳಲ್ಲಿ ಭದ್ರತಾ ಸಿಬ್ಬಂದಿ ಹೊರತುಪಡಿಸಿ 4 ಜನ ಮತದಾನ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಾರೆ. ಕ್ಷೇತ್ರದಲ್ಲಿ ಹೆಚ್ಚುವರಿ ಸೇರಿದಂತೆ ಒಟ್ಟು  8996 ಮತದಾನ ಸಿಬ್ಬಂದಿಗಳನ್ನು ನಿಯೋಜಿಸಿದ್ದು ಅವರು ಎಲ್ಲಾ ತಾಲ್ಲೂಕುಗಳ ಮಸ್ಟರಿಂಗ್ ಕೇಂದ್ರದಿಂದ ಇವಿಎಂ ನೊಂದಿಗೆ, ವಿವಿಪ್ಯಾಟ್, ಬ್ಯಾಲೆಟ್ ಯುನಿಟ್ ಸೇರಿದಂತೆ ಶಾಸನಬದ್ದ ಲಕೋಟೆಗಳು, ಶಾಸನಬದ್ದವಲ್ಲದ ಲಕೋಟೆಗಳೊಂದಿಗೆ ಮತಗಟ್ಟೆ ತಲುಪಿದ್ದಾರೆ.

ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ 30 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದು ಬ್ಯಾಲೆಟ್ ಯುನಿಟ್‍ನಲ್ಲಿ 30 ಅಭ್ಯರ್ಥಿಗಳು ಮತ್ತು 1 ನೋಟಾ ಇರುತ್ತದೆ. ಕ್ರಮ ಸಂಖ್ಯೆವಾರು ಅಭ್ಯರ್ಥಿಗಳ ಹೆಸರು, ಪಕ್ಷ, ಚಿಹ್ನೆಯ ವಿವರ;

1. ಗಾಯಿತ್ರಿ ಸಿದ್ದೇಶ್ವರ ಭಾರತೀಯ ಜನತಾ ಪಾರ್ಟಿ ಕಮಲ,
2. ಡಾ. ಪ್ರಭಾ ಮಲ್ಲಿಕಾರ್ಜುನ್, ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಕೈ,
3. ಡಿ.ಹನುಮಂತಪ್ಪ, ಬಹುಜನ ಸಮಾಜ ಪಾರ್ಟಿ ಆನೆ,
4. ಈಶ್ವರ ಶೇಂಗಾ ಉತ್ತಮ ಪ್ರಜಾಕೀಯ ಪಾರ್ಟಿ, ಚಪ್ಪಲಿಗಳು,
5.ಅಣಬೇರು ತಿಪ್ಪೇಸ್ವಾಮಿ, ಸೋಷಿಯಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ ಆಟೋ-ರಿಕ್ಷಾ, 6. ಎಂ.ಪಿ.ಖಲಂದರ್, ಕಂಟ್ರಿ ಸಿಟಿಜನ್ ಪಾರ್ಟಿ, ತೆಂಗಿನ ತೋಟ,
7. ದೊಡ್ಡೇಶಿ ಹೆಚ್.ಎಸ್, ಜನಹಿತ ಪಕ್ಷ, ಸ್ಟೆತೋಸ್ಕೋಪ್,
8.ರುದ್ರೇಶ್ ಕೆ.ಹೆಚ್, ಸಮಾಜ ವಿಕಾಸ ಕ್ರಾಂತಿ ಪಾರ್ಟಿ, ವಿದ್ಯುತ್ ಕಂಬ,
9. ವಿರೇಶ್.ಎಸ್ (ಲಯನ್ ವಿರೇಶ್) ರಾಣಿ ಚೆನ್ನಮ್ಮ ಪಾರ್ಟಿ, ಉಂಗುರ,
10. ಕೆ.ಎಸ್.ವೀರಭದ್ರಪ್ಪ, ಕರ್ನಾಟಕ ರಾಷ್ಟ್ರ ಸಮಿತಿ, ಬ್ಯಾಟರಿ ಟಾರ್ಚ್,
11. ಎಂ.ಜಿ.ಶ್ರೀಕಾಂತ್, ನವಭಾರತ ಸೇನಾ, ಬೆಂಕಿ ಪೆÇಟ್ಟಣ,
12. ಎಂ.ಸಿ.ಶ್ರೀನಿವಾಸ್, ಭಾರತೀಯ ಪ್ರಜಾಗಳ ಕಲ್ಯಾಣ ಪಕ್ಷ, ಏಳು ಕಿರಣಗಳಿರುವ ಪೆನ್ನಿನ ನಿಬ್, ಪಕ್ಷೇತರರಾದ
13. ಅಬ್ದುಲ್ ನಜೀರ್ ಅಹಮದ್, ರೋಡ್ ರೋಲರ್,
14. ಎ.ಕೆ.ಗಣೇಶ್, ಚಕ್ಕಿ, 15. ಜಿ.ಎಂ.ಗಾಯಿತ್ರಿ ಸಿದ್ದೇಶಿ, ಹೂಕೋಸು, 16. ಟಿ.ಚಂದ್ರು, ಗ್ರಾಮಫೋನ್, 17. ಟಿ.ಜಬೀನಾ ಆಪಾ, ಕಲ್ಲಂಗಡಿ, 18. ತಸ್ಲೀಮ್ ಬಾನು, ಬ್ಯಾಟ್, 19. ಪರವೀಜ್ ಹೆಚ್, ವಜ್ರ, 20. ಪೆದ್ದಪ್ಪ.ಎಸ್, ಕೇರಂಬೋರ್ಡ್, 21. ಬರಕತ್ ಅಲಿ, ಅಲಮಾರು, 22. ಜಿ.ಎಂ.ಬರ್ಕತ್ ಅಲಿ ಬಾಶ, ಗಿಫ್ಟ್ ಪ್ಯಾಕ್, 23. ಮಹಬೂಬ್ ಬಾಷ, ಸ್ಪಾನರ್, 24. ಮೊಹ್ಮದ್ ಹಯಾತ್.ಎಂ, ಪಕ್ಷೇತರ ಬ್ಯಾಟ್ಸ್‍ಮನ್, 25. ಮಂಜು ಮಾರಿಕೊಪ್ಪ, ಟ್ರಕ್, 26. ರವಿನಾಯ್ಕ.ಬಿ, ಕರಣೆ, 27. ರಷೀದ್ ಖಾನ್, ದೂರವಾಣಿ, 28. ಜಿ.ಬಿ.ವಿನಯ್ ಕುಮಾರ್, ಗ್ಯಾಸ್ ಸಿಲಿಂಡರ್, 29. ಸಲೀಂ.ಎಸ್, ಪೆನ್‍ಡ್ರೈವ್ ಹಾಗೂ 30. ಸೈಯದ್ ಜಬೀವುಲಾ.ಕೆ, ಬಕೆಟ್ ಚಿಹ್ನೆಯಾಗಿದೆ.

ಮತದಾನಕ್ಕೆ ಪರ್ಯಾಯ ದಾಖಲೆಗಳಿಗೆ ಅವಕಾಶ;

ಮತದಾರರ ಪಟ್ಟಿಯಲ್ಲಿ ಹೆಸರಿದ್ದು ಚುನಾವಣಾ ಗುರುತಿನ ಚೀಟಿ ತೋರಿಸಿ ಮತದಾನ ಮಾಡಬಹುದು. ಇದಲ್ಲದೇ ಆಧಾರ್ ಕಾರ್ಡ್, ನರೇಗಾ ಜಾಬ್ ಕಾರ್ಡ್, ಬ್ಯಾಂಕ್, ಅಂಚೆ ಕಚೇರಿಯಿಂದ ಪಡೆಯಲಾದ ಖಾತೆ ಪುಸ್ತಕದಲ್ಲಿ ಭಾವಚಿತ್ರ ಇದ್ದಲ್ಲಿ, ಕೇಂದ್ರ ಕಾರ್ಮಿಕ ಸಚಿವಾಲಯದಿಂದ ನೀಡಲಾದ ಆರೋಗ್ಯ ವಿಮಾ ಸ್ಮಾರ್ಟ್ ಕಾರ್ಡ್, ಚಾಲನಾ ಪರವಾನಗಿ, ಪಾನ್ ಕಾರ್ಡ್, ಆರ್‍ಜಿಐ ನಿಂದ ನೀಡಲಾದ ಸ್ಮಾರ್ಟ್ ಕಾರ್ಡ್, ಇಂಡಿಯನ್ ಪಾಸ್‍ಪೋರ್ಟ್, ಭಾವಚಿತ್ರವಿರುವ ಪೆನ್ಷನ್ ದಾಖಲೆ, ಸರ್ಕಾರಿ, ಅರೆ ಸರ್ಕಾರಿ, ಸಾರ್ವಜನಿಕ ಉದ್ದಿಮೆಗಳಲ್ಲಿನ ಭಾವಚಿತ್ರವಿರುವ ಗುರುತಿನ ಚೀಟಿ, ಅಧಿಕೃತವಾಗಿ ವಿತರಿಸಲಾದ ಲೋಕಸಭಾ, ವಿಧಾನಸಭಾ, ಪರಿಷತ್ ಸದಸ್ಯರ ಐಡಿ, ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯಿಂದ ನೀಡಲಾದ ದಿವ್ಯಾಂಗರ ಗುರುತಿನ ಚೀಟಿಗಳನ್ನು ನೀಡಿ ಮತದಾನ ಮಾಡಬಹುದಾಗಿದೆ.

 

ಮಸ್ಟರಿಂಗ್ ನಡೆದ ಕೇಂದ್ರಗಳು; ಜಗಳೂರು ಸರ್ಕಾರಿ ಪದವಿ ಪೂರ್ವ ಕಾಲೇಜು, ಹರಿಹರ ಸೆಂಟ್ ಮೇರಿಸ್ ಕಾನ್ವೆಂಟ್ ಸ್ಕೂಲ್, ದಾವಣಗೆರೆ ಉತ್ತರ ಡಿ.ಆರ್.ಆರ್.ವಿದ್ಯಾಸಂಸ್ಥೆ, ದಾವಣಗೆರೆ ದಕ್ಷಿಣ ಹೈಸ್ಕೂಲ್ ಮೈದಾನ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜು, ಮಾಯಕೊಂಡ ಮೋತಿ ವೀರಪ್ಪ ಪದವಿ ಪೂರ್ವ ಕಾಲೇಜು, ಚನ್ನಗಿರಿ ಶ್ರೀ ಶ್ರೀ ಶಿವಲಿಂಗೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹೊನ್ನಾಳಿ ಶ್ರೀಮತಿ ಗಂಗಮ್ಮ ಶ್ರೀ ವೀರಭದ್ರಶಾಸ್ತ್ರಿ ಕೈಗಾರಿಕಾ ತರಬೇತಿ ಕೇಂದ್ರ, ಹಿರೇಕಲ್ಮಠ ಇಲ್ಲಿ ಮಸ್ಟರಿಂಗ್ ನಡೆದಿದ್ದು ಜಿಲ್ಲಾಧಿಕಾರಿ ಹಾಗೂ ಚುನಾವಣಾಧಿಕಾರಿ ಡಾ; ವೆಂಕಟೇಶ್ ಎಂ.ವಿ ಅವರು ದಾವಣಗೆರೆ ಉತ್ತರ, ಮಾಯಕೊಂಡ, ಚನ್ನಗಿರಿ, ಹೊನ್ನಾಳಿ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಜಿಲ್ಲಾಧಿಕಾರಿಯವರಿಂದ ಚನ್ನಗಿರಿಯಲ್ಲಿ ಸಖಿಮತಗಟ್ಟೆ ಪರಿಶೀಲನೆ; ಜಿಲ್ಲೆಯಲ್ಲಿ ಪ್ರತಿ ಕ್ಷೇತ್ರದಲ್ಲಿ 5 ಮತಗಟ್ಟೆಗಳನ್ನು ಸಖಿ ಮತಗಟ್ಟೆಯನ್ನಾಗಿ ಮಾಡಿ ಇಲ್ಲಿ ಮಹಿಳಾ ಸಿಬ್ಬಂದಿಗಳಿಂದ ನಿರ್ವಹಿಸಲ್ಪಡುವ ಮತಗಟ್ಟೆ ಇದಾಗಿದ್ದು ಎಲ್ಲಾ ಪಿಂಕ್ ಬಣ್ಣದಿಂದ ಕೂಡಿರುತ್ತದೆ. ಪಿಂಕ್ ಬಣ್ಣದಿಂದ ಸಿಂಗಾರಗೊಂಡಿರುವ ಮತಗಟ್ಟೆ, ಮತಗಟ್ಟೆಯಲ್ಲಿನ ಸಿಬ್ಬಂದಿಗಳು ಸಹ ಪಿಂಕ್ ಬಣ್ಣದ ಸ್ಯಾರಿಯನ್ನು ಧರಿಸಿರುತ್ತಾರೆ. ಚನ್ನಗಿರಿ ಪಟ್ಟಣದ ಬಿ.ಇ.ಓ ಕಚೇರಿ ಹಿಂಭಾಗದ  ಸರ್ಕಾರಿ ಸಂಯುಕ್ತ ಬಾಲಕಿಯರ ಪ್ರೌಢಶಾಲೆಯಲ್ಲಿ ಇರುವ 169 ಮತಗಟ್ಟೆಯನ್ನು ಸಖಿ ಮತಗಟ್ಟೆಯನ್ನಾಗಿ ನಿರ್ಮಾಣ ಮಾಡಿಲಾಗಿದೆ. ಇಲ್ಲಿ ಪುರುಷ 608, ಮಹಿಳೆ 636 ಸೇರಿ ಒಟ್ಟು 1244 ಮತದಾರರಿದ್ದಾರೆ.

ವಿಶೇಷಚೇತನರ ಮತಗಟ್ಟೆ ಸಿಬ್ಬಂದಿಗಳಿಗೆ ವಿಶೇಷ ಗೌರವ; ಜಿಲ್ಲೆಯಲ್ಲಿ ತಲಾ 1 ಕ್ಷೇತ್ರದಲ್ಲಿ 1 ರಂತೆ ವಿಶೇಷಚೇತನರ ಮತಗಟ್ಟೆಯನ್ನು ಸ್ಥಾಪಿಸಲಾಗಿದ್ದು ಇಲ್ಲಿನ ಮತಗಟ್ಟೆ ಸಿಬ್ಬಂದಿಗಳು ವಿಶೇಷಚೇತನರಾಗಿರುತ್ತಾರೆ.

ಇವರಿಗೆ ವಿಶೇಷ ವಾಹನ ಸೌಲಭ್ಯ ಕಲ್ಪಿಸಿದ್ದು ಇನ್ನೋವಾ ವಾಹನ ನೀಡಲಾಗಿದೆ. ಮತ್ತು ಮಸ್ಟರಿಂಗ್ ಮತ್ತು ಡಿ.ಮಸ್ಟರಿಂಗ್‍ನಲ್ಲಿ ಇವರಿಗೆ ಮೊದಲ ಆದ್ಯತೆಯನ್ನು ನೀಡಲಾಗುತ್ತದೆಯಲ್ಲದೇ ಬಹಳ ಗೌರವಯುತವಾಗಿ ನಡೆಸಿಕೊಳ್ಳುವ ಮೂಲಕ ಜಿಲ್ಲಾಧಿಕಾರಿಯವರು ದಾವಣಗೆರೆ ಉತ್ತರ ಕ್ಷೇತ್ರದ ವಿಶೇಷಚೇತನರ ಮತಗಟ್ಟೆ ಸಿಬ್ಬಂದಿಗಳಿಗೆ ಹೂವಿನಹಾರ ಹಾಕುವ ಮೂಲಕ ಗೌರವಪೂರ್ವಕವಾಗಿ ಮತಗಟ್ಟೆಗೆ ಕಳುಹಿಸಿಕೊಟ್ಟರು.

Advertisement
Tags :
30 candidates30 ಅಭ್ಯರ್ಥಿಗಳು7 assembly constituencies7 ವಿಧಾನಸಭಾ ಕ್ಷೇತ್ರComplete informationDavangere Lok Sabha Constituencyvotersಇಲ್ಲಿದೆ ಸಂಪೂರ್ಣ ಮಾಹಿತಿಚುನಾವಣೆಯ ಮತದಾರರದಾವಣಗೆರೆಲೋಕಸಭಾ ಕ್ಷೇತ್ರದ
Advertisement
Next Article